ಹುಮನಾಬಾದ್: ದೈಹಿಕ ಸವಾಲುಗಳಿವೆ ಎಂದು ಬದುಕಿನ ಉತ್ಸಾಹಕ್ಕೆ ಕಡಿವಾಣ ಹಾಕಿಕೊಳ್ಳಬೇಕಿಲ್ಲ. ಆತ್ಮವಿಶ್ವಾಸ, ಛಲ ಮತ್ತು ಆರೋಗ್ಯ ಕಾಳಜಿ ಇದ್ದರೆ ಎಂಥದ್ದೇ ಸವಾಲನ್ನೂ ಮೆಟ್ಟಿ ನಿಲ್ಲಬಹುದು ಎಂಬುದಕ್ಕೆ ಕಠೋಳ್ಳಿ ಗ್ರಾಮದ ನಿವಾಸಿ, ಹುಮನಾಬಾದ್ ಡಿಸಿಸಿ ಬ್ಯಾಂಕ್ ಉದ್ಯೋಗಿಯಾಗಿರುವ ವಿಕಲಾಂಗ ಶಿವಕುಮಾರ ಬಿರಾದಾರ ದಿನಚರಿಯೇ ಸಾಕ್ಷಿ.