ಶಾಸಕರ ವಿರುದ್ಧ ಸುಳ್ಳು ಆರೋಪ ಸಲ್ಲ / NELAMANGAL

ಸುದ್ದಿಗೋಷ್ಠಿಯಲ್ಲಿ ನೆ.ಯೋ.ಪ್ರಾಧಿಕಾರ ಸದಸ್ಯ ಬಿನ್ನಮಂಗಲ ವೆಂಕಟೇಶ್​ ಮಾತನಾಡಿದರು. ನಗರಸಭೆ ಸದಸ್ಯ ನರಸಿಂಹಮೂರ್ತಿ, ಅರುಂಧತಿ ಸಂಘದ ಅಧ್ಯಕ್ಷ ಕಾರೇಹಳ್ಳಿ ಹನುಮಂತರಾಯಪ್ಪ, ಕಾಂಗ್ರೆಸ್​ ಮುಖಂಡ ತ್ಯಾಮಗೊಂಡ್ಲು ವಾಸುದೇವ್​ ಇತರರು ಇದ್ದರು.
ಸುದ್ದಿಗೋಷ್ಠಿಯಲ್ಲಿ ನೆ.ಯೋ.ಪ್ರಾಧಿಕಾರ ಸದಸ್ಯ ಬಿನ್ನಮಂಗಲ ವೆಂಕಟೇಶ್​ ಮಾತನಾಡಿದರು. ನಗರಸಭೆ ಸದಸ್ಯ ನರಸಿಂಹಮೂರ್ತಿ, ಅರುಂಧತಿ ಸಂಘದ ಅಧ್ಯಕ್ಷ ಕಾರೇಹಳ್ಳಿ ಹನುಮಂತರಾಯಪ್ಪ, ಕಾಂಗ್ರೆಸ್​ ಮುಖಂಡ ತ್ಯಾಮಗೊಂಡ್ಲು ವಾಸುದೇವ್​ ಇತರರು ಇದ್ದರು.
Published on

ನೆಲಮಂಗಲ :

ಶಾಸಕರ ಅಭಿವೃದ್ಧಿ ಕಾರ್ಯ ಸಹಿಸದೇ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಕೆಲವರು ಶಾಸಕರ ಬಗ್ಗೆ ಸುಖಾಸುಮ್ಮನೆ ಇಲ್ಲಸಲ್ಲದ ಆರೋಪ ಮಾಡುತ್ತಿರುವುದಕ್ಕೆ ನೆ.ಯೋ.ಪ್ರಾಧಿಕಾರ ಸದಸ್ಯ ಬಿನ್ನಮಂಗಲ ವೆಂಕಟೇಶ್​ ತೀವ್ರವಾಗಿ ಖಂಡಿಸಿದರು.

ನಗರಸಭೆ ವ್ಯಾಪ್ತಿಯ ಅರಿಶಿನಕುಂಟೆ ಬಳಿಯ ಖಾಸಗಿ ಹೋಟೆಲ್​ ಸಭಾಂಗಣದಲ್ಲಿ ದಲಿತ ಮುಖಂಡರು ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಎನ್​. ಶ್ರೀನಿವಾಸ್​ ಶಾಸಕರಾಗಿ ಪಕ್ಷಾತಿತ ಹಾಗೂ ಜಾತ್ಯತಿತವಾಗಿ ಅಭಿವೃದ್ಧಿ ಜತೆಗೆ ಪರಿಶಿಷ್ಟ ಜಾತಿಯವರ ಕಾಲನಿಗಳ ಅಭಿವೃದಿಗ್ಧೆ ವೇಗ ನೀಡಿದ್ದಾರೆ. ಇದನ್ನು ಸಹಿಸದ ದಲಿತ ಸಮುದಾಯದ ಮುಖಂಡರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಶಾಸಕರ ಬಗ್ಗೆ ಆರೋಪ ಮಾಡುತ್ತಿದ್ದಾರೆ. ಸಮಾಜದಲ್ಲಿ ಶಾಂತಿ ಕದಡುತ್ತಿರುವ ಇಂತಹವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ನಗರಸಭೆ ಸದಸ್ಯ ನರಸಿಂಹಮೂರ್ತಿ ಮಾತನಾಡಿ, ನಗರಕ್ಕೆ ಕಾವೇರಿ ನೀರು, ಒಳಚರಂಡಿ, ಚತುಷ್ಪಥ ರಸ್ತೆಗಳು, ಸೋಲೂರು ನೆಲಮಂಗಲಕ್ಕೆ ಸೇರ್ಪಡೆ ಸೇರಿ ಹಲವು ಕಾರ್ಯಗಳನ್ನು ಹಾಲಿ ಶಾಸಕ ಎನ್​.ಶ್ರೀನಿವಾಸ್​ ಮಾಡಿದ್ದಾರೆ. ಆದರೆ, ದಲಿತ ಮುಖಂಡರೊಬ್ಬರು ಶಾಸಕರ ಏಳಿಗೆ ಸಹಿಸದೆ ನಿಂದನೆ ಮಾಡುತ್ತಿದ್ದಾರೆ ಎಂದು ಎಂದು ಆರೋಪಿಸಿದರು.

ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯೆ ನಾಗರತ್ನಮ್ಮ, ಜಿಪಂ ಮಾಜಿ ಸದಸ್ಯ ರಂಗಸ್ವಾಮಿ, ಮುಖಂಡ ತಾಳೆಕೆರೆ ಗಂಗರಾಜು, ರಾಮಾಂಜಿನಪ್ಪ,ತಾಪಂ ಮಾಜಿ ಸದಸ್ಯ ವೀರಣ್ಣ, ಕಾಂಗ್ರೆಸ್​ ಮುಖಂಡರಾದ ವಕೀಲ ವಿಜಯಕುಮಾರ, ಮಲ್ಲೇಶ್​, ಟಿ.ಬೇಗೂರು ಹನುಮಯ್ಯ, ಜ್ಯೋತಿನಗರ ವಾಸು, ಮಾಚನಹಳ್ಳಿ ವೀರಣ್ಣ, ಮೂಗನಹಳ್ಳಿ ನಾಗರಾಜು, ಅರಿಶಿಣಕುಂಟೆ ಮಂಜುನಾಥ್​, ಗೋವೇನಹಳ್ಳಿ ಧರಣೇಶ್​, ಹೊನ್ನೇನಹಳ್ಳಿ ನರಸಿಂಹಮೂರ್ತಿ, ಟಗರು ಶಿವು, ಹನುಮಂತರಾಜು, ಸಿದ್ದರಾಮಯ್ಯ, ಚಿಕ್ಕಪೂಜಗಯ್ಯ, ರಾಮಾಂಜನಯ್ಯ, ಮರಿಯಪ್ಪ, ಕೇಶವಮೂರ್ತಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net