ಮಹಿಳಾ ಮೀಸಲಾತಿ ಮಸೂದೆ ಜಾರಿ ಮಾಡಿ

ಮಹಿಳಾ ಮೀಸಲಾತಿ ಮಸೂದೆಗೆ ಆಗ್ರಹಿಸಿ ಯಾದಗಿರಿಯಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು. ಲಲಿತಾ ಅನಪುರ, ನಾಗರತ್ನ ಕುಪ್ಪಿ, ಸುನಿತಾ ಚವ್ಹಾಣ್​, ಪ್ರಭಾವತಿ ಕಲಾಲ್​, ಜಿಲ್ಲಾ ಕಾರ್ಯದರ್ಶಿ ವಿಜಯಲಕ್ಷಿ$್ಮ ನಾಯಕ, ರಮಾದೇವಿ ಕಾವಲಿ, ಮಲ್ಲಮ್ಮ ಹೊಸಪೇಟೆ, ಸ್ನೇಹ ರಸಳಕರ, ಶಕುಂತಲಾ ಜಿ, ಭೀಮಬಾಯಿ ಶೆಂಡಿಗಿ ಇತರರಿದ್ದರು.
ಮಹಿಳಾ ಮೀಸಲಾತಿ ಮಸೂದೆಗೆ ಆಗ್ರಹಿಸಿ ಯಾದಗಿರಿಯಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು. ಲಲಿತಾ ಅನಪುರ, ನಾಗರತ್ನ ಕುಪ್ಪಿ, ಸುನಿತಾ ಚವ್ಹಾಣ್​, ಪ್ರಭಾವತಿ ಕಲಾಲ್​, ಜಿಲ್ಲಾ ಕಾರ್ಯದರ್ಶಿ ವಿಜಯಲಕ್ಷಿ$್ಮ ನಾಯಕ, ರಮಾದೇವಿ ಕಾವಲಿ, ಮಲ್ಲಮ್ಮ ಹೊಸಪೇಟೆ, ಸ್ನೇಹ ರಸಳಕರ, ಶಕುಂತಲಾ ಜಿ, ಭೀಮಬಾಯಿ ಶೆಂಡಿಗಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬಿಜೆಪಿ ಮಹಿಳಾ ಮೋರ್ಚಾದಿಂದ ಪ್ರತಿಭಟನೆ
  • ಕಾಂಗ್ರೆಸ್​ ವಿರುದ್ಧ ಹರಿಹಾಯ್ದ ಕಾರ್ಯಕರ್ತೆಯರು
ಯಾದಗಿರಿ: ಮಹಿಳಾ ಮೀಸಲಾತಿ ಮಸೂದೆ (ನಾರಿ ಶಕ್ತಿ ವಂದನಾ ಅಧಿನಿಯಮ) ಜಾರಿಗೆ ವಿಳಂಬವಾಗುತ್ತಿದೆ ಎಂದು ಆರೋಪಿಸಿ, ಕಾಂಗ್ರೆಸ್​ ಹಾಗೂ ಅದರ ಮಿತ್ರ ಪಗಳ ವಿರುದ್ಧ ಬಿಜೆಪಿ ಮಹಿಳಾ ಮೋರ್ಚಾ ಮತ್ತು ನಾರಿ ಶಕ್ತಿ ಫೋರಂನಿಂದ ನಗರದಲ್ಲಿ ಬೃಹತ್​ ಪ್ರತಿಭಟನೆ ನಡೆಸಿದರು.
