ಫೆ.22 ರಂದು ಸಂಜೆ ದತ್ತಿ ಉಪನ್ಯಾಸ

ಡಾ.ಬಿ.ವಿಜಯರಾಜೇಂದ್ರ
ಡಾ.ಬಿ.ವಿಜಯರಾಜೇಂದ್ರ
Published on

ರಾಯಚೂರು

ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ವಿಮಲಬಾಯಿ ಭಗತರಾಜ ನಿಜಾಮಕಾರಿ ಪ್ರತಿಷ್ಠಾನದಿಂದ ನಗರದ ಕನ್ನಡ ಭವನದಲ್ಲಿ ಫೆ.22 ರಂದು ಸಂಜೆ 5 ಗಂಟೆಗೆ ದತ್ತಿ ಉಪನ್ಯಾಸ ಮತ್ತು ಪ್ರೇರಣಾ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆಂಂದು ಕಸಾಪ ತಾಲೂಕು ಅಧ್ಯಕ್ಷ ಡಾ.ಬಿ.ವಿಜಯರಾಜೇಂದ್ರ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಶಿವುಬಾಯಿ ತುಳಜಾರಾಮ ನಿಜಾಮಕಾರಿ ದತ್ತಿ ಉಪನ್ಯಾಸ ಮತ್ತು ಪ್ರೇರಣಾ ಪ್ರಶಸ್ತಿ ಸಮಾರಂಭದಲ್ಲಿ ಕನ್ನಡ ಮತ್ತು ತೆಲುಗು ಭಾಷಾ ಸಾಂಸ್ಕೃತಿಕ ಬಾಂಧವ್ಯ ಕುರಿತು ಹೈದ್ರಾಬಾದಿನ ನಿವೃತ್ತ ಪ್ರಾಧ್ಯಾಪಕ ಗೋನವಾರ ಕಿಷನರಾವ್ ಉಪನ್ಯಾಸ ನೀಡಲಿದ್ದಾರೆ. ಅಧ್ಯಕ್ಷತೆಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ ವಹಿಸಲಿದ್ದಾರೆ. ಪ್ರೇರಣಾ ಪ್ರಶಸ್ತಿಯನ್ನು ರಾಯಚೂರು ವಾಣಿಜ್ಯ ತೆರಿಗೆ ಅಧಿಕಾರಿ ಸುಜಾತ.ಟಿ ಇವರಿಗೆ ಪ್ರದಾನ ಮಾಡಲಾಗುತ್ತದೆ ಎಂದರು.

ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಪರಿಷತ ನಿಕಟಪೂರ್ವ ಅಧ್ಯಕ್ಷ ಬಸವಪ್ರಭು ಪಾಟೀಲ್ ಬೆಟ್ಟದೂರು, ಪತ್ರಕರ್ತ ಚಂದ್ರಕಾಂಸ ಮಸಾನಿ, ಸಾಹಿತಿ ಶ್ರೀನಿವಾಸ ಗಟ್ಟು, ಬಷೀರ ಅಹ್ಮದ ಹೊಸಮನಿ, ವೆಂಕಟರಾವ್ ಕುಲ್ಕರ್ಣಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಪ್ರತಿಷ್ಠಾನದ ಅಧ್ಯಕ್ಷ ಭಗತರಾಜನಿಜಾಮಕಾರಿ, ಪ್ರಮುಖರಾದ ಅಶೋಕ ಕುಮಾರ ಜೈನ್, ವೆಂಕಟರಾವ್ ಕುಲ್ಕರ್ಣಿ, ಬಷಿರ ಅಹ್ಮದ್, ಪ್ರತಿಭಾ ಗೋನಾಳ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net