Farmers and workers are the real creators of history.
Published on:
Copied
Follow Us
ವಿಜಯಪುರ:
ಪ್ರಸ್ತುತ ದಿನಗಳಲ್ಲಿ ಕೃಷಿ ೇತ್ರದಲ್ಲಿ ಜಮೀನಿನ ಫಲವತ್ತತೆ ಮತ್ತು ಉತ್ತಮ ಇಳುವರಿ ಕಾಯ್ದುಕೊಳ್ಳಲು ರೈತರಿಗೆ ವೈಜ್ಞಾನಿಕ ಹಾಗೂ ಸಾವಯವ ಕೃಷಿ ಪದ್ಧತಿಯತ್ತ ಆಲೋಚನೆ ಮಾಡುವುದು ಅಗತ್ಯ ಎಂದು ಲಾಲ್ಬಾಗ್ನ ತೋಟಗಾರಿಕಾ ಇಲಾಖೆಯ ನಿವೃತ್ತ ನಿರ್ದೇಶಕ ಸಂತೆ ನಾರಾಯಣಸ್ವಾಮಿ ತಿಳಿಸಿದರು.
ಪಟ್ಟಣದ ಸಮೀಪದ ಎಸ್.ಎನ್.ಫಾಮ್ರ್'ನ ಕ್ರುಂಬಿಗಲ್ ಕುಟೀರದಲ್ಲಿ ಆಯೋಜಿಸಲಾಗಿದ್ದ "ರೈತ ಹಾಗೂ ಇತಿಹಾಸ ಉಳಿಸೋಣ' ಕಾರ್ಯಕ್ರಮದಲ್ಲಿ ಮಾತನಾಡಿದರು.
.
ಇತಿಹಾಸಕಾರ ಡಾ.ದೇವರಕೊಂಡಾರೆಡ್ಡಿ ಮಾತನಾಡಿ, ಇತಿಹಾಸವೆಂಬುದು ಕೇವಲ ನಮ್ಮ ಮನಸ್ಸಿನ ಯೋಚನೆ ಅಥವಾ ಕಲ್ಪನೆಯಲ್ಲ, ಅದು ಆಯಾ ಕಾಲಟ್ಟದ ಜೀವಂತ ಸಾ. ಅದನ್ನು ಸರಿಯಾಗಿ ಅರ್ಥೈಸಿಕೊಳ್ಳದೆ ಮತ್ತು ವೈಜ್ಞಾನಿಕವಾಗಿ ಸಂಶೋಧಿಸದೆ ಕೆಲವರು ಇತಿಹಾಸವನ್ನು ತಿರುಚುವ ಅಥವಾ ಬಲವಂತವಾಗಿ ತುರುಕಲು ಯತ್ನಿಸುತ್ತಿದ್ದಾರೆ. ಇದು ಹೊಸ ಪೀಳಿಗೆಗೆ ತಪ್ಪು ಮಾಹಿತಿ ನೀಡಿದಂತಾಗುತ್ತದೆ ಎಂದರು.
ವಿಜಯಪುರ ಸುತ್ತಮುತ್ತ ಹಾಗೂ ಶಿಡ್ಲಟ್ಟ ತಾಲೂಕಿನ ವಿವಿಧೆಡೆ ಸಂಚರಿಸಿ, 30ಕ್ಕೂ ಹೆಚ್ಚು ಅಪರೂಪದ ಶಾಸನಗಳು ಹಾಗೂ ಐತಿಹಾಸಿಕ ಮಾಹಿತಿಗಳನ್ನು ಹೆಕ್ಕಿ ತೆಗೆದು ಇತಿಹಾಸ ಸಂರಕ್ಷಣೆಗೆ ಶ್ರಮಿಸಿದ ತ್ಯಾಗರಾಜ್ ಅವರನ್ನು ಸನ್ಮಾನಿಸಲಾಯಿತು.