ಮೂರ್ಛೆ ರೋಗ ಗುಣಪಡಿಸಬಹದು

Epilepsy can be cured.
Epilepsy can be cured.
Published on
ಶ್ರೀನಿವಾಸಪುರ: ಮೂರ್ಛೆ ರೋಗ ದೀರ್ವಾಗಿ ಉಳಿಯುವ ಕಾಯಿಲೆ ಅಲ್ಲ. ಸರಿಯಾದ ಚಿಕಿತ್ಸೆ ಸಿಕ್ಕರೆ ಆದಷ್ಟು ಬೇಗ ಗುಣಮುಖ ಆಗಬಹುದು. ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ಈ ಕಾಯಿಲೆಗೆ ಒಳಗಾಗಿರುವ ರೋಗಿಗಳನ್ನು ಗುಣಮುಖಪಡಿಸಲು ಇಂಥಹ ಶಿಬಿರಗಳು ಸಹಕಾರಿಯಾಗಿವೆ ಎಂದು ರೋಟರಿ ಉಪ ಪ್ರಾಂತಪಾಲ ಸಿ.ಎಂ.ಆರ್​. ಶ್ರೀನಾಥ್​ ಹೇಳಿದರು.
ಗೌನಿಪಲ್ಲಿ ಆರೋಗ್ಯ ಸಮುದಾಯ ಕೇಂದ್ರದ ಆವರಣದಲ್ಲಿ ಬೆಂಗಳೂರಿನ ರೋಟರಿ ಕ್ಲಬ್​, ಆಸ್ಟರ್​ ಆಸ್ವತ್ರೆ ತಂಡದಿಂದ ಶನಿವಾರ ಆಯೋಜಿಸಿದ್ದ ಅಪಸ್ಮಾರ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಈ ಕಾಯಿಲೆ ನಿವಾರಿಸಿಕೊಳ್ಳಲು ಬೆಂಗಳೂರಿಗೆ ತೆರಳಿ ಈಜಿ ಮಿಷನ್​ ಎಂ.ಆರ್​.ಐ ಮಾಡಿಸಿಕೊಳ್ಳಲು ಹೆಚ್ಚು ಹಣ ಭರಿಸಬೇಕಾಗುತ್ತದೆ. ಈ ಭಾಗದ ರೋಗಿಗಳಿಗೆ ಅನುಕೂಲವಾಗಲು ಈ ಶಿಬಿರ ಆಯೋಜಿಸಲಾಗಿದ್ದು, ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಆಸ್ಟರ್​ ಆಸ್ವತ್ರೆಯ ಡಾ.ಸತೀಶ್​ ರುದ್ರಪ್ಪ ಮಾತನಾಡಿ, ಶಿಬಿರದಲ್ಲಿ ಉಚಿತ ತಪಾಸಣೆ ಮತ್ತು ಮೌಲ್ಯ ಮಾಪನ ಮಾಡುತ್ತೇವೆ. ಬೆಂಗಳೂರಿನ ಅಸ್ವತ್ರೆಯಲ್ಲಿ ನುರಿತ ತಜ್ಞರಿಂದ ಉಚಿತವಾಗಿ ಚಿಕಿತ್ಸೆ ಪಡೆದುಕೊಳ್ಳಬಹುದು ಎಂದು ಮಾಹಿತಿ ನೀಡಿದರು.
ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಮೆಹಬೂಬ್​ ಷರೀಫ್​ ಮಾತನಾಡಿ, ಹಲವು ವರ್ಷಗಳಿಂದ ಈ ಶಿಬಿರ ಮಾಡಬೇಕೆಂಬ ಹಂಬಲ ಇತ್ತು. ತಾಲೂಕಿನ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಈ ಶಿಬಿರ ನಡೆಸಬೇಕು. ಆರೋಗ್ಯ ಇಲಾಖೆ ವೈದ್ಯರು ಮತ್ತು ಸಿಬ್ಬಂದಿ ಸಹಕರಿಸಬೇಕು ಎಂದು ತಿಳಿಸಿದರು.
ನಿತಿನ್​, ಸ್ಟೀಪಂಡ್​ ಡೇವಿಡ್​ ಕಾರ್ತಿಕ್​, ರಾಜೇಶ್​, ಟಿಎಚ್​ಒ, ಡಾ. ಸರ್ವೇಶ್​ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net