ಕಲಬುರಗಿ ರಂಗಾಯಣ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸತಿ ಇಲಾಖೆ ಶುಕ್ರವಾರ ಆಯೋಜಿಸಿದ್ದ ಸಾಧಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದೆ ಹನೀಫಾ ಶೇಖ್ ಅವರನ್ನು ಸತ್ಕರಿಸಲಾಯಿತು. ಡಾ.ಸುಜಾತಾ ಜಂಗಮಶೆಟ್ಟಿ, ಬಸವರಾಜ ಹೂಗಾರ, ಜಗದೀಶ್ವರಿ ನಾಸಿ, ಸಿದ್ರಾಮ ಶಿಂಧೆ, ಗಿರಿಜಾ ಕರ್ಪೂರ್, ಬಾಬುರಾವ ಕೋಬಾಳ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಹಿರಿಯ ಕಲಾವಿದೆ ಹನೀಫಾ ಶೇಖ್ ಅಭಿಮತ
ರಂಗಾಯಣದಲ್ಲಿ ಸಾಧಕರೊಂದಿಗೆ ಸಂವಾದ
ಕಲಬುರಗಿ: ನಾನು ಸ್ವತಃ ಸಾಧನೆ ಮಾಡಿಲ್ಲ, ಬದಲಾಗಿ ಜನರ ಹೃದಯದಲ್ಲಿ ಸ್ಥಾನ ಪಡೆದಿದ್ದೇನೆ. ಕಲಬುರಗಿ ಜಿಲ್ಲೆ ಕಲೆ ವಿಷಯದಲ್ಲಿ ಸಾಕಷ್ಟು ಹಿಂದುಳಿದಿದ್ದು, ಇಲ್ಲಿನ ಕಲಾವಿದರಿಗೆ ಹಣಕ್ಕಿಂತಲೂ ಹೆಚ್ಚಾಗಿ ಪ್ರೋತ್ಸಾಹ ಮತ್ತು ಗೌರವದ ಅಗತ್ಯವಿದೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸತ ಹಿರಿಯ ಕಲಾವಿದೆ ಹನೀಫಾ ಎಂ.ಶೇಖ್ ಹೇಳಿದರು.
ರಂಗಾಯಣ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸತಿ ಇಲಾಖೆ ಶುಕ್ರವಾರ ಆಯೋಜಿಸಿದ್ದ ಸಾಧಕರೊಂದಿಗೆ ಸಂವಾದ ಕಾರ್ಯಕ್ರಮ ಉದ್ಘಾಟಿಸಿದ ಅವರು, ಬಡತನದ ದಿನಗಳಲ್ಲಿ ನನಗೆ ಜಾನಪದ ಕಲೆಯೇ ಉಸಿರಾಯಿತು ಎಂದು ಸ್ಮರಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು ಮತ್ತು ಸಹ ಕಲಾವಿದರು ನನ್ನೊಂದಿಗೆ ಇರುವಾಗ ನಾನು ಬಡವಳಲ್ಲ. ಇಲಾಖೆ ಬೆಂಬಲ ಶ್ಲಾಘಸಿ ತಮ್ಮದೇ ಸ್ವಂತ ರಚನೆಯ ಭಜನಾ ಗೀತೆ ಹಾಡಿ ಪ್ರೇಕರಲ್ಲಿ ಸಂತಸ ತುಂಬಿದರು. ಕಲಾವಿದರು ತಮ್ಮ ದಾಖಲೆಗಳನ್ನು ಸಕಾಲದಲ್ಲಿ ಸರ್ಕಾರಕ್ಕೆ ಸಲ್ಲಿಸಿ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಬಸವರಾಜ ಹೂಗಾರ ಮಾತನಾಡಿ, ಕಲ್ಯಾಣ ಕರ್ನಾಟಕ ವಚನ, ತತ್ವಪದ ಹಾಗೂ ದಾಸ ಪರಂಪರೆ ಮೂಲಕ ಜಗತ್ತಿಗೆ ಮಹಿಳಾ ಧ್ವನಿ ಪರಿಚಯಿಸಿದ ಸಾಂಸತಿಕ ತಾಯಿ ನೆಲ ಎಂದು ಸಂತಸ ವ್ಯಕ್ತಪಡಿಸಿದರು.
ರಂಗಾಯಣ ಆಡಳಿತಾಧಿಕಾರಿ ಸಿದ್ರಾಮ ಸಿಂಧೆ ಮಾತನಾಡಿ, ಕಕದ ಕಡಕೋಳ ಮಡಿವಾಳಪ್ಪನವರ ತತ್ವಪದಗಳನ್ನು ಗಾಯನ ಮತ್ತು ಸಂಗೀತದ ಮೂಲಕ ಇಂದಿನ ಪೀಳಿಗೆಗೆ ತಲುಪಿಸಿ ನಾಡಿನ ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ಹನೀಫಾ ಕೊಡುಗೆ ಅಪಾರ. ನಶಿಸುತ್ತಿರುವ ಸಾಂಪ್ರದಾಯಿಕ ಕಲೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇಂತಹ ಹಿರಿಯ ತತ್ವಪದಕಾರರನ್ನು ಗುರುತಿಸಿ ವೇದಿಕೆ ಕಲ್ಪಿಸಿದ ಇಲಾಖೆಗೆ ಅಭಿನಂದನೆ ಸಲ್ಲಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ಜಗದೀಶ್ವರಿ ನಾಸಿ ಸ್ವಾಗತಿಸಿದರು. ರಂಗಾಯಣ ನಿರ್ದೇಶಕಿ ಡಾ.ಸುಜಾತಾ ಜಂಗಮಶೆಟ್ಟಿ, ದತ್ತಾತ್ರೇಯ ಭಂಗಿ, ಸಿದ್ಧರಾಮ ಪೊಲೀಸ್ ಪಾಟೀಲ್, ಕಲಾವಿದರಾದ ಬಾಬುರಾವ ಕೋಬಾಳ, ಗಿರಿಜಾ ಕರ್ಪೂರ ಇತರರಿದ್ದರು.
"
ಸಂಪ್ರದಾಯಸ್ಥ ಕುಟುಂಬದಿಂದ ಬಂದು ತತ್ವಪದಗಳ ಮೂಲಕ ಸಂಸ್ಕೃತಿಕ ಚರಿತ್ರೆ ಸೃಷ್ಟಿಸಿದ ಹನೀಫಾ ಶೇಖ್ ಅವರ ಬದುಕು ಇಂದಿನ ಪೀಳಿಗೆಗೆ ಪ್ರೇರಣೆಯಾಗಿದೆ.
— > ಬಸವರಾಜ ಹೂಗಾರ ಜಂಟಿ ನಿರ್ದೇಶಕ, ಕನ್ನಡ ಮತ್ತು ಸಂಸತಿ ಇಲಾಖೆ