ರಹಮತ್ ನಗರದಲ್ಲಿ ಅತಿಕ್ರಮಣ ತೆರವು

ಜಮಖಂಡಿ ನಗರದ ರಹಮತ್ ನಗರದಲ್ಲಿ ಅತಿಕ್ರಮಿಸಿ ನಿರ್ಮಿಸ ಲಾಗಿದ್ದ ಕಟ್ಟಡಗಳನ್ನು ನಗರಸಭೆ ಅಧಿಕಾರಿಗಳು ತೆರವುಗೊಳಿಸಿದರು. ಕಂದಾಯ ಅಧಿಕಾರಿ ಯಲ್ಲಪ್ಪ ಬಿದರಿ, ಕುಸುಮಾ ಸೋಪಡ್ಲ, ಸೋಮು ದೇವರಮನಿ ಇತರರಿದ್ದರು.
ಜಮಖಂಡಿ ನಗರದ ರಹಮತ್ ನಗರದಲ್ಲಿ ಅತಿಕ್ರಮಿಸಿ ನಿರ್ಮಿಸ ಲಾಗಿದ್ದ ಕಟ್ಟಡಗಳನ್ನು ನಗರಸಭೆ ಅಧಿಕಾರಿಗಳು ತೆರವುಗೊಳಿಸಿದರು. ಕಂದಾಯ ಅಧಿಕಾರಿ ಯಲ್ಲಪ್ಪ ಬಿದರಿ, ಕುಸುಮಾ ಸೋಪಡ್ಲ, ಸೋಮು ದೇವರಮನಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನಗರಸಭೆ ಅಧಿಕಾರಿಗಳಿಂದ ಕಾರ್ಯಾಚರಣೆ
  • ಸಾರ್ವಜನಿಕರಿಗೆ ಅಡಚಣೆ ಹಿನ್ನೆಲೆ

ಜಮಖಂಡಿ: ನಗರದ ರಹಮತ್ ನಗರದಲ್ಲಿ ರಸ್ತೆ ಹಾಗೂ ಚರಂಡಿ ಮೇಲೆ ಅತಿಕ್ರಮಿಸಿ ನಿರ್ಮಿಸಲಾಗಿದ್ದ ಏಳಕ್ಕೂ ಅಧಿಕ ಮನೆಗಳನ್ನು ನಗರಸಭೆ ಅಧಿಕಾರಿಗಳು ತೆರವುಗೊಳಿಸಿದರು.

ಈ ಕುರಿತು ನಗರಸಭೆ ಆಯುಕ್ತ ಜ್ಯೋತಿ ಗಿರೀಶ ಮಾತನಾಡಿ, ರಹಮತ್ ನಗರದಲ್ಲಿ ಅತಿಕ್ರಮಣ ಕಟ್ಟಡಗಳನ್ನು ತೆರವುಗೊಳಿಸಲಾಗಿದೆ. ರಸ್ತೆ ನವೀಕರಣ ಹಾಗೂ ಸಾರ್ವಜನಿಕರ ಸಂಚಾರಕ್ಕೆ ಅತಿಕ್ರಮಣದಿಂದ ತೊಂದರೆಯಾಗುತ್ತಿತ್ತು.
ಈ ಹಿನ್ನೆಲೆಯಲ್ಲಿ ಈ ಹಿಂದೆ ಪ್ರದೇಶದಲ್ಲಿ ಸರ್ವೆ ಕಾರ್ಯ ನಡೆಸಿ, ಅತಿಕ್ರಮಣ ತೆರವುಗೊಳಿಸುವಂತೆ ಕಟ್ಟಡ ಮಾಲೀಕರಿಗೆ ಮಾಹಿತಿ ನೀಡಿ ನೋಟಿಸ್ ನೀಡಲಾಗಿತ್ತು. ಆದರೆ ಕಟ್ಟಡ ಮಾಲೀಕರು ನಗರಸಭೆಯೊಂದಿಗೆ ಸಹಕರಿಸದ ಹಿನ್ನೆಲೆಯಲ್ಲಿ ತೆರವು ಕಾರ್ಯಾಚರಣೆ ನಡೆಸಲಾಗಿದೆ ಎಂದು ತಿಳಿಸಿದರು.
ನಗರಸಭೆ ವ್ಯಾಪ್ತಿಯಲ್ಲಿ ರಸ್ತೆ, ಚರಂಡಿ ಹಾಗೂ ಪಾದಚಾರಿ ಮಾರ್ಗಗಳನ್ನು ಅತಿಕ್ರಮಿಸಿ ನಿರ್ಮಿಸಿರುವ ಅನಧಿಕೃತ ಕಟ್ಟಡಗಳು, ಶೆಡ್‌ಗಳು ಹಾಗೂ ಕಂಪೌಂಡ್‌ಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಮುಂದುವರಿಯಲಿದೆ.
ಹಿಂದೂ ರುದ್ರಭೂಮಿ ಕಂಪೌಂಡ್‌ಗೆ ಹೊಂದಿಕೊಂಡು ನಿರ್ಮಿಸಿರುವ ಅನಧಿಕೃತ ಶೆಡ್‌ಗಳು, ಪ್ರಮುಖ ರಸ್ತೆಗಳ ಬದಿಯಲ್ಲಿನ ಅತಿಕ್ರಮಣಗಳು ಹಾಗೂ ಚರಂಡಿಗಳ ಮೇಲೆ ನಿರ್ಮಿಸಿರುವ ಕಂಪೌಂಡ್‌ಗಳನ್ನು ಸಹ ತೆರವುಗೊಳಿಸಲಾಗುವುದು ಎಂದು ಹೇಳಿದರು.
ಕಂದಾಯ ಅಧಿಕಾರಿ ಯಲ್ಲಪ್ಪ ಬಿದರಿ, ಅಭಿಯಂತರರಾದ ಕುಸುಮಾ ಸೋಪಡ್ಲ, ಸೋಮು ದೇವರಮನಿ, ಅಮೀತ ಯಳಕರ, ಸದಾಶಿವ ಹಣಮಗೊಲ್ಲರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net