ಅಭಿವೃದ್ಧಿ ಕಾರ್ಯಕ್ಕೆ ರೈತರು ಸಹಕರಿಸಿ

Farmers should cooperate with development work.
Farmers should cooperate with development work.
Published on
ಬೇತಮಂಗಲ: ಹಿಂದಿನ ಕಾಲದಲ್ಲಿ ನಿಮಾರ್ಣವಾಗಿದ್ದ ಸೇತುವೆ ದುಸ್ಥಿತಿಗೆ ತಲುಪಿದ್ದು, ಸೇತುವೆ ಮೇಲಿನ ರಸ್ತೆ ಕೇವಲ ಒಂದು ಎತ್ತಿನ ಗಾಡಿ ಸಂಚರಿಸುವಷ್ಟು ಮಾತ್ರ ಅಗಲವಿತ್ತು. ಇದೀಗ ಬೃಹತ್​ ವಾಹನಗಳು ಕೂಡ ಸಂಚರಿಸುವ ರೀತಿ ಸೇತುವೆ ನಿಮಾರ್ಣ ಮಾಡಲಾಗುತ್ತದೆ ಎಂದು ಶಾಸಕಿ ರೂಪಕಲಾ ಹೇಳಿದರು.
ಕೆಜಿಎ್​ ತಾಲೂಕು ಬೇತಮಂಗಲದ ತಾತರೆಡ್ಡಿಹಳ್ಳಿ ಸಮೀಪ ಸುಮಾರು 9.5 ಕೋಟಿ ರೂ. ವೆಚ್ಚದ ನೂತನ ಸೇತುವೆ ನಿಮಾರ್ಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಪ್ರಸ್ತುತ ರೈತರ ಬೆಳೆ ಸಾಗಣೆ ವಾಹನಗಳು, ಶಾಲಾ ವಾಹನಗಳು, ಭಾರಿ ವಾಹನಗಳು ಏಕಕಾಲದಲ್ಲಿ ಸಂಚರಿಸಲು ಹಳೆಯ ಸೇತುವೆ ಅಡ್ಡಿಯಾಗುತ್ತಿತ್ತು. ಸಾರ್ವಜನಿಕರ ಒತ್ತಾಸೆಯಂತೆ 9.5 ಕೋಟಿ ರೂ. ವೆಚ್ಚದಲ್ಲಿ 12 ಮೀಟರ್​ ಅಗಲದ ಸುಸಜ್ಜಿತ ಸೇತುವೆ ನಿಮಾರ್ಣ ಮಾಡಲಾಗುತ್ತಿದ್ದು, ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಯ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.
ಹಳೇ ಸೇತುವೆ ಶಿಥಿಲಗೊಂಡಿದ್ದು, ತೆರವುಗೊಳಿಸಿದರೆ ಮಳೆಗಾಲದಲ್ಲಿ ಸಾರ್ವಜನಿಕರಿಗೆ ಪರ್ಯಾಯ ಮಾರ್ಗದ ವ್ಯವಸ್ಥೆ ಕಷ್ಟವಾಗುತ್ತದೆ. ಇದರಿಂದಾಗಿ ಮೊದಲು ನೂತನ ಸೇತುವೆ ನಿರ್ಮಿಸಿ, ನಂತರ ಹಳೆ ಸೇತುವೆ ತೆರವುಗೊಳಿಸಲಾಗುವುದು. ಈ ಅಭಿವೃದ್ಧಿ ಕಾರ್ಯಕ್ಕೆ ಎರಡೂ ಕಡೆಯ ರೈತರು ಸಹಕಾರ ನೀಡಬೇಕು ಎಂದು ಶಾಸಕರು ಮನವಿ ಮಾಡಿದರು.
ಕಾಮಗಾರಿಯ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು ಮತ್ತು ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಗುತ್ತಿಗೆದಾರರು, ಇಂಜಿನಿಯರ್​ಗಳಿಗೆ ಸೂಚಿಸಿದರು.
ಗ್ರಾಪಂ ಮಾಜಿ ಅಧ್ಯಕ್ಷರಾದ ಚಂದ್ರಪ್ಪ, ವಿನು ಕಾರ್ತಿಕ್​, ರಮಾದೇವಿ, ಮುರಳಿ, ಸುವರ್ಣ ವೆಂಕಟರಾಮ್​, ವೆಂಕಟೇಶ್​, ಅಪ್ಪೋಜಿಗೌಡ, ಎಂಬಿಎ ಕೃಷ್ಣಪ್ಪ, ವೆಂಕಟರಾಮ್​ ರಾಜಕುಮಾರ್​, ಮುನಿಸ್ವಾಮಿರೆಡ್ಡಿ, ಮುನೇಗೌಡ, ಮಂಜುನಾಥ್​ ಪಟ್ಟಾಬಿ, ಶ್ರೀನಿವಾಸ್​ ರೆಡ್ಡಿ, ಗಂಗಿರೆಡ್ಡಿ, ಮುನಿರೆಡ್ಡಿ, ಪುರುಷೋತ್ತಮ್​ ನಾಯ್ಡು, ಕೋದಂಡಪ್ಪ, ಶ್ರೀರಾಮರೆಡ್ಡಿ, ದಶರತ್​ ರೆಡ್ಡಿ, ಎತೂರು ಚಂದ್ರು, ಚಂದ್ರಪ್ಪ,ದೇವರಾಜ್​ ರೆಡ್ಡಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net