ಮುಳ್ಳೂರು ಗ್ರಾಮದ ಸರ್ವೇ ನಂ.66/3, 68, 79, 76ರಲ್ಲಿ ನಕಾಶೆಯಂತೆ ಇದ್ದ ಜಮೀನು ರಸ್ತೆಯನ್ನು ಒತ್ತುವರಿ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮದ ಶಿವಕುಮಾರ್ ದೂರು ನೀಡಿದು,್ದ ಇದೀಗ ತಹಸಿಲ್ದಾರ್ ಅವರ ಆದೇಶದ ಮೇರೆಗೆ ರಾಜಸ್ವ ನಿರೀಕ್ಷಕ ನಿರಂಜನ್, ಗ್ರಾಮಲೆಕ್ಕಿಗ ರಕ್ಷಿತಾ, ಸರ್ವೆಯರ್ ಪುಟ್ಟಸ್ವಾಮಿ ಸ್ಥಳಕ್ಕೆ ಭೇಟಿ ನೀಡಿ ಒತ್ತುವರಿ ತೆರವುಗೊಳಿಸಿದರು.