ಕೃಷಿಯಲ್ಲಿ ರೈತರು ಬದಲಾವಣೆ ತನ್ನಿ

ಶಹಾಪುರ ತಾಲೂಕಿನ ಭೀ.ಗುಡಿ ಕೃಷಿ ವಿದ್ಯಾಲಯದಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ವಾಣಿಜ್ಯ ಮೇಳವನ್ನು ಮಂಡಳಿ ಅಧ್ಯ ಶರಣಪ್ಪ ಸಲಾದಪುರ ಉದ್ಘಾಟಿಸಿದರು. ಜಿಪಂ ಸಿಇಒ ಲವೀಶ್​ ಒರ್ಡಿಯಾ, ಶಾಮರಾವ್​ ಜಹಾಗೀರದಾರ, ಕೃಷಿ ವಿಾನಿ ಡಾ.ಜಯಪ್ರಕಾಶ ನಾರಾಯಣ, ಸುನೀಲಕುಮಾರ, ರಾಜಕುಮಾರ ಇತರರಿದ್ದರು.
ಶಹಾಪುರ ತಾಲೂಕಿನ ಭೀ.ಗುಡಿ ಕೃಷಿ ವಿದ್ಯಾಲಯದಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ವಾಣಿಜ್ಯ ಮೇಳವನ್ನು ಮಂಡಳಿ ಅಧ್ಯ ಶರಣಪ್ಪ ಸಲಾದಪುರ ಉದ್ಘಾಟಿಸಿದರು. ಜಿಪಂ ಸಿಇಒ ಲವೀಶ್​ ಒರ್ಡಿಯಾ, ಶಾಮರಾವ್​ ಜಹಾಗೀರದಾರ, ಕೃಷಿ ವಿಾನಿ ಡಾ.ಜಯಪ್ರಕಾಶ ನಾರಾಯಣ, ಸುನೀಲಕುಮಾರ, ರಾಜಕುಮಾರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಂಯಮ ಮಂಡಳಿ ಅಧ್ಯಕ್ಷ ಸಲಾದಪುರ ಸಲಹೆ
  • ಭೀ.ಗುಡಿ ಕೃಷಿ ಕಾಲೇಜಿನಲ್ಲಿ ವಾಣಿಜ್ಯ ಮೇಳ
ಶಹಾಪುರ: ಕೃಷಿಯಲ್ಲಿ ಹಿಂದಿನ ಪದ್ಧತಿ ಅನುಸಾರ ಕೃಷಿ ಮಾಡುವ ಬದಲಿಗೆ ಕೃಷಿ ಇಲಾಖೆ ಅಧಿಕಾರಿಗಳ ಮಾಹಿತಿ ಪಡೆದು ರೈತರು ಕೃಷಿಯಲ್ಲಿ ಮತ್ತಷ್ಟು ಬದಲಾವಣೆ ತರಲು ಪ್ರಯತ್ನಿಸಬೇಕು ಎಂದು ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದಪುರ ಹೇಳಿದರು.
ಭೀಮರಾಯನ ಗುಡಿ ಕೃಷಿ ಮಹಾವಿದ್ಯಾಲಯದಲ್ಲಿ ಜಿಲ್ಲಾಡಳಿತ, ಜಿಪಂ, ಕೃಷಿ ಇಲಾಖೆ ಮತ್ತು ಜಿಲ್ಲಾ ಕೃಷಿಕ ಸಮಾಜದಿಂದ ಸೋಮವಾರ ಹಮ್ಮಿಕೊಂಡ ಜಿಲ್ಲಾಮಟ್ಟದ ವಾಣಿಜ್ಯ ಮೇಳ&2026 ಉತ್ಪಾದನೋತ್ತರ ಕೃಷಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕೃಷಿ ವಿಾನಿಗಳ ಸಲಹೆ ಪಡೆದು ಕೃಷಿ ಮಾಡಿದರೆ ರೈತರು ಆರ್ಥಿಕವಾಗಿ ಇನ್ನಷ್ಟು ಗಟ್ಟಿಯಾಗಲು ಸಾಧ್ಯ ಎಂದು ಹೇಳಿದರು.
ಕ್ರಿಮಿನಾಶಕ ಬಳಸಿ ಬೆಳೆಗಳನ್ನು ಬೆಳೆಯುತ್ತಿರುವುದರಿಂದ ನಮ್ಮ ಭೂಮಿ ಹಾಳಾಗುತ್ತಿದೆ. ಹೀಗಾಗಿ ನಾವುಗಳು ಭೂಮಿಯ ಫಲವತ್ತತೆಗೆ ಹಾನಿಯಾಗದಂತೆ ಸಾವಯವ ಪದ್ಧತಿ ಅನುಸಾರ ಕೃಷಿ ಮಾಡಬೆಕಾಗಿದೆ ಎಂದು ಹೇಳಿದರು.
ಆ ನಿಟ್ಟಿನಲ್ಲಿ ಸರ್ಕಾರದ ಹಲವು ಯೋಜನೆಗಳ ಸಹಾಯ ಸಹಕಾರದಿಂದ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಲ್ಲಿ ನಾವುಗಳು ಬೆಳೆದ ಧಾನ್ಯಗಳು ಹೊರ ದೇಶಗಳಿಗೂ ರಫ್ತು ಮಾಡಬಹು. ಅಂತಹ ತಂತ್ರಜ್ಞಾನ, ಯಂತ್ರೋಕರಣಗಳು ಮತ್ತು ಹೊಸ ಹೊಸ ಆವಿಷ್ಕಾರಗೊಂಡ ಕೃಷಿ ನೀತಿಗಳು ಕೃಷಿ ವಿಾನಿಗಳಿಂದ, ತರಿಂದ ಮಾಹಿತಿ ಪಡೆದುಕೊಂಡು ರೈತರು ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಪಂ ಸಿಇಒ ಲವೀಶ್​ ಒರ್ಡಿಯಾ, ಕೃಷಿ ಮಹಾವಿದ್ಯಾಲಯ ಡೀನ್​ ಡಾ.ಶಾಮರಾವ್​ ಜಹಾಗೀರದಾರ ಮಾತನಾಡಿದರು. ಕೃಷಿ ವಿಾನಿ ಡಾ.ಜಯಪ್ರಕಾಶ ನಾರಾಯಣ, ವಿವಿಧ ತಾಲೂಕುಗಳ ಎಡಿಗಳಾದ ಸುನೀಲಕುಮಾರ, ರಾಜಕುಮಾರ ಸೇರಿ ಇತರರಿದ್ದರು. ಈ ವೇಳೆ ಕೃಷಿ ಸಾಧನೆ ಮಾಡಿದವರನ್ನು ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net