ಬೆಳಗಾವಿ ಶ್ರೀನಗರ, ರಾಮತೀರ್ಥನಗರ, ಗಾಂಧಿನಗರ ಸೇರಿ ವಿವಿಧ ಭಾಗಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಿದ್ದು, ಜನರು ಓಡಾದಂತಹ ಸ್ಥಿತಿ ನಿರ್ಮಾಣವಾಗಿದೆ. ಕಳೆದ ಎರಡು ದಿನಗಳಲ್ಲಿ ಮಾಳಮಾರುತಿ ಪೊಲೀಸ್ ಠಾಣೆ ಇಬ್ಬರು ಪೊಲೀಸರು, ಶ್ರೀನಗರ, ರಾಮತೀರ್ಥ ನಗರ ಸೇರಿ ವಿವಿಧ ಕಡೆಗಳಲ್ಲಿ 12 ಮಂದಿಗೆ ನಾಯಿ ಕಚ್ಚಿದೆ. ಮತ್ತೊಂದೆಡೆ ಕರಿ ಬಣ್ಣದ ಹುಚ್ಚು ನಾಯಿಯೊಂದು ನಾಯಿಗಳಿಗೆ ಕಚ್ಚಿಕೊಂಡು ಓಡಾಡುತ್ತಿದೆ ಎಂಬ ಮಾಹಿತಿ ಆರೋಗ್ಯ ಇಲಾಖೆಯಿಂದ ಲಭಿಸಿದೆ. ನಾಯಿ ಹಿಡಿಯಲು ಗುತ್ತಿಗೆ ಪಡೆದಿರುವ ಸಂಸ್ಥೆಯವರು ಬೀದಿ ನಾಯಿ ಹಿಡಿಯದೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ದೂರು ಕೊಟ್ಟ ನಾಲ್ಕು ದಿನಗಳ ಬಳಿಕ ನಾಯಿ ಹುಡುಕಲು ಬರುತ್ತಿದ್ದಾರೆ. ಬೀದಿ ನಾಯಿಗಳ ನಿರ್ವಹಣೆಗಾಗಿ ಪ್ರತಿ ವಾರ್ಡ್‌ನಿಂದ 2 ಲಕ್ಷ ರೂ. ಹಣ ಸಂಗ್ರಹಿಸಲಾಗಿದೆ. ಆದರೆ, ಅನುದಾನ ಸದ್ಬಳಕೆಯಾಗುತ್ತಿಲ್ಲ ಎಂದು ಸದಸ್ಯರು ದೂರಿದರು.