ಕನಕಪುರ ತಾಲೂಕಿನ ಶಿವನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಮಹಾ ಸಭೆಯಲ್ಲಿ ಅಧ್ಯಕ್ಷ ಎಸ್.ವಿ. ಸುರೇಶ್ ಮಾತನಾಡಿದರು. ಮಹದೇವಯ್ಯ ನಿರಂಜನಮೂರ್ತಿ,ಹಲಗಪ್ಪ, ವಿಜಯಕುಮಾರ್, ಸತೀಶ್, ಕೆಂಚಪ್ಪ, ಕವಿತಾ ಇತರರು ಇದ್ದರು.
Published on:
Copied
Follow Us
ಕನಕಪುರ :
ಹಾಲು ಉತ್ಪಾದಕರ ಸಹಕಾರ ಸಂಘ ಪ್ರಸ್ತುತ ವರ್ಷ 8,86,690 ರೂ. ನಿವ್ವಳ ಲಾಭ ಗಳಿಸಿದೆ. ಸಂಘ ಸ್ವಂತ ಕಟ್ಟಡ ಹೊಂದಿದ್ದು, ಬ್ಯಾಂಕ್‌ನಲ್ಲಿ 23 ಲಕ್ಷಕ್ಕೂ ಹೆಚ್ಚು ಹಣ ಉಳಿತಾಯವಿದೆ. ಎಂದು ಶಿವನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಸ್.ವಿ. ಸುರೇಶ್ ತಿಳಿಸಿದರು.
ಶಿವನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಹಮ್ಮಿಕೊಂಡಿದ್ದ 2026ನೇ ವಾರ್ಷಿಕ ಮಹಾ ಸಭೆಯಲ್ಲಿ ಮಾತನಾಡಿ, ನಿತ್ಯ 68 ಹಾಲು ಉತ್ಪಾದಕರಿಂದ 1200 ರಿಂದ 150 ನಿತ್ಯ 68 ಹಾಲು ಉತ್ಪಾದಕರಿಂದ 1200 ರಿಂದ 1500 ಲೀಟರ್ ಹಾಲು ಸಂಘಕ್ಕೆ ಸರಬರಾಜು ಆಗುತ್ತಿದ್ದು, ಹಾಲು ಉತ್ಪಾದಕರಿಗೆ ಶೇ 1.90 ಪೈಸೆ ಭೋನಸ್ ನೀಡಲಾಗುವುದು. ಉತ್ಪಾದಕರ ಮಕ್ಕಳಿಗೆ ಪ್ರತಿ ವರ್ಷ ಪ್ರತಿಭಾ ಪುರಸ್ಕಾರ ಮಾಡಲಾಗುತ್ತದೆ. ರೈತರು ಗುಣಮಟ್ಟದ ಹಾಲು ಸರಬರಾಜು ಮಾಡಿ ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದರು.
ಬೆಂಗಳೂರು ಸಹಕಾರ ಹಾಲು ಒಕ್ಕೂಟದ ಕನಕಪುರ ಶಿಬಿರದ ವಿಸ್ತರಣಾಧಿಕಾರಿ ಪ್ರಭಾಕರ್ ಮಾತನಾಡಿ, ರೈತರು ವೈಜ್ಞಾನಿಕವಾಗಿ ಹೈನುಗಾರಿಕೆ ಮಾಡಬೇಕು. ದನಗಳ ಹಸಿರು ಮೇವು ಚಾಪ್ ಕಟ್ಟರ್‌ನಿಂದ ಕತ್ತರಿಸಬೇಕು. ರಾಸುಗಳು ಹಾಲು ಕೊಡುವ ಅನುಗುಣವಾಗಿ ಪಶು ಆಹಾರ ನೀಡಿ,ಕಟ್ಟಿ ಹಾಕುವ ಸ್ಥಳ ಸ್ವಚ್ಛವಾಗಿರಬೇಕು. ಖನಿಜ ಮಿಶಿತ ಪೌಡರ್ ನಿಯಮಿತವಾಗಿ ನೀಡಬೇಕು. ಹೆಚ್ಚಿನ ಸಲಹೆಗಳಿಗಾಗಿ ಪಶು ವೈದ್ಯರನ್ನು ಸಂಪರ್ಕಿಸಬೇಕು ಎಂದರು.
ಕೃಷಿ ಅಧಿಕಾರಿ ಸುನೀಲ್ ಮಾತನಾಡಿ, ಸಂಘವು ಲಾಭದಾಯಕವಾಗಿ ನಡೆಯುತ್ತಿದ್ದು, ಪ್ರಸ್ತುತ ವರ್ಷದಿಂದ ರೈತರಿಗೆ ರಾಸುಗಳ ಮ್ಯಾಟ್ ಸರಬರಾಜು ಮಾಡಲಾಗುವುದು. ಗುಣಮಟ್ಟದ ಪಶು ಆಹಾರ ಸರಬರಾಜು ಮಾಡಲಾಗುವುದು ಎಂದು ಹೇಳಿದರು.
ಹೆಚ್ಚು ಹಾಲು ಉತ್ಪಾದಿಸಿ ಸರಬರಾಜು ಮಾಡಿದ 6 ಜನ ಕೃಷಿಕರನ್ನು ಸನ್ಮಾನಿಸಲಾಯಿತು.
ಉಪಾಧ್ಯಕ್ಷ ಮಹಾದೇವಯ್ಯ ನಿರ್ದೇಕ ಎಸ್.ಎಂ ನಿರಂಜನಮೂರ್ತಿ, ಎಸ್.ಎಚ್ ಹಲಗಪ್ಪ, ಎಸ್.ವಿ ವಿಜಯಕುಮಾರ್, ಸತೀಶ್, ಕೆಂಚಪ್ಪ, ಕವಿತಾ, ಹುಚ್ಚೇಗೌಡ, ಮಹದೇವಮ್ಮ, ಜ್ಯೋತಿ, ಭ್ಯಾಗ್ಯಮ್ಮ, ವೀರಮಾದಯ್ಯ ಹಾಲು ಪರೀಕ್ಷಕ ದೊಡ್ಡವೀರೇಗೌಡ, ಸಹಾಯಕ ಮಲ್ಲವೀರಯ್ಯ ಇದ್ದರು.