278 ಸರ್ಕಾರಿ ಶಾಲೆಗಳಲ್ಲಿ 8ನೇ ತರಗತಿಗೆ ಆಂಗ್ಲ ಮಾಧ್ಯಮ ಆರಂಭ

278 ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭ
278 ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭ
Published on

ಪ್ರಮುಖ ಮುಖ್ಯಾಂಶಗಳು

  • ರಾಜ್ಯದ ಒಂದು ಸಾವಿರ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಗಳಲ್ಲಿ 2029-20ನೇ ಸಾಲಿನಿಂದ ಕನ್ನಡ ಮಾಧ್ಯಮದೊಂದಿಗೆ ಆಂಗ್ಲ ಮಾಧ್ಯಮ (ದ್ವಿ-ಭಾಷಾ) ತರಗತಿಗಳನ್ನು ಆರಂಭಿಸಲು ಯೋಜನೆಯನ್ನು ಅನುಷ್ಠಾನ ಮಾಡಲಾಗಿತ್ತು.
  • 8ನೇ ತರಗತಿಯಲ್ಲಿ ಕೇವಲ ಕನ್ನಡ ಮಾಧ್ಯಮ ಬೋಧನೆ ಮಾಡುತ್ತಿದ್ದು, ದ್ವಿ ಭಾಷಾ ಮಾಧ್ಯಮ ಶಾಲೆಗಳು ಇರಲಿಲ್ಲ. ಇದರಿಂದ ವಿದ್ಯಾರ್ಥಿಗಳ ಕಲಿಕೆಗೆ ಅಡ್ಡಿಯಾಗಿತ್ತು.
  • ಪ್ರಸ್ತಾವನೆಯನ್ನು ಪರಿಗಣಿಸಿರುವ ಸರ್ಕಾರವು, 278 ಶಾಲೆಗಳಿಗೆ ಅನುಮತಿ ನೀಡಿದೆ.
ಬೆಂಗಳೂರು:

ಅಗತ್ಯ ಮೂಲಸೌಕರ್ಯವಿರುವ ಹಾಗೂ ಬೋಧನೆಗೆ ಶಿಕ್ಷಕರ ಲಭ್ಯತೆವಿರುವ 278 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 8ನೇ ತರಗತಿಗೆ ಉನ್ನತೀಕರಿಸಿ ಆಂಗ್ಲ ಮಾಧ್ಯಮದಲ್ಲಿ ಬೋಧನೆ ಮಾಡಲು ಸರ್ಕಾರ ಮಂಜೂರಾತಿ ನೀಡಿದೆ.

ರಾಜ್ಯದ ಒಂದು ಸಾವಿರ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಗಳಲ್ಲಿ 2029-20ನೇ ಸಾಲಿನಿಂದ ಕನ್ನಡ ಮಾಧ್ಯಮದೊಂದಿಗೆ ಆಂಗ್ಲ ಮಾಧ್ಯಮ (ದ್ವಿ-ಭಾಷಾ) ತರಗತಿಗಳನ್ನು ಆರಂಭಿಸಲು ಯೋಜನೆಯನ್ನು ಅನುಷ್ಠಾನ ಮಾಡಲಾಗಿತ್ತು.
ಈ ವಿದ್ಯಾರ್ಥಿಗಳು 2025-26ನೇ ಸಾಲಿಗೆ 7ನೇ ತರಗತಿ ಪೂರ್ಣಗೊಳಿಸಿ 2026=27ನೇ ಸಾಲಿಗೆ 8ನೇ ತರಗತಿಗೆ ಮುಂದುವರಿಯಬೇಕಿದೆ. ಆದರೆ, 8ನೇ ತರಗತಿಯಲ್ಲಿ ಕೇವಲ ಕನ್ನಡ ಮಾಧ್ಯಮ ಬೋಧನೆ ಮಾಡುತ್ತಿದ್ದು, ದ್ವಿ ಭಾಷಾ ಮಾಧ್ಯಮ ಶಾಲೆಗಳು ಇರಲಿಲ್ಲ. ಇದರಿಂದ ವಿದ್ಯಾರ್ಥಿಗಳ ಕಲಿಕೆಗೆ ಅಡ್ಡಿಯಾಗಿತ್ತು.
ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ 8ನೇ ತರಗತಿಗೆ ಆಂಗ್ಲ ಮಾಧ್ಯಮ ಬೋಧನೆಗಾಗಿ ಉನ್ನತೀಕರಿಸಬೇಕಿದೆ. ಇದರಿಂದ ಸರ್ಕಾರಕ್ಕೆ ಯಾವುದೇ ಆರ್ಥಿಕ ಹೊರೆ ಉಂಟಾಗುವುದಿಲ್ಲ ಎಂದು ಶಾಲಾ ಶಿಕ್ಷಣ ಆಯುಕ್ತಾಲಯವು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.
ತರಗತಿವಾರು ಮಕ್ಕಳ ಸಂಖ್ಯೆ, ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರ ಸಂಖ್ಯೆ, ಶಿಕ್ಷಕ ಹಾಗೂ ಮಕ್ಕಳ ಅನುಪಾತ, ಮೂಲಭೂತ ಸೌಕರ್ಯಗಳು, 8ನೇ ತರಗತಿಗೆ ಆಂಗ್ಲ ಮಾಧ್ಯಮ ಹೊಂದಿರುವ ಶಾಲೆಗಳ ಲಭ್ಯತೆ, 2 ಕಿಮೀ ಒಳಗೆ ಇರುವ ಶಾಲೆಗಳು ಮತ್ತು ವ್ಯಾಪ್ತಿಯನ್ನು ಮೀರಿದ ಶಾಲೆಗಳನ್ನು ಪರಿಗಣಿಸಿ 331 ಶಾಲೆಗಳನ್ನು ಉನ್ನತೀಕರಿಸಬೇಕಿದೆ ಎಂಬ ಪಟ್ಟಿಯನ್ನು ನೀಡಿತ್ತು. ಪ್ರಸ್ತಾವನೆಯನ್ನು ಪರಿಗಣಿಸಿರುವ ಸರ್ಕಾರವು, 278 ಶಾಲೆಗಳಿಗೆ ಅನುಮತಿ ನೀಡಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net