ಹೊಸೂರಿನಲ್ಲಿ ರೈತರ ಪ್ರತಿಭಟನೆ / HOSURU

ಪ್ರತಿಭಟನಾನಿರತ ರೈತರನ್ನು ಬಂಧಿಸಿದ ತಮಿಳುನಾಡು ಸರ್ಕಾರದ ಕ್ರಮ ವಿರೋಧಿಸಿ ವಿವಿಧ ರೈತ ಸಂದ ಮುಖಂಡರು ಹೊಸೂರಿನಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾನಿರತ ರೈತರನ್ನು ಬಂಧಿಸಿದ ತಮಿಳುನಾಡು ಸರ್ಕಾರದ ಕ್ರಮ ವಿರೋಧಿಸಿ ವಿವಿಧ ರೈತ ಸಂದ ಮುಖಂಡರು ಹೊಸೂರಿನಲ್ಲಿ ಪ್ರತಿಭಟನೆ ನಡೆಸಿದರು.
Published on
ಹೊಸೂರು: ಬೆಂಗಳೂರು ನಗರದ ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ ಹೊಸೂರು ಹೊರವಲಯದಲ್ಲಿ ರಿಂಗ್​ ರಸ್ತೆ ನಿರ್ಮಾಣ ಹಾಗೂ ಇದಕ್ಕೆ ಸಮೀಪದಲ್ಲೇ ರಾಜ್ಯ ಸರ್ಕಾರ ಏರ್​ಪೋರ್ಟ್​ ನಿರ್ಮಿಸಲು ಮುಂದಾಗಿರುವುದನ್ನು ವಿರೋಧಿಸಿ ಸ್ಥಳಿಯ ರೈತರು ಪ್ರತಿಭಟನೆ ನಡೆಸಿದರು.
ವಿವಿಧ ರಾಜಕೀಯ ನಾಯಕರ ಕಚೇರಿಗಳಿಗೆ ಭೇಟಿ ನೀಡಿದ ರೈತರನ್ನು ಅಡ್ಡಗಟ್ಟಿದ ಪೊಲೀಸರು ಪ್ರತಿಭಟನೆ ಹತ್ತಿಕ್ಕಲು ಯತ್ನಿಸಿದರು. ಬಿಎಂಕೆ ಪ್ರಧಾನ ಕಚೇರಿ ಬಳಿ ಬಂದ ಪ್ರತಿಭಟನಾಕಾರನ್ನು ವಶಕ್ಕೆ ಪಡೆದ ಪೊಲೀಸರು, ಕಲ್ಯಾಣ ಮಂಟಪವೊಂದರಲ್ಲಿ ಇರಿಸಿದರು. ಇದನ್ನು ಖಂಡಿಸಿ ನಗರದಲ್ಲಿ 300ಕ್ಕೂ ಹೆಚ್ಚು ರೈತರು ಪ್ರತಿಭಟನೆ ನಡೆಸಿದರು. ವಶಕ್ಕೆ ಪಡೆದ ರೈತರನ್ನು ಬಿಡುಗಡೆ ಮಾಡಬೇಕು, ಇಲ್ಲವಾದರೆ ರಾಜ್ಯಾದ್ಯಂತ ರೈತರು ಉಗ್ರ ಹೋರಾಟ ಹಮ್ಮಿಕೊಳ್ಳಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.
ರೈತರ ಸಂಘದ ಮುಖಂಡರಾದ ಮುನಿ ವೆಂಕಟಪ್ಪ, ಪಿಎಂಕೆ ಪಕ್ಷದ ಮುಖಂಡರಾದ ಮುನಿರಾಜ್​, ವ್ಯವಸಾಯ ಸಂಘದ ಮುಖಂಡರಾದ ರವೀಂದ್ರನಾಥ ರೆಡ್ಡಿ, ನರಸಿಂಹಪ್ಪ, ಮುರಳಿ ಅರುಣ್​, ತಮಿಳುನಾಡು ರೈತರ ಭದ್ರತಾ ಸಂಘದ ಜಿಲ್ಲಾಧ್ಯಕ್ಷ ಗಣೇಶ್​ ರೆಡ್ಡಿ, ಸುರೇಶ್​ ಸೇರಿದಂತೆ ಹಲವಾರು ಮುಖಂಡರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net