ಬುಕ್ಕಾಪಟ್ಟಣ: ವಿಧವಾ ವೇತನ, ವೃದ್ಧಾಪ್ಯ ವೇತನ ಹಾಗೂ ವಿಶೇಷ ವೇತನಗಳಿಗೆ ಅರ್ಜಿ ಸಲ್ಲಿಸುವವರು ಕುಂದು&ಕೊರತೆಗಳ ಸಭೆಗೆ ಹಾಜರಾಗಿ ಅರ್ಜಿ ನೀಡಿದಲ್ಲಿ ವಾರದೊಳಗೆ ಮಂಜೂರು ಪತ್ರ ನೀಡಲಾಗುವುದು ಎಂದು ಸಾರ್ವಜನಿಕರಿಗೆ ಶಾಸಕ ಸಿ.ಬಿ.ಸುರೇಶ್ ಬಾಬು ಮಾಹಿತಿ ನೀಡಿದರು. ಶಿರಾ ತಾಲೂಕು ಕಚೇರಿಯಲ್ಲಿ ಮಂಗಳವಾರ ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳ ಉಪಸ್ಥಿತಿಯಲ್ಲಿ ಬುಕ್ಕಾಪಟ್ಟಣ ಹೋಬಳಿಯ ರೈತರು ಹಾಗೂ ಸಾರ್ವಜನಿಕರ ಜನಸಂಪರ್ಕ ಸಭೆ ನಡೆಸಿ, ರೈತರು ಮತ್ತು ಸಾರ್ವಜನಿಕರ ಕುಂದು&ಕೊರತೆ ಆಲಿಸಿ, ಅಹವಾಲುಗಳನ್ನು ಸ್ವೀಕರಿಸಿದರು.