ಎಲ್‌ಒಸಿ ಅಮಾನತುಗೊಳಿಸಿ ಆದೇಶ ಮಾಡಿದ ಮೇಲೆ ಅದನ್ನು ಹಿಂಪಡೆಯುವಂತೆ ಮಾಡುವುದು ಸಕ್ಷಮ ಪ್ರಾಧಿಕಾರದ ತುರ್ತು ಕೆಲಸವಾಗಿದೆ. ಅದಾಗ್ಯೂ, ನ್ಯಾಯಾಲಯದ ಆದೇಶಗಳ ಹೊರತಾಗಿಯೂ ಎಲ್‌ಒಸಿ ಜಾರಿ ಕೇಳುವ ಅಧಿಕಾರಿಗಳು ಅದಕ್ಕೆ ಮುಕ್ತಾಯ ಹಾಡಲು ಯಾವುದೇ ಕ್ರಮಕೈಗೊಳ್ಳುವುದಿಲ್ಲ, ಅದನ್ನು ಹಿಂಪಡೆಯುವ ಸಂಬಂಧ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ನ್ಯಾಯಾಲಯ ನಿರ್ದೇಶಿಸಿದೆ.