ಐಷಾರಾಮಿ ಜೀವನದ ಹುಚ್ಚು; ಕ್ಲಾಸ್ಮೇಟ್ನ್ನೇ ಕಿಡ್ನ್ಯಾಪ್ ಮಾಡಿ, ಹಣಕ್ಕೆ ಬೇಡಿಕೆ; 2 ಗಂಟೆಯಲ್ಲಿ ಯುವತಿಯನ್ನು ರಕ್ಷಿಸಿದ ಪೊಲೀಸರು..Bengaluru
AI Image
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಐಷಾರಾಮಿ ಜೀವನಕ್ಕಾಗಿ ಯುವತಿಯನ್ನ ಅಪಹರಿಸಿದ ಯುವಕರು
ಮೊಹಂತಿ ಎಂಬ ಯುವತಿಯನ್ನು ಮುಂದಿಟ್ಟುಕೊಂಡು ಹಣಕ್ಕೆ ಬೇಡಿಕೆ
ಪ್ರಕರಣ ಬೆಳಕಿಗೆ ಬಂದ 2 ಗಂಟೆ ಒಳಗೆ ಆರೋಪಿಗಳನ್ನು ಬಂಧಿಸಿದ ಪೊಲೀಸರು
ಬೆಂಗಳೂರು: ಝೆನ್-ಜಿಗಳಿಗೆ ಐಷರಾಮಿ ಬದುಕು ಕಟ್ಟಿಕೊಳ್ಳಬೇಕು ಎನ್ನುವ ಹಂಬಲ. ಹೀಗಾಗಿ ಅಡ್ಡದಾರಿಯಲ್ಲಾದರೂ ಸರಿ ಹಣ ಮಾಡಬೇಕು, ಶ್ರೀಮಂತರಾಗಬೇಕು ಎನ್ನುವುದೇ ಟಾರ್ಗೆಟ್. ಹೀಗಾಗಿ, ಸೈಬರ್ ವಂಚನೆ, ಮೋಸ, ಕಳ್ಳತನದ ಹಾದಿಯನ್ನು ಹಿಡಿದಿದ್ದಾರೆ. ಇದೇ ರೀತಿಯ ಘಟನೆಯೊಂದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ರಾತ್ರೋರಾತ್ರಿ ಶ್ರೀಮಂತರಾಗುವ ನಿಟ್ಟಿನಲ್ಲಿ ತನ್ನದೇ ಕಾಲೇಜಿನ ಸಹಪಾಠಿಯನ್ನು ಕಿಡ್ನ್ಯಾಪ್(Girl Kidnapped) ಮಾಡಿದ್ದ ಪ್ರಕರಣವನ್ನು ಮಡಿವಾಳ ಠಾಣೆಯ ಪೊಲೀಸರು ಬೇಧಿಸಿದ್ದಾರೆ.
ಬಿಹಾರ, ಜಮ್ಶಡ್ ಪುಡ, ಕೇರಳ ಹಾಗೂ ಬೆಂಗಳೂರಿನ ಮೂಲದ ಆದಿತ್ಯ ಬೋನ್ಸ್ಲೆ, ಶೌರ್ಯ ಅಗರ್ ವಾಲ್, ಸೈಯದ್ ಬಿಲಾಲ್, ನಿಕುಂಜ್ ಒಡಿಶಾ ಬಂಧಿತ ಆರೋಪಿಗಳು. ಒಡಿಶಾ ಮೂಲದ 19 ವರ್ಷದ ಮೊಹಂತಿ ಎನ್ನುವ ಯುವತಿಯನ್ನು ಕಿಡ್ನ್ಯಾಪ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಆರೋಪಿಗಳು ಮತ್ತು ಸಂತ್ರಸ್ತ ಯುವತಿ ಕಾಲೇಜಿನ ವಸತಿ ಕಟ್ಟಡದಲ್ಲೇ ವಾಸವಾಗಿದ್ದರು ಎನ್ನಲಾಗಿದೆ. ಹೀಗಾಗಿ ಗೊತ್ತಿರುವವರನ್ನೇ ಅಪಹರಣ ಮಾಡಿದ್ದಾರೆ. ಮೊಹಂತಿಯನ್ನು ಕಿಡ್ನ್ಯಾಪ್ ಮಾಡಿದ ವಿಚಾರ ಪೊಲೀಸರಿಗೆ ತಿಳಿದ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಿ, ಯುವತಿಯನ್ನು ರಕ್ಷಿಸಿದ್ದಾರೆ ಎಂದು ಹೇಳಲಾಗಿದೆ.
