ಸದಸ್ಯೆ ಆರತಿ ಶಹಾಪೂರ ಸಹ ಈ ವಿಷಯವಾಗಿ ಮಾತನಾಡಿ, ಕುಡಿಯುವ ನೀರಿನ ಸಮಸ್ಯೆಗೆ ‘ಮುಕ್ತಿ’ ಕೊಡುವಂತೆ ಒತ್ತಾಯಿಸಿದರಲ್ಲದೇ, ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದಿಸದ ಹಿನ್ನೆಲೆಯಲ್ಲಿ ಜನತೆ ಮರ್ಯಾದೆಯೇ ನೀಡುತ್ತಿಲ್ಲ. ನಾವಾದರೂ ಎಷ್ಟು ಸಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಹೇಳೋಣ ಎಂದರಲ್ಲದೇ, ಕುಡಿಯುವ ನೀರಿನ ಸಮಸ್ಯೆಯೂ ನಿವಾರಣೆಯಾಗದೇ ಹೋದರೆ ಏನರ್ಥ ಎಂದು ಪ್ರಶ್ನಿಸಿದರು.