ನಗರದ ಎಬಿಡಿ ಟ್ರಸ್ಟ್ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬೆಂಬಲಿಗರು, ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್ ನನ್ನ ಉಸಿರು. ಪಕ್ಷದ ಬಾವುಟ ತ್ತು ಹಾಕಿದರು ಎಂಬ ಕಾರಣಕ್ಕೆ ನಾನು ಕೋಪಗೊಂಡಿದ್ದು ನಿಜ. ಆ ಕ್ಷಣಕ್ಕೆ ನಾನು ಇನ್ನೊಬ್ಬರ ಮನಸಿಗೆ ಘಾಸಿ ಆಗುವಂತೆ ಮಾತನಾಡಿದೆ. ನಂತರ ನನ್ನ ತಪ್ಪಿನ ಅರಿವಾಗಿ ಸಾರ್ವಜನಿಕವಾಗಿ ಕ್ಷಮೆ ಕೇಳಿದ್ದೇನೆ. ನನ್ನ ಜೀವನದಲ್ಲಿ ಯಾವ ಹೆಣ್ಣಿಗೂ ಅಪಮಾನ ಮಾಡಿಲ್ಲ. ಆದರೆ, ಆಕಸ್ಮಿಕವಾಗಿ ಘಟನೆ ನಡೆದು ಹೋಯ್ತು. ಕೆಲವರು ನನ್ನ ವಿರುದ್ಧ ಷಡ್ಯಂತ್ರ ರೂಪಿಸಿ ಇನ್ನಿಲ್ಲದ ರಾದ್ಧಾಂತ ಮಾಡಿದರು ಎಂದು ಬೇಸರ ವ್ಯಕ್ತಪಡಿಸಿದರು.