ಏನಿದು ಘಟನೆ?
ರಿಷಭ್ ಮೊಹಂತಿ ಎಂಬ 19 ವರ್ಷದ ಯುವತಿ. ಈಕೆ ಜೈನ್ ಡೀಮ್ಡ್-ಟು-ಬಿ ವಿಶ್ವವಿದ್ಯಾಲಯದಲ್ಲಿ ಪ್ರಥಮ ವರ್ಷದ ಮ್ಯಾನೇಜ್ಮೆಂಟ್ ಸ್ಟಡೀಸ್ ಮಾಡುತ್ತಿದ್ದಳು. ಆಕೆ ನೀಡಿದ ದೂರಿನ ಪ್ರಕಾರ, ಸಂಜೆ 7:50ರಿಂದ 8:15ರ ನಡುವೆ ಕಾಲೇಜಿನ ಹೊರಾಂಗಣದಲ್ಲಿದ್ದಳು. ಆಗ ಅಲ್ಲಿಗೆ ಟಾಟಾ ಟಿಯಾಗೋದಲ್ಲಿ ಬಂದ ಕೆಲ ಯುವಕರು ಅವರನ್ನು ಬಲವಂತಾಗಿ ಕಾರಿಗೆ ಹತ್ತಿಸಿಕೊಂಡಿದ್ದಾರೆ.
ಸ್ನೇಹಿತರ ಬಳಿ ಹಣಕ್ಕೆ ಬೇಡಿಕೆ
ಹಳೆಯ ಕೋಣೆಯೊಂದರಲ್ಲಿ ಅವರನ್ನು ಕೂಡಿ ಹಾಕಿ 50 ಸಾವಿರಕ್ಕೆ ಬೇಡಿಕೆ ಇಟ್ಟಿದ್ದಾರೆ. ಮೊಹಂತಿ ಸ್ನೇಹಿತರು ಆಕೆಗೆ ಏನು ಮಾಡಿಬಿಡುತ್ತಾರೋ ಎನ್ನುವ ಭಯದಿಂದ ಮೊದಲು ಭಯಪಟ್ಟು 10ಸಾವಿರ ಪಾವತಿ ಮಾಡಿದ್ದಾರೆ. ಆನಂತರ 112 ಗೆ ಕರೆ ಮಾಡಿ ದೂರು ನೀಡಿದ್ದಾರೆ. ಮಡಿವಾಳ ಪೊಲೀಸರು ಸ್ಥಳದ ಮಾಹಿತಿ ಪಡೆದು, ಕಾರ್ಯಾಚರಣೆ ನಡೆಸಿದ್ದಾರೆ. ಬರೋಬ್ಬರಿ 2 ಗಂಟೆಯಲ್ಲಿ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ ಎನ್ನಲಾಗಿದೆ.
ಆರೋಪಿಗಳಿದ್ದ ಸ್ಥಳದ ಮೇಲೆ ಪೊಲೀಸರು ದಾಳಿ ಮಾಡಿದಾಗ ಅಲ್ಲಿ ಅವರಿಗೆ ನಕಲಿ ಲೋಹದ ಗನ್, ಚಾಕು ಸಿಕ್ಕಿವೆ. ಇದರ ಜೊತೆಗೆ ಕಿಡ್ನ್ಯಾಪ್ಗೆ ಬಳಸಿದ್ದ ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಡಿಸಿಪಿ ಮೊಮ್ಮದ್ ಸುಜೀತಾ ಎಂಎಸ್ ಮಾತನಾಡಿ, ಯುವತಿ ಕಾಲೇಜಿನ ಬಳಿ ಇರುವಾಗ ಸುಮಾರು ರಾತ್ರಿ 8:45ಕ್ಕೆ ಯುವತಿಯನ್ನು ಕಿಡ್ನ್ಯಾಪ್ ಮಾಡಲಾಗಿದೆ. ನಮಗೆ ಆಕೆಯ ಸ್ನೇಹಿತರು ದೂರು ಕೊಟ್ಟರು ವಿಚಾರ ತಿಳಿದ ಎರಡುಗಂಟೆಯಲ್ಲಿ ಯುವತಿಯನ್ನು ರಕ್ಷಿಸಿದ್ದೇವೆ ಎಂದರು, (ಏಜೆನ್ಸೀಸ್)