ಕೇಂದ್ರ ಸರ್ಕಾರ ಅಂಗೀಕರಿಸಿರುವ ಮಹಿಳಾ ಮೀಸಲಾತಿ ಮಸೂದೆಯನ್ನು ತಣ ಜಾರಿಗೆ ತರಬೇಕು ಎಂದು ಆಗ್ರಹಿಸಿ ಘೋಷಣೆಗಳನ್ನು ಕೂಗಿದರು. ಮಹಿಳೆಯರ ರಾಜಕೀಯ ಸಬಲೀಕರಣಕ್ಕೆ ಈ ಮಸೂದೆ ಅತ್ಯಂತ ಮಹತ್ವದ್ದಾಗಿದ್ದು, ಹೀಗಾಗಿ ಕೂಡಲೇ ಜಾರಿ ಮಾಡಬೇಕು ಎಂದು ಆಗ್ರಹಿಸಿದರು. ಈ ವೇಳೆ ಜಾರಿಯಲ್ಲಿ ಉಂಟಾಗುತ್ತಿರುವ ವಿಳಂಬ ನೀತಿ ಮಹಿಳೆಯರ ಹಕ್ಕುಗಳಿಗೆ ಧಕ್ಕೆ ತರುತ್ತಿದೆ ಎಂದು ಅವರು ದೂರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಹಿಳಾ ಮೋರ್ಚಾ ಪದಾಧಿಕಾರಿಗಳು ಸಂಸತ್ತು ಹಾಗೂ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಸಮಾನ ಪ್ರತಿನಿಧಿತ್ವ ಸಿಗಬೇಕಾದರೆ ಮೀಸಲಾತಿ ಅನಿವಾರ್ಯ. ಮಹಿಳಾ ಹಕ್ಕುಗಳ ವಿಚಾರದಲ್ಲಿ ರಾಜಕೀಯ ಪಗಳು ದ್ವಂದ್ವ ನಿಲುವು ತಾಳದೆ ಸ್ಪಷ್ಟ ನಿಲುವು ತೆಗೆದುಕೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಹಿಳೆಯರು ರಾಜಕೀಯ ೇತ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸುವುದು ದೇಶದ ಪ್ರಗತಿಗೆ ಸಹಾಯಕವಾಗುತ್ತದೆ. ಆದ್ದರಿಂದ ಮಸೂದೆ ಜಾರಿಗೆ ಯಾವುದೇ ರೀತಿಯ ವಿಳಂಬ ಧೋರಣೆ ತಾಳಬಾರದು ಎಂದು ಆಗ್ರಹಿಸಿದರು.
ಈ ವೇಳೆ ರಾಜ್ಯ ಕಾರ್ಯದರ್ಶಿ ಲಲಿತಾ ಅನಪುರ, ಹಿರಿಯ ಮುಖಂಡೆ ನಾಗರತ್ನ ಕುಪ್ಪಿ, ಮಹಿಳಾ ಮೋರ್ಚಾ ಜಿಲ್ಲಾಧ್ಯೆ ಸುನಿತಾ ಚವ್ಹಾಣ್​, ಜಿಲ್ಲಾ ಉಪಾಧ್ಯೆ ಪ್ರಭಾವತಿ ಕಲಾಲ್​, ಜಿಲ್ಲಾ ಕಾರ್ಯದರ್ಶಿ ವಿಜಯಲಕ್ಷಿ$್ಮ ನಾಯಕ, ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮಾದೇವಿ ಕಾವಲಿ ಮತ್ತು ಮಲ್ಲಮ್ಮ ಹೊಸಪೇಟೆ, ಸ್ನೇಹ ರಸಳಕರ, ಶಕುಂತಲಾ ಜಿ, ನಗರ ಮಂಡಲ ಅಧ್ಯೆ ಭೀಮಬಾಯಿ ಶೆಂಡಿಗಿ, ಗ್ರಾಮೀಣ ಮಂಡಲ ಅಧ್ಯೆ ಕರೇಮ್ಮ ವರ್ಕನಳ್ಳಿ, ಬಾಲಮ್ಮ, ಮಮತಾ ಜಾಧವ, ಮಹಾದೇವಮ್ಮ ಕೋಳ್ಳುರ, ಅಂಜಲಿ ರಾಠೋಡ, ಜ್ಯೋತಿ, ಮರೆಮ್ಮ, ಶಿವಗಂಗಮ್ಮ, ಶರಣಮ್ಮ, ರೇಣುಕಾ, ಶರಣಮ್ಮ ಮೆಳಿಕೇರಿ, ಶಾಂತಮ್ಮ, ಸಿದ್ದಮ್ಮ ಸೇರಿ ಸೇರಿ ಅನೇಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net