ತಲ್ಲೂರ: ಗ್ರಾಮೀಣ ಪ್ರದೇಶದಲ್ಲಿ ಶೌಚಗೃಹ ಬಳಸುವವರ ಸಂಖ್ಯೆ ತೀರ ಕಡಿಮೆ ಇದ್ದು, ಪ್ರತಿಯೊಬ್ಬರೂ ಶೌಚಗೃಹ ನಿರ್ಮಿಸಿಕೊಂಡು ಶುಚಿತ್ವಕ್ಕೆ ಆದ್ಯತೆ ನೀಡಬೇಕು ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಆನಂದ ಬಡಕುಂದ್ರಿ ಹೇಳಿದರು. ಸ್ಥಳಿಯ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿಯ 2025&26ನೇ ಸಾಲಿನ ಕಾಯಕ ಗ್ರಾಮಸಭೆಯಲ್ಲಿ ಮಾತನಾಡಿದರು. ನರೇಗಾ ಯೋಜನೆಯಡಿ ಶಾಲೆಗೆ ಬೇಕಾಗುವ ಶೌಚಗೃಹ, ಅಡುಗೆ ಕೋಣೆ, ಕಾಂಪೌಂಡ್, ಆಟದ ಮೈದಾನದ ಸ್ವಚ್ಛತೆ ಪರಿಶೀಲಿಸಬೇಕು. ಕ್ರಿಯಾಯೋಜನೆ ತಯಾರಿಸಬೇಕು ಎಂದರು. ಪಿಡಿಒ ರಾವೇಂದ್ರಕುಮಾರ ಎಸ್.ಪಿ ಮಾತನಾಡಿ, ಗ್ರಾಮಸ್ಥರು ನೀರನ್ನು ಮಿತವಾಗಿ ಬಳಸಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು. ಗ್ರಾಪಂ ಅಧ್ಯೆ ಕವಿತಾ ಬಾಲರಡ್ಡಿ, ಉಪಾಧ್ಯೆ ರುಕ್ಮಿಣಿ ನಾಯ್ಕರ, ಎಡಿ ಆರ್.ಎ.ಪಾಟೀಲ, ರಾಜಶೇಖರ ಅಣ್ಣಿಗೇರಿ, ಮುಖ್ಯಶಿಕ ಡಿ.ಡಿ.ಭೋವಿ, ಶಿವಾನಂದ ಅಣ್ಣಿಗೇರಿ, ಲೋಕನಾಥ ಪೂಜೇರ, ದೀಪಾ ಸಾಲಿ, ಗೀತಾ ಸಕ್ರಿ, ಅತಾ ಸಾಲಿ ಸೇರಿದಂತೆ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಸಂಜೀವಿನಿ ಮಹಿಳಾ ಒಕ್ಕೂಟದ ಸದಸ್ಯರು ಇದ್ದರು.