

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು : ಸಾಮಾನ್ಯವಾಗಿಒಂದು ಸಂಸ್ಥೆಯ ಬೆಳವಣಿಗೆ, ಲಾಭಮತ್ತು ಸಾಧನೆಯಲ್ಲಿ ನೌಕರರ ಪಾತ್ರಬಹಳ ಮುಖ್ಯವಾಗಿದ್ದು, ಯಾವುದೇಕಂಪನಿಯ ದೊಡ್ಡ ಆಸ್ತಿ ಆ ಸಂಸ್ಥೆಯಲ್ಲಿಕೆಲಸ ಮಾಡುವ ನೌಕರರಾಗಿರುತ್ತಾರೆಎಂದು ವಿಜಯಾನಂದ ಟ್ರಾವೆಲ್ಸ್ಎಂಡಿ ಶಿವ ಸಂಕೇಶ್ವರ ಹೇಳಿದರು.
ಅರಮನೆಮೈದಾನದ ವೈಟ್ ಪೆಟಲ್ ಸಭಾಂಗಣದಲ್ಲಿಇಂಟರ್‌ನ್ಯಾಷನಲ್ ಲಿಂಗಾಯತ್ಯೂತ್ ಫೋರಂ (ಐಲೈಫ್) ಆಯೋಜಿಸಿರುವವೀರಶೈವ ಲಿಂಗಾಯತ ಬಿಜಿನೆಸ್ಕಾನ್‌ಕ್ಲೇವ್‌ನ 3ನೇದಿನದ ಕಾರ್ಯಕ್ರಮದಲ್ಲಿ ಭಾರತದಲ್ಲಿಫ್ಯಾಮಿಲಿ ಬ್ಯುಸಿನೆಸ್ ಕುರಿತುಉಪನ್ಯಾಸ ನೀಡಿದರು.
ಇತ್ತೀಚಿನದಿನಗಳಲ್ಲಿ ಯಾವುದೇ ಆಸ್ತಿಯನ್ನುಖರೀದಿ ಮಾಡದೆ ಬೇರೆಯವರ ಆಸ್ತಿ, ವಾಹನಇತ್ಯಾದಿ ಅಸೆಟ್‌ಗಳನ್ನು ಬಳಸಿಕೊಂಡುವ್ಯವಹಾರ ಮಾಡುವುದು ಟ್ರೆಂಡ್ಆಗಿದೆ. ಆದರೆವಿಆರ್‌ಎಲ್ ಸಂಸ್ಥೆ ಯಾವುದೇ ಹೊಸನಿರ್ಧಾರ ಮಾಡುವಾಗ ಮುಂದಿನ 50,100 ವರ್ಷಗಳನ್ನುಗಮನದಲ್ಲಿರಿಸಿಕೊಂಡು ಅಸೆಟ್‌ಗಳನ್ನುಖರೀದಿ ಮಾಡುತ್ತದೆ. ನಮ್ಮಬಸ್, ಲಾರಿ, ಕಟ್ಟಡಮಾತ್ರವಲ್ಲ ನೌಕರರು ನಮಗೆ ದೊಡ್ಡಆಸ್ತಿ. ಕೋವಿಡ್ಸಂದರ್ಭದಲ್ಲಿ ಸಂಸ್ಥೆಯ ರೆವಿನ್ಯೂಸಂಪೂರ್ಣವಾಗಿ ನಿಂತಿದ್ದರೂಸುಮಾರು 25 ಸಾವಿರನೌಕರರಿಗೆ ಸಂಬಳ ನೀಡುವುದರ ಮೂಲಕಎಲ್ಲಕ್ಕಿಂತ ಅಗತ್ಯವಾಗಿರುವಮಾನವ ಸಂಪನ್ಮೂಲವನ್ನುಉಳಿಸಿಕೊಂಡೆವು. ಕೇವಲನೌಕರರನ್ನು ನಮ್ಮ ಕಂಪನಿಯಲ್ಲಿಕೆಲಸಗಾರರಂತೆ ಭಾವಿಸದೆ ಅವರಕಷ್ಟ-ಸುಖಗಳಲ್ಲಿಭಾಗಿಯಾಗುತ್ತೇವೆ. ಎಲ್ಲಕ್ಕಿಂತಮಾನವೀಯತೆ ದೊಡ್ಡದು ಎಂಬುದುನಮ್ಮ ಸಂಸ್ಥೆಯಲ್ಲಿ ಪಾಲಿಸಿಕೊಂಡುಬಂದಿರುವ ನಿಯಮ ಎಂದು ವಿವರಿಸಿದರು.
ಗೋಷ್ಠಿಯಲ್ಲಿಎಚ್‌ಸಿಜಿ ಆಸ್ಪತ್ರೆ ಚೇರ್ಮನ್ಡಾ.ಅಜಯ್ಕುಮಾರ್, ಐಲ್ೈಕಾರ್ಯದರ್ಶಿ ಡಾ.ಚಿನ್ಮಯ್ಚಿಗಟೇರಿ, ವಿಆರ್‌ಎಲ್ನಿರ್ದೇಶಕಿ ಶ್ರೀಮತಿ ವಾಣಿಸಂಕೇಶ್ವರ್, ವಿಜಯಕಾಂತ್ಡೈರಿ ಉಪಾಧ್ಯಕ್ಷೆ ನಿವೇದಿತಾಸಿದ್ನಾಳ್ ಮತ್ತಿತರರು ಉಪಸ್ಥಿತರಿದ್ದರು.
ಭಾರತದಲ್ಲಿ ಕುಟುಂಬವ್ಯವಹಾರ ಅತ್ಯಂತ ಸಾಮಾನ್ಯ.ವಿದೇಶಗಳಲ್ಲಿಈ ಸಂಸ್ಕೃತಿ ಅಷ್ಟಾಗಿ ಕಾಣಸಿಗುವುದಿಲ್ಲ.ನಮ್ಮಲ್ಲಿ ಒಬ್ಬಕ್ಷೌರಿಕ 10-15ವರ್ಷದಿಂದಲೇತನ್ನ ಮಗನಿಗೆ ತರಬೇತಿ ನೀಡುತ್ತಾನೆ.ಬೇರೆ ಕಡೆ ಕೆಲಸಮಾಡುವುದಕ್ಕೆ ವಯಸ್ಸಿನನಿರ್ಬಂಧಗಳಿರುತ್ತವೆ.ಕುಟುಂಬದ ಉದ್ಯಮಕ್ಕೆಅಂತಹ ವಯೋಬೇಧವಿಲ್ಲ.ನನಗೆ 10-12ವರ್ಷ ಇದ್ದಾಗಲೇನಮ್ಮ ಅಜ್ಜ ನಮ್ಮ ಬುಕ್ಕಿಂಗ್ಆಫೀಸ್‌ಗಳಿಗೆ ಹೋಗುವಂತೆ ರೂಢಿಮಾಡಿದರು. ಅಲ್ಲಿಹೋಗಿ ಏನೂ ಮಾತನಾಡದೆ ಕೇವಲ ಅಲ್ಲಿನವ್ಯವಹಾರವನ್ನು ಗಮನಿಸುತ್ತಿದ್ದೆ.ಗ್ರಹಿಕೆ,ಗಮನಿಸುವಿಕೆ,ಅರ್ಥೈಸಿಕೊಳ್ಳುವಿಕೆ,ಅನುಮಾನ,ತಪ್ಪು ಕಂಡುಹಿಡಿಯುವುದು,ಅಭಿಪ್ರಾಯನೀಡುವುದು, ಸಲಹೆಕೊಡುವುದು ಹೀಗೆ ಒಂದೊಂದೆ ಹಂತಹಂತವಾಗಿ ರೂಢಿಸಿಕೊಳ್ಳಲು ಕುಟುಂಬಉದ್ಯಮ ಪೂರಕವಾಗಿದೆ.ಕೇವಲ ಓನರ್ಮಾತ್ರವಲ್ಲದೆ,ನೌಕರರು ಹಾಗೂಗ್ರಾಹಕರು ಕೂಡಾ ತಲೆಮಾರುಗಳಿಂದವಿಆರ್‌ಎಲ್ ಜೊತೆ ವ್ಯವಹರಿಸುತ್ತಿದ್ದಾರೆಎಂದು ಶಿವ ಸಂಕೇಶ್ವರ ತಿಳಿಸಿದರು.
ಭಾರತದಜಿಡಿಪಿಯಲ್ಲಿ ಶೇ.75ರಷ್ಟುಕುಟುಂಬ ಉದ್ಯಮದ ಮೂಲದಿಂದಬರುತ್ತಿದೆ. ವಿಆರ್‌ಎಲ್ಸಂಸ್ಥೆ ನಮ್ಮ ಅಜ್ಜ ಪದ್ಮಶ್ರೀಡಾ.ವಿಜಯಸಂಕೇಶ್ವರ ಅವರು ಸಂಸ್ಥಾಪಿಸಿ 50 ವರ್ಷಗಳುಪೂರ್ಣಗೊಂಡಿವೆ. ನಮ್ಮತಂದೆ ಡಾ.ಆನಂದಸಂಕೇಶ್ವರ ತಮ್ಮ 15ನೇವಯಸ್ಸಿನಲ್ಲೇ ಈ ವ್ಯವಹಾರದಲ್ಲಿತೊಡಗಿಸಿಕೊಂಡು 36 ವರ್ಷಗಳುಪೂರ್ಣಗೊಂಡಿವೆ. ನಾನೂಕೂಡಾ 21ನೇವಯಸ್ಸಿನಲ್ಲೇ ವಿಜಯಾನಂದ ಟ್ರಾವೆಲ್ಸ್ಎಂಡಿಯಾಗಿದ್ದು, ಹೀಗೆಮೂರು ತಲೆಮಾರಿನಿಂದ ಕುಟುಂಬದವ್ಯವಹಾರವನ್ನು ನಡೆಸಿಕೊಂಡುಹೋಗುತ್ತಿದ್ದೇವೆ. ನಮ್ಮಸಂಸ್ಥೆಯ ಉನ್ನತ ಹುದ್ದೆಯಲ್ಲಿಕೆಲಸ ಮಾಡುವ ಅನೇಕರು ನನ್ನವಯಸ್ಸಿಗಿಂತ ಹೆಚ್ಚಿನ ಸರ್ವೀಸ್ಈ ಸಂಸ್ಥೆಯಲ್ಲಿ ಮಾಡಿದ್ದಾರೆಎಂದು ಶಿವ ಸಂಕೇಶ್ವರ ತಿಳಿಸಿದರು.