ಕಡ್ಡಾಯ ಶಿಕ್ಷಣ ಎಲ್ಲರೂ ಪಡೆಯಲಿ compulsory education

ಕಡ್ಡಾಯ ಶಿಕ್ಷಣ ಎಲ್ಲರೂ ಪಡೆಯಲಿ  compulsory education
ಕಡ್ಡಾಯ ಶಿಕ್ಷಣ ಎಲ್ಲರೂ ಪಡೆಯಲಿ compulsory education
Published on

ಪ್ರಮುಖ ಮುಖ್ಯಾಂಶಗಳು

  • ಬಿಇಒ ಕೆ.ಎನ್.ರಾಮಚಂದ್ರಪ್ಪ ಹೇಳಿಕೆ
ಮುಳಬಾಗಿಲು: ಕಡ್ಡಾಯ ಶಿಕ್ಷಣ ಪ್ರತಿಯೊಬ್ಬರೂ ಪಡೆದುಕೊಳ್ಳಲು ಅವಕಾಶ ಕಲ್ಪಿಸಬೇಕು. ಎಲ್ಲರಿಗೂ ಉಚಿತ ಶಿಕ್ಷಣ ನೀಡುವ ಸಲುವಾಗಿ ಸರ್ಕಾರ ಹಲವು ಯೋಜನೆ ಜಾರಿಗೊಳಿಸಿದೆ. 14 ವರ್ಷದೊಳಗಿನ ಮಕ್ಕಳು ಶಾಲೆಯಿಂದ ಹೊರಗುಳಿಯಬಾರದು ಎಂದು ಬಿಇಒ ಕೆ.ಎನ್.ರಾಮಚಂದ್ರಪ್ಪ ಹೇಳಿದರು. compulsory education
ನಗರದ ಡಿವಿಜಿ ಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಕಾರ್ಮಿಕ, ಶಾಲಾ ಇಲಾಖೆ ಮತ್ತು ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿಯಿಂದ ಹಮ್ಮಿಕೊಂಡಿದ್ದ ಭಾರತ ರಕ್ಷಣಾ ಮತ್ತು ಪುನರ್ವಸತಿ ಅಭಿಯಾನ ಉದ್ಘಾಟಿಸಿ ವಾತನಾಡಿ, 14 ವರ್ಷದೊಳಗೆ ಮಕ್ಕಳು ದುಡಿಯುವುದು ಕಾನೂನು ಬಾಹಿರ. ಬಾಲ ಕಾರ್ಮಿಕರು ಕಂಡು ಬಂದರೆ ಕೂಡಲೇ ಸಂಬಂಧಿಸಿದ ಇಲಾಖೆಗೆ ವಾಹಿತಿ ನೀಡಿ ಎಂದರು.
ನಗರಸಭೆ ಪೌರಾಯುಕ್ತ ಜಿ.ಬಿ.ಆಂಜನೇಯಲು ವಾತನಾಡಿ, ಹೊಸದಾಗಿ ಮುಳಬಾಗಿಲು ನಗರಸಭೆಗೆ ಬಂದಿದ್ದೇನೆ. ಇಲ್ಲಿನ ಸರ್ಕಾರಿ ಶಾಲೆ ತುಂಬಾ ಅಚ್ಚುಕಟ್ಟಾಗಿದ್ದು, ವಿದ್ಯಾರ್ಥಿಗಳ ದಾಖಲಾತಿ ಪ್ರವಾಣವು ಸಹ ಹೆಚ್ಚಾಗಿದೆ. ಆದ್ದರಿಂದ ಇಲ್ಲಿನ ಶಾಲೆಗೆ ಮೂಲ ಸೌಕರ್ಯ ಕಲ್ಪಿಸಲು ಆದ್ಯತೆ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.
ಡಿವಿಜಿ ಶಾಲೆಯ ಮುಖ್ಯಶಿಕ್ಷಕ ಸಿ.ಸೊಣ್ಣಪ್ಪ ವಾತನಾಡಿ, ಶಾಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ವಿದ್ಯಾಭ್ಯಾಸ ವಾಡುತ್ತಿದ್ದಾರೆ. ಇಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳು ನಗರಸಭೆಯಿಂದ ಶಾಲೆಗೆ ನೀರು ಸರಬರಾಜು ವಾಡಿಸಲು ಕೋರಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net