ಅರ್ಹ ಮತದಾರರ ಹೆಸರು ಡಿಲೀಟ್​ ಆಗದಿರಲಿ

 ಅಫಜಲಪುರ ತಾಲೂಕಿನ ಗೊಬ್ಬೂರ (ಬಿ) ಗ್ರಾಮದಲ್ಲಿ ಆಯೋಜಿಸಿದ್ದ ಎಸ್​ಐಆರ್​ ಕಾರ್ಯಾಗಾರವನ್ನು ಶಾಸಕ ಎಂ.ವೈ.ಪಾಟೀಲ್​ ಉದ್ಘಾಟಿಸಿದರು. ಸುರೇಶ ತಿಪಶೆಟ್ಟಿ, ಶಿವಶರಣಪ್ಪ ಹೀರಾಪುರ, ಸರ್ವರ್​ ಪಟೇಲ್​ ಇತರರಿದ್ದರು.
ಅಫಜಲಪುರ ತಾಲೂಕಿನ ಗೊಬ್ಬೂರ (ಬಿ) ಗ್ರಾಮದಲ್ಲಿ ಆಯೋಜಿಸಿದ್ದ ಎಸ್​ಐಆರ್​ ಕಾರ್ಯಾಗಾರವನ್ನು ಶಾಸಕ ಎಂ.ವೈ.ಪಾಟೀಲ್​ ಉದ್ಘಾಟಿಸಿದರು. ಸುರೇಶ ತಿಪಶೆಟ್ಟಿ, ಶಿವಶರಣಪ್ಪ ಹೀರಾಪುರ, ಸರ್ವರ್​ ಪಟೇಲ್​ ಇತರರಿದ್ದರು.
Published on
ಅಫಜಲಪುರ: ಪ್ರಜಾಪ್ರಭುತ್ವವನ್ನು ಸದೃಢಗೊಳಿಸಲು ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್​ಐಆರ್​)ಯಲ್ಲಿ ಪ್ರತಿಯೊಬ್ಬರೂ ಪಾಲ್ಗೊಂಡು ಪೂರಕ ದಾಖಲೆ ನೀಡಬೇಕು ಎಂದು ಶಾಸಕ ಎಂ.ವೈ.ಪಾಟೀಲ್​ ಹೇಳಿದರು. ಗೊಬ್ಬೂರ (ಬಿ) ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಎಸ್​ಐಆರ್​ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಬಿಎಲ್​ಎ ಹಾಗೂ ಪದ ಕಾರ್ಯಕರ್ತರು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಯಾವುದೇ ಅರ್ಹ ಮತದಾರರ ಹೆಸರು ಪಟ್ಟಿಯಿಂದ ಹೊರಹೋಗದಂತೆ ಎಚ್ಚರ ವಹಿಸಬೇಕು ಎಂದು ತಿಳಿಸಿದರು. ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯ ಸುರೇಶ ತಿಪಶೆಟ್ಟಿ, ಜಿಪಂ ಮಾಜಿ ಸದಸ್ಯ ಶಿವಶರಣಪ್ಪ ಹೀರಾಪುರ, ಪಿಎಲ್​ಡಿ ಬ್ಯಾಂಕ್​ ಉಪಾಧ್ಯ ಸರ್ವರ್​ ಪಟೇಲ್​, ಪ್ರಮುಖರಾದ ಮಲ್ಲಿಕಾರ್ಜುನ ರ್ಖಗೆ, ಅಣವೀರಯ್ಯ ಮಠಪತಿ, ಅಂಬರೀಶ ಬುರಲಿ, ಶಿವರಾಜ ಬಾದನಳ್ಳಿ, ಸಿದ್ದು ಜವಳಿ, ಪ್ರವಿಣ ಕಲ್ಲೂರ, ಸಚಿನ ಲಿಂಗಶೆಟ್ಟಿ, ಯಲ್ಲಣ್ಣಗೌಡ ಪಾಟೀಲ್​, ಜಟ್ಟೆಪ್ಪ ಪೂಜಾರಿ, ದತ್ತು ಜೆಮಶೆಟ್ಟಿ, ಅಲ್ತಾಫ್​ ನರೋಣಿ, ರಾಕೇಶ ವಡಗೇರಿ, ಅಸ್ಪಾಕ್​ ಬಂದರವಾಡ, ಸುಭಾಷ ಲಿಂಗಶೆಟ್ಟಿ, ಜಗದೇವಪ್ಪ ಪಾಟೀಲ್​, ರಾಕೇಶ ರಾಠೋಡ್​ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net