ಧರ್ಮಸ್ಥಳ ಯೋಜನೆಯ ಉದ್ದೇಶ ತಿಳಿಹೇಳಿ

ಕಕ್ಕೇರಾದಲ್ಲಿ ಸೋಮವಾರ ಹಮ್ಮಿಕೊಂಡ ಧರ್ಮಸ್ಥಳ ಯೋಜನೆಯ ವಲಯ ಒಕ್ಕೂಟ ಪಧಾಽಕಾರಿಗಳ ತರಬೇತಿ ಕಾರ್ಯಾಗಾರವನ್ನು ಪುರಸಭೆ ಅಧ್ಯಕ್ಷ ಪರಮಣ್ಣ ಕಮತಗಿ ಉದ್ಘಾಟಿಸಿದರು. ಜೆಟ್ಟೆಪ್ಪ ದಳಾರ, ನಾಗೇಶ, ನಿಂಗರಾಜ್, ಸುರಿಯಾಬೇಗಂ, ಗೋವಿಂದ ರಾಠೋಡ್ ಇತರರಿದ್ದರು.
ಕಕ್ಕೇರಾದಲ್ಲಿ ಸೋಮವಾರ ಹಮ್ಮಿಕೊಂಡ ಧರ್ಮಸ್ಥಳ ಯೋಜನೆಯ ವಲಯ ಒಕ್ಕೂಟ ಪಧಾಽಕಾರಿಗಳ ತರಬೇತಿ ಕಾರ್ಯಾಗಾರವನ್ನು ಪುರಸಭೆ ಅಧ್ಯಕ್ಷ ಪರಮಣ್ಣ ಕಮತಗಿ ಉದ್ಘಾಟಿಸಿದರು. ಜೆಟ್ಟೆಪ್ಪ ದಳಾರ, ನಾಗೇಶ, ನಿಂಗರಾಜ್, ಸುರಿಯಾಬೇಗಂ, ಗೋವಿಂದ ರಾಠೋಡ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪುರಸಭೆ ಅಧ್ಯಕ್ಷ ಪರಮಣ್ಣ ಸಲಹೆ
  • ಕಕ್ಕೇರಾದಲ್ಲಿ ವಲಯ ಒಕ್ಕೂಟದ ತರಬೇತಿ ಕರ‍್ಯಾಗಾರ
ಕಕ್ಕೇರಾ:

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉದ್ದೇಶವನ್ನು ಗ್ರಾಮೀಣ ಮಹಿಳೆಯರಿಗೆ ತಿಳಿಹೇಳಬೇಕು ಎಂದು ಪುರಸಭೆ ಅಧ್ಯಕ್ಷ ಪರಮಣ್ಣ ಕಮತಗಿ ಹೇಳಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಸೋಮವಾರ ಹಮ್ಮಿಕೊಂಡ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಲಯ ಒಕ್ಕೂಟ ಪದಾಽಕಾರಿಗಳ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಈ ಯೋಜನೆಯ ಮಾಹಿತಿ ತಲುಪಿಸುವಲ್ಲಿ ಒಕ್ಕೂಟದ ಪದಾಽಕಾರಿಗಳ ಪಾತ್ರ ಬಹಳ ಪ್ರಮುಖವಾಗಿದ್ದು, ಹೀಗಾಗಿ ಪ್ರತಿ ಗ್ರಾಮೀಣ ಮಹಿಳೆಯರಿಗೆ ಯೋಜನೆಯ ಉದ್ದೇಶ ಮನವರಿಕೆ ಮಾಡಿಕೊಡಬೇಕು ಎಂದರು.
ಸAಸ್ಥೆಯ ಪೂಜ್ಯರ ಆಶಯದಂತೆ ಗ್ರಾಮೀಣ ಪ್ರದೇಶದ ಕಟ್ಟಕಡೆಯ ಮಹಿಳೆಯರಿಗೆ ಯೋಜನೆಯ ಉದ್ದೇಶ ತಲುಪಿಸಿ ಅವರನ್ನು ಸಾಮಾಜಿಕ ಮತ್ತು ಆರ್ಥಿಕವಾಗಿ ಸಬಲೀಕರಣಗೊಳಿಸಿ ಸ್ವಾವಲಂಬನೆಯತ್ತ ಮಾಡುತ್ತಿರುವುದು ಸ್ವಾಗತಾರ್ಹವಾಗಿದೆ ಎಂದು ಹೇಳಿದರು.
ತಾಲೂಕು ಯೋಜನಾಽಕಾರಿ ನಾಗೇಶ ಎನ್.ಮಾತನಾಡಿ, ಒಕ್ಕೂಟದ ಪದಾಽಕಾರಿಗಳ ಜವಾಬ್ದಾರಿಯಿಂದ ವಾರದ ಸಭೆ ಹಾಗೂ ತೆಗೆದುಕೊಂಡ ಸಾಲ ಸರಿಯಾಗಿ ಮರುಪಾವತಿ, ಆರೋಗ್ಯ ರಕ್ಷಾ, ಸಂಪುರ್ಣ ಸುರಕ್ಷಾ ಜೀವವಿಮೆ, ಸಿಸಿ ಖಾತೆ, ಬ್ಯಾಂಕ್‌ನ ವ್ಯವಹಾರದ ಸಂಘಗಳ ಶಿಸ್ತು ಬದ್ಧ ಕಾರ್ಯನಿರ್ವಹಣೆ ಕುರಿತು ಮಾಹಿತಿ ನೀಡಿದರು.
ಪುರಸಭೆ ಉಪಾಧ್ಯಕ್ಷ ಜಟ್ಟೆಪ್ಪ ದಳಾರ, ಗ್ರಾಮಾಡಳಿತಾಧಿಕಾರಿ ಗೋವಿಂದ್ ರಾಠೋಡ್, ರವಿಶಂಕ್ರಯ್ಯ ತಿಂಥಣಿ, ಮುದ್ದಣ್ಣ ಅಮ್ಮಾಪುರ, ಬಸವರಾಜ ಹೊಸ್ಮನಿ, ಮಹಿಬೂಬ ಚಪರಾಸಿ, ಪಾರ್ವತಿ ಸ್ವಾಮಿ, ಖಾಜಾಬೀ, ದೇವಮ್ಮ, ದೀಪಾ, ಜ್ಯೋತಿ, ಬಸಮ್ಮ, ಆದಮ್ಮ, ಜಚ್ಚಾಬೀ ಸೇರಿ ಅನೇಕರು ಭಾಗವಹಿಸಿದ್ದರು.
ವಲಯ ಮೇಲ್ವಿಚಾರಕ ನಿಂಗರಾಜ ಬಿ.ಎಸ್.ಪ್ರಾರ್ಥಿಸಿದರು.ಸುರಿಯಾಬೇಗಂ ನಿರೂಪಣೆ ಮಾಡಿದರು. ಸೈದಾಬಿ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net