ದೇಶದ ಅಭಿವೃದ್ಧಿಗೆ ಇಂಜಿನಿಯರ್ ಪಾತ್ರ ಮಹತ್ತರ

ಕೆಎಲ್ಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಜಿನಿಯರ್ ಡೆ ಆಚರಣೆ
ಕೆಎಲ್ಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಜಿನಿಯರ್ ಡೆ ಆಚರಣೆ
Published on

ಪ್ರಮುಖ ಮುಖ್ಯಾಂಶಗಳು

  • ಚಿಕ್ಕೋಡಿಲಿ ಇಂಜಿನಿಯರಿಂಗ್ ಡೆ ಆಚರಣೆ
  • ಕೆಎಲ್ಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಜಿನಿಯರ್ ಡೆ ಆಚರಣೆ
  • ಚಿಕ್ಕೋಡಿ ಪಟ್ಟಣದ ಕೆಎಲ್ಇ ಇಂಜಿನಿಯರಿಂಗ್ ಕಾಲೇಜು
ದೇಶದ ಅಭಿವೃದ್ಧಿಯಲ್ಲಿ ಇಂಜಿನಿಯರ್ ಪಾತ್ರ ಮಹತ್ವದ್ದು
| ಪ್ರಾಂಶುಪಾಲ ಡಾ.ದರ್ಶನಕುಮಾರ ಬಿಳ್ಳೂರ ಅಭಿಪ್ರಾಯ | ಇಂಜಿನಿಯರ್ಸ್ ಡೇ ಕಾರ್ಯಕ್ರಮ
ವಿಜಯವಾಣಿ ಸುದ್ದಿಜಾಲ ಚಿಕ್ಕೋಡಿ:

ಸದೃಡ ಸಮಾಜ ನಿರ್ಮಾಣದಲ್ಲಿ ಹಾಗೂ ದೇಶದ ಅಭಿವೃದ್ಧಿಯಲ್ಲಿ ಇಂಜಿನಿಯರ್‌ಗಳು ಪಾತ್ರ ಮಹತ್ವದ್ದಾಗಿದೆ ಎಂದು ಕೆಎಲ್‌ಇ ಕಾಲೇಜ ಇಂಜಿನಿಯರಿಅಗ್ ಮಹಾವಿದ್ಯಾಲ ಪ್ರಾಂಶುಪಾಲ ಡಾ.ದರ್ಶನಕುಮಾರ ಬಿಳ್ಳೂರ ಅಭಿಪ್ರಾಯಪಟ್ಟರು.
ಪಟ್ಟಣದ ಕೆಎಲ್‌ಇ ಕಾಲೇಜ ಇಂಜಿನಿಯರಿಎಗ್ ಮಹಾವಿದ್ಯಾಲಯದಲ್ಲಿ ಮಂಗಳವಾರ ನಡೆದ ಇಂಜಿನಿಯರ್ಸ್ ಡೇ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು ಇದೆ.
ಸರ್.ಎಂ.ವಿಶ್ವೇಶ್ವರಯ್ಯ ಅವರು ತಮ್ಮ ಜ್ಞಾನ, ಕೌಶಲ, ಶಿಸ್ತು ಮತ್ತು ಸೇವಾಭಾವನೆಯ ಮೂಲಕ ಸಮಾಜ ಹಾಗೂ ದೇಶದ ಅಭಿವೃದ್ಧಿಗೆ ಸಹಕರಿಸಿದರು. ಮಹತ್ವದ ಕೊಡುಗೆಯಾಗಿದೆ. ವಿದ್ಯಾರ್ಥಿಗಳು ಕೂಡ ತಮ್ಮ ಇಂಜಿನಿಯರಿಆಗ್ ಜ್ಞಾನ ಮತ್ತು ಕೌಶಲಗಳನ್ನು ಸಮಾಜದ ಒಳಿತಿಗಾಗಿ ದೇಶದ ಅಭಿವೃದ್ಧಿಗೆ ಕೊಡುಗೆ ಹೇಳಿದರು.
ಲೋಕೋಪಯೋಗಿ ಇಲಾಖೆ ಸಹಾಯಕ ಇಂಜಿನಿಯರ್ ಸೋಮಶೇಖರ ಪಟತ ಮಾತನಾಡಿ, ಸುಸ್ಥಿರ ಅಭಿವೃದ್ಧಿ, ಮೂಲಸೌಕರ್ಯ ಅಭಿವೃದ್ಧಿ, ಪರಿಸರ ಸಂರಕ್ಷಣೆ ಹಾಗೂ ನೈಜ ಜೀವನದ ಸಮಸ್ಯೆಗಳಿಗೆ ನವೀನ ಪರಿಹಾರಗಳನ್ನು ಕಂಡುಹಿಡಿಯುವಲ್ಲಿ ಇಂಜಿನಿಯರ್‌ಗಳ ಪ್ರಮುಖ ಜವಾಬ್ದಾರಿಯಾಗಿದೆ. ಕೃತಕ ಬುದ್ಧಿಮತ್ತೆ (ಎಐ) ಬಳಕೆ, ವಿನ್ಯಾಸ, ನಿರ್ಮಾಣ, ಯೋಜನೆ, ಮೂಲಸೌಕರ್ಯ ನಿರ್ವಹಣೆ ಮತ್ತು ತಾಂತ್ರಿಕ ನಿರ್ಧಾರ ಕೈಗೊಳ್ಳುವಲ್ಲಿ ಭವಿಷ್ಯದ ಸಾಧ್ಯತೆಗಳ ಕುರಿತು ಮಾಹಿತಿ.
ಸಿವಿಲ್ ವಿಭಾಗದ ಮುಖ್ಯಸ್ಥ ಪ್ರೊ.ಪ್ರದೀಪ ಹೊದ್ಲುರ, ಪ್ರೊ.ಸುಶೀಲ್‌ಕುಮಾರ ಭಗಾಟೆ, ಪ್ರೊ.ಶಂಕರಗೌಡ ಪಾಟೀಲ, ಪ್ರೊ. ವಿನಯ ಮನಗೂಳೆ, ಪ್ರೊ.ಬಾಳಪ್ಪ ನವಳಾಯಿ, ಪ್ರೊ.ಸವಿತಾ ಮಾಳಿ, ಪ್ರೊ.ರಂಜನಿ ಚವ್ಹಾಣ, ಡಾ.ಸುನೀಲ ಶಿಂಧೆ, ಡಾ.ಸಂಜಯ ಹನಗಂಡಿ, ಡಾ.ಕುಮಾರ ಚೌಗಲಾ, ಡಾ.ವೀರಣ್ಣ ಮೋದಿ, ಡಾ.ಸಂಜಯ ಪೂಜೇರಿ, ಡಾ.ಸುರೇಶ ಕುಂಬಾರ, ಡಾ.ಮಹಾಂತೇಶ ಪತಿಮಠ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net