ತಾಲೂಕಿನಲ್ಲಿ ಒಟ್ಟು 15 ಮಂದಿ ಭೂಮಾಪಕರು ಕಾರ್ಯನಿರ್ವಹಿಸುತ್ತಿದ್ದು, ಎಲ್ಲರೂ ಕರ್ತವ್ಯದಿಂದ ದೂರ ಉಳಿದಿರುವುದರಿಂದ ಸಾವಿರಾರು ಅರ್ಜಿಗಳು ಕಚೇರಿಯಲ್ಲೇ ಬಾಕಿ ಉಳಿದಿವೆ. 11ಇ&ಸ್ಕೆಚ್, ತತ್ಕಾಲ್ ಪೋಡಿ, ಹದ್ದುಬಸ್ತು, ದರಖಾಸ್ತು ಸೇರಿ ವಿವಿಧ ವಿಭಾಗಗಳಲ್ಲಿ ಸಾವಿರಕ್ಕೂ ಹೆಚ್ಚು ಅರ್ಜಿಗಳು ವಿಲೇವಾರಿಯಾಗದೆ ಉಳಿದಿವೆ ಎಂದು ಇಲಾಖೆಯ ಮೇಲ್ವಿಚಾರಕರು ತಿಳಿಸಿದ್ದಾರೆ.