ವಡಗೇರಾ ತಾಲೂಕಿನ ಸರ್ಕಾರಿ ಪ್ರೌಢಶಾಲೆ ಹಾಗೂ ಕಸ್ತೂರಬಾ ಗಾಂಽ ವಸತಿ ಶಾಲೆಗಳಿಗೆ ಬಿಇಒ ಶಿವಕುಮಾರ ಪಾರಶೆಟ್ಟಿ ಬುಧವಾರ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