ಜಮಖಂಡಿ ತಾಲೂಕಿನ ಹುಣಶೀಕಟ್ಟಿ ಗ್ರಾಮದಲ್ಲಿ ಏಳು ಕುಟುಂಬಗಳ ಮೇಲೆ ಸಾರ್ವಜನಿಕವಾಗಿ ಬಹಿಷ್ಕಾರ ಹಾಕಿರುವುದಾಗಿ ಡಂಗೂರ ಸಾರಿರುವುದು.
Published on:
Copied
Follow Us
ಬಾಗಲಕೋಟೆ: ಗ್ರಾಮದ ಹನಮಂತ ದೇವರ ಜಾತ್ರೆ(ಓಕುಳಿ)ಗೆ ೬೦೦ ರೂ. ಕಾಣಿಕೆ ಹಣ ಕೊಟ್ಟಿಲ್ಲ ಎನ್ನುವ ಆರೋಪದ ಮೇಲೆ ಏಳು ಕುಟುಂಬಗಳಿಗೆ ಊರಿನಿಂದ ಬಹಿಷ್ಕಾರ ಹಾಕಿರುವ ಘಟನೆ ಜಿಲ್ಲೆಯ ಜಮಖಂಡಿ ತಾಲೂಕಿನ ಹುಣಶೀಕಟ್ಟಿ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಈ ಏಳು ಕುಟುಂಬಗಳ ಸ್ವಾಮಿಗಳು, ಪೂಜಾರಿಗಳು ಹೋಗುವಂತಿಲ್ಲ. ಇವರ ಮನೆ ಕಾರ್ಯಗಳಿಗೆ ಯಾರೂ ಭಾಗವಹಿಸಬಾರದು. ಕಿರಾಣಿ ಅಂಗಡಿಯವರು ಈ ಕುಟುಂಬಗಳಿಗೆ ದಿನಸಿಗಳನ್ನು ನೀಡಬಾರದು ಎಂದು ಗ್ರಾಮದಲ್ಲಿ ಏಪ್ರಿಲ್ ೫ ರಂದು ಡಂಗೂರ ಸಾರಿದ ಘಟನೆ ನಡೆದಿದೆ.
ಏಪ್ರಿಲ್ ೨ ರಂದು ಗ್ರಾಮದಲ್ಲಿ ಹನಮಂತ ದೇವರ ಓಕುಳಿ ಇತ್ತು. ಆಗ ಗ್ರಾಮಸ್ಥರು ಇದಕ್ಕೆ ಕಾಣಿಕೆ ನೀಡಿದ್ದರು. ಆದರೆ, ಈ ಏಳು ಕುಟುಂಬಗಳು ಕಾಣಿಕೆ ನೀಡಿಲ್ಲ ಎಂದು ದೂರಲಾಗಿದೆ. ಘಟನೆ ಹಿನ್ನೆಲೆಯಲ್ಲಿ ಏಪ್ರಿಲ್ ೫ ರಂದು ಬಹಿಷ್ಕಾರ ಹಾಕಿರುವ ಬಗ್ಗೆ ಗ್ರಾಮದಲ್ಲಿ ಡಂಗೂರ ಸಾರಿದ್ದಾರೆ.
ಗ್ರಾಮದಲ್ಲಿ ಏಳು ಕುಟುಂಬಗಳಿಗೆ ಬಹಿಷ್ಕಾರ ಹಾಕಿರುವ ಮಾಹಿತಿ ತಿಳಿದು ತಾಲೂಕು ಆಡಳಿತ ಗ್ರಾಮಕ್ಕೆ ತೆರಳಿ ಮಾತುಕತೆ ನಡೆಸಿ, ಘಟನೆಯನ್ನು ತಿಳಿಗೊಳಿಸಿದ್ದಾರೆ ಎನ್ನಲಾಗಿತ್ತು. ಆದರೆ, ಬಹಿಷ್ಕಾರ ಹಾಕಿದವರ ಮೇಲೆ ಯಾವುದೇ ಕಾನೂನು ಕ್ರಮ ಆಗಿಲ್ಲ ಎಂದು ಬಹಿಷ್ಕಾರಕ್ಕೆ ಒಳಗಾದ ಕುಟುಂಬಗಳ ಪೈಕಿ ಯಲ್ಲಪ್ಪ ಛಗನ್ನವರ ಎನ್ನುವವರು ಜಮಖಂಡಿ ತಹಸೀಲ್ದಾರ, ಉಪ ವಿಭಾಗಾಽಕಾರಿ, ಜಿಲ್ಲಾಽಕಾರಿಗಳಿಗೆ ಪತ್ರದ ಮೂಲಕ ದೂರು ನೀಡಿದ್ದಾರೆ.
ಹುಣಶೀಕಟ್ಟಿ ಗ್ರಾಮದ ಯಲ್ಲಪ್ಪ ಅವರು ಹುಬ್ಬಳ್ಳಿ ರೇಲ್ವೆ ವರ್ಕ್ಶಾಪ್‌ನಲ್ಲಿ ಸೀನಿಯರ್ ಟೆಕ್ನಿಷಿಯನ್ ಆಗಿದ್ದು, ಗ್ರಾಮದಲ್ಲಿ ತಮ್ಮ ಕುಟುಂಬಕ್ಕೆ ಬಹಿಷ್ಕಾರ ಹಾಕಿ ಡಂಗೂರ ಸಾರಿದ್ದು ನನಗೆ ಹಾಗೂ ನನ್ನ ಕುಟುಂಬಕ್ಕೆ ಭಾರಿ ಅಪಮಾನವಾಗಿದೆ. ನಮಗಾದ ಅಪಮಾನಕ್ಕೆ ಹೊಣೆ ಯಾರು? ಬಹಿಷ್ಕಾರದ ಬಗ್ಗೆ ಡಂಗೂರ ಸಾರಿದವರು ಹಾಗೂ ಇದಕ್ಕೆ ಕಾರಣರಾದ ಗ್ರಾಮದ ಹಿರಿಯರ ಕ್ರಮ ಕಾನೂನಿಗೆ ವಿರುದ್ಧವಾಗಿದೆ. ಈ ಬಗ್ಗೆ ನಾನು ಈಗಾಗಲೇ ಡಂಗೂರ ಸಾರಿದ ವಿಡಿಯೋ ಸಮೇತ ಸ್ಥಳೀಯ ಅಽಕಾರಿಗಳಿಗೆ ಏ. ೮ ರಂದೇ ಗಮನಕ್ಕೆ ತಂದಿದ್ದು, ಅವರೆಲ್ಲರ ಮೇಲೆ ಕಾನೂನಿನ ಪ್ರಕಾರ ಕ್ರಮ ಜರುಗಿಸಬೇಕು. ಗ್ರಾಮದಲ್ಲಿ ತಮಗೆ ಮಾನ ಹಾಗೂ ಪ್ರಾಣಹಾನಿ ಆಗುವ ಸಂಭವ ಇದ್ದು, ತಮಗೆ ಸೂಕ್ತ ಭದ್ರತೆ ನೀಡಬೇಕೆಂದು ಜಿಲ್ಲಾಽಕಾರಿಗಳಿಗೆ ಏ.೩೦ ರಂದು ಜಿಲ್ಲಾಽಕಾರಿ ಕಚೇರಿಗೆ ಇ-ಮೇಲ್ ಮಾಡಿದ್ದಾರೆ.