ಸರ್ಕಾರಿ ಶಾಲೇಲಿ ಅವಧಿ ಮೀರಿದ ಎಣ್ಣೆ ಬಳಕೆ!

ಶಹಾಬಾದ್​ನ ಸರ್ಕಾರಿ ಪ್ರೌಢಶಾಲೆಯ ಅಡುಗೆ ಕೋಣೆಯಲ್ಲಿರುವ ಅವಧಿ ಮೀರಿದ ಸಿಂಧೂರಿ ಎಣ್ಣೆ ಪ್ಯಾಕೇಟ್​ನ ಜಿಪಿಎಸ್​ ಪೋಟೋಗಳು. 16 7 ಎಸ್​ಬಿಡಿ 2(ಎ) ಶಹಾಬಾದ್​ ಸರ್ಕಾರಿ ಪ್ರೌಢಶಾಲೆಯಲ್ಲಿ ದೊರೆತ ಸಿಂಧೂರಿ ಅಡುಗೆ ಎಣ್ಣೆ ಪಾಕೆಟ್​ ಮೇಲಿರುವ ಬ್ಯಾಚ್​ ಸಂಖ್ಯೆ, ಪ್ಯಾಕಿಂಗ್​ ಹಾಗೂ ಬಳಕೆಯ ಕೊನೆ ದಿನಾಂಕ.
ಶಹಾಬಾದ್​ನ ಸರ್ಕಾರಿ ಪ್ರೌಢಶಾಲೆಯ ಅಡುಗೆ ಕೋಣೆಯಲ್ಲಿರುವ ಅವಧಿ ಮೀರಿದ ಸಿಂಧೂರಿ ಎಣ್ಣೆ ಪ್ಯಾಕೇಟ್​ನ ಜಿಪಿಎಸ್​ ಪೋಟೋಗಳು. 16 7 ಎಸ್​ಬಿಡಿ 2(ಎ) ಶಹಾಬಾದ್​ ಸರ್ಕಾರಿ ಪ್ರೌಢಶಾಲೆಯಲ್ಲಿ ದೊರೆತ ಸಿಂಧೂರಿ ಅಡುಗೆ ಎಣ್ಣೆ ಪಾಕೆಟ್​ ಮೇಲಿರುವ ಬ್ಯಾಚ್​ ಸಂಖ್ಯೆ, ಪ್ಯಾಕಿಂಗ್​ ಹಾಗೂ ಬಳಕೆಯ ಕೊನೆ ದಿನಾಂಕ.
Published on

ಪ್ರಮುಖ ಮುಖ್ಯಾಂಶಗಳು

  • ಶಹಾಬಾದ್​ನ ಪ್ರೌಢಶಾಲೆಯಲ್ಲಿ ಮಿಡ್​ ಡೇ ಮೀಲ್ಸ್​ ಯೋಜನೆಯಡಿ ಅವಡ
ಶಹಾಬಾದ್​: ಚಿತ್ತಾಪುರ ತಾಲೂಕಿನ ದಂಡೋತಿ ಮುರಾರ್ಜಿ ದೇಸಾಯಿ ವಸತಿಶಾಲೆಯಲ್ಲಿ ಕಳಪೆ ಆಹಾರ ಸೇವಿಸಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಧಗೊಂಡಿರುವ ಪ್ರಕರಣ ಮರೆಮಾಸುವ ಮುನ್ನವೇ ಅಂತಹದ್ದೆ ಒಂದು ದೊಡ್ಡ ದುರಂತ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದಿರುವುದ ಗುರುವಾರ ಬೆಳಕಿಗೆ ಬಂದಿದೆ.
ಸರ್ಕಾರಿ ಪ್ರೌಢಶಾಲೆಯಲ್ಲಿ ಸರ್ಕಾರದ ಮಿಡ್​ ಡೇ ಮೀಲ್ಸ್​ ಯೋಜನೆಯಡಿ ಅವಧಿ ಮೀರಿದ ಅಡುಗೆ ಎಣ್ಣೆ ವಿತರಿಸಿದ್ದು, ಅದರಲ್ಲೇ ಮಕ್ಕಳಿಗೆ ಆಹಾರ ಸಿದ್ಧಪಡಿಸಿ ನೀಡಿರುವ ಅಂಶ ಬೆಳಕಿಗೆ ಬಂದಿದೆ. ಮಧ್ಯಾಹ್ನ ಬಿಸಿಯೂಟ ಯೋಜನೆಯಡಿ ಶಾಲೆಗೆ ಸಿಂಧೂರಿ ರಿಫೈನ್ಡ್​ ಸನ್​ಪ್ಲವರ್​ ಎಣ್ಣೆ ನೀಡಲಾಗಿದೆ. ಆದರೆ ಇದರ ಅವಧಿ ಮುಗಿದು ತಿಂಗಳಾಗಿದ್ದು, ಹಾಗೆಯೇ ಬಳಕೆ ಮಾಡುವ ಮೂಲಕ ಮಕ್ಕಳ ಆರೋಗ್ಯದೊಂದಿಗೆ ಚಲ್ಲಾಟವಾಡಲಾಗಿದೆ.
ಅಡುಗೆ ಕೋಣೆಯಲ್ಲಿ ಬಿಸಿಯೂಟಕ್ಕೆ ಬಳಸಿದ ಎಣ್ಣೆಯ ಪಾಕೆಟ್​ ಲಭ್ಯವಾಗಿದ್ದು, ಪ್ಯಾಕೇಟ್​ ಮೇಲೆ ಶ್ರೀ ಬಾಲಾಜಿ ಟ್ರೇಡ್​ಲಿಂಕ್ಸ್​ ಹುಬ್ಬಳ್ಳಿ ಕಂಪನಿಯಿಂದ ಸಿಂಧೂರ ರಿಫೈನ್ಡ್​ ಸನ್​ಫ್ಲವರ್​ ಆಯಿಲ್​ ಸರಬರಾಜು ಆಗಿದೆ. ಪಾಕೆಟ್​ ಅನ್ನು 2026ರ ಜನವರಿ ತಿಂಗಳಲ್ಲಿ ಪ್ಯಾಕ್​ ಮಾಡಲಾಗಿದ್ದು, ಬಳಕೆ ಅವಧಿ 2026ರ ಜೂ.2 ಎಂದು ನೀಡಲಾಗಿದೆ. ಬ್ಯಾಚ್​ ಸಂ.9, ಸಪ್ಲೆಯರ್​ ಕೋಡ್​ ಯು 32625 ಆಗಿದೆ. ಅದರೆ ಅವಧಿ ಮುಗಿದ ನಂತರ ಸುಮಾರು 40 ದಿನ ಇದೇ ಎಣ್ಣೆ ಮಕ್ಕಳ ಊಟಕ್ಕೆ ಬಳಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net