ಕೆಡಿಪಿ ಸಭೆಗೆ ಆಗಮಿಸಿದ್ದ ಸಚಿವರನ್ನು ಭೇಟಿ ಮಾಡಲು ಶಾಸಕ ಚನ್ನಾರಡ್ಡಿ ಪಾಟೀಲ್ ಅವರ ಮೂಲಕ ಮನವಿ ಮಾಡಿಕೊಂಡು ಜಿಪಂ ಸಿಇಒ ಅವರ ಕೊಣೆಗೆ ಬಂದು ಕುಳಿತರು. ಆಗಲೇ ಜಿಲ್ಲಾ ಕೇಂದ್ರದ ಹೊರಗಡೆ ಕರವೇ ಪದಾಽಕಾರಿಗಳಿಂದ ಮುತ್ತಿಗೆ ಹಾಕಿಕೊಂಡು ಮನವಿ ಸ್ವೀಕರಿಸಿ ಒಳಬಂದ ಸಚಿವರು, ಇವರ ಅಹವಾಲು ಕೇಳಲು ಮುಂದಾದರು. ಆಗ ಜಿಲ್ಲೆ ಬರಪೀಡಿತ ಘೋಷಣೆ ಮಾಡದ ಸರ್ಕಾರದ ಕ್ರಮ ಖಂಡಿಸಿ ಸಚಿವರೊಂದಿಗೆ ಮಾತಿನ ಭರಾಟೆ ಹೆಚ್ಚಿಸಿದರು. ಆಗ ಸಂಘಟನೆಯ ಕೆಲವರು ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಕಾಳಜಿಪೂರ್ವಕವಾಗಿ ಸಿಟ್ಟು ಮೈಮೇಲೆ ಎಳೆದುಕೊಂಡು ತಲೆಗೊಬ್ಬರಂತೆ ಮಾತಿಗೆ ಇಳಿದರು. ಇದರಿಂದ ಕೆರಳಿದಂತಾದ ಸಚಿವರು, ಹೋರಾಟದ ಪರಿ ಇದಲ್ಲ, ಹೀಗೆ ಮಾಡಿದರೆ ಬೇಡಿಕೆ ಈಡೇರಿದಂತೆಯೂ ಆಗಲ್ಲ ಎಂದವರೇ ಅಲ್ಲಿಂದ ಸಭೆಗೆ ಹೊಗಲು ಅಣಿಯಾದರು. ಕೂಡಲೇ ಮಧ್ಯ ಪ್ರವೇಶಿಸಿದ ಶಾಸಕ ತುನ್ನೂರ, ಡಿಸಿ ರಾಹುಲ್ ಪಾಂಡ್ವೆ ಮತ್ತು ಎಸ್‌ಪಿ ಪೃಥ್ವಿಕ್ ಶಂಕರ್ ಅವರು ವಾತವರಣ ತಿಳಿಗೊಳಿಸಿದರು. ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಜಲ್ಲಪ್ಪನೋರ್, ಅಶೋಕ ಐಕೂರ ಇತರರಿದ್ದರು.