ಪ್ರತಿಯೊಬ್ಬರೂ ಮನೆ ಮೇಲೆ ತಿರಂಗಾ ಹಾರಿಸಿ

ಶಹಾಬಾದ್​ ಬಿಜೆಪಿ ಮಂಡಲ ಕಚೇರಿಯಲ್ಲಿ ಹರ್​ ರ್​ ತಿರಂಗಾ ಅಭಿಯಾನಕ್ಕೆ ಗ್ರಾಮೀಣ ಜಿಲ್ಲಾಧ್ಯಕ್ಷ ಅಶೋಕ ಬಗಲಿ ಚಾಲನೆ ನೀಡಿದರು. ಆನಂದ ಪಾಟೀಲ್​ ಮಹೇಂದ್ರ ಪೂಜಾರಿ, ವೀರೇಂದ್ರ ಪಾಟೀಲ್​, ನಿಂಗಣ್ಣ ಹುಳಗೋಳ ಇತರರಿದ್ದರು.
ಶಹಾಬಾದ್​ ಬಿಜೆಪಿ ಮಂಡಲ ಕಚೇರಿಯಲ್ಲಿ ಹರ್​ ರ್​ ತಿರಂಗಾ ಅಭಿಯಾನಕ್ಕೆ ಗ್ರಾಮೀಣ ಜಿಲ್ಲಾಧ್ಯಕ್ಷ ಅಶೋಕ ಬಗಲಿ ಚಾಲನೆ ನೀಡಿದರು. ಆನಂದ ಪಾಟೀಲ್​ ಮಹೇಂದ್ರ ಪೂಜಾರಿ, ವೀರೇಂದ್ರ ಪಾಟೀಲ್​, ನಿಂಗಣ್ಣ ಹುಳಗೋಳ ಇತರರಿದ್ದರು.
Published on
ಶಹಾಬಾದ್​: ಪ್ರತಿ ಮನೆಯ ಮೇಲೆಯೂ ಆ.15ರಂದು ತಿರಂಗಾ ಹಾರಿಸುವ ಮೂಲಕ ಮನೆ&ಮನೆಗೆ ತಿರಂಗಾ, ಮನ-ಮನದಲ್ಲಿ ರಾಷ್ಟ್ರಭಕ್ತಿ ಬಿತ್ತುವ ಕೆಲಸ ಆಗಬೇಕು ಎಂದು ಗ್ರಾಮೀಣ ಜಿಲ್ಲಾಧ್ಯಕ್ಷ ಅಶೋಕ ಬಗಲಿ ಹೇಳಿದರು. ಮಂಡಲ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಹರ್​ ರ್​ ತಿರಂಗಾ ಅಭಿಯಾನ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಪ್ರತಿ ಕಾರ್ಯಕರ್ತರೂ ಮನೆಗಳ ಮೇಲೆ ರಾಷ್ಟ್ರ ಧ್ವಜ ಹಾರಿಸಿ, ದೇಶಭಕ್ತಿ, ಸ್ವಾಭಿಮಾನ ಮೆರೆಯಬೇಕು ಎಂದು ಕರೆ ನೀಡಿದರು. ಆನಂದ ಪಾಟೀಲ್​, ಮಹೇಂದ್ರ ಪೂಜಾರಿ, ವೀರೇಂದ್ರ ಪಾಟಿ ಲ್​ ರಾಯಕೋಡ, ನಂದಾ ಬಾಬಾ, ಮಹಾದೇವ, ಗೋವಿಂದ ಕುಸಾಳೆ, ನಾರಾಯಣ ಕಂದಕೂರ, ಶರಣು ಕೌಲಗಿ ಇತರರಿದ್ದರು. ದೇವದಾಸ ಜಾಧವ್​ ಸ್ವಾಗತಿಸಿದರು. ಮಂಡಲ ಅಧ್ಯಕ್ಷ ನಿಂಗಣ್ಣ ಹುಳಗೋಳ ಪ್ರಾಸ್ತಾವಿಕ ಮಾತನಾಡಿದರು. ದಿನೇಶ ಗೌಳಿ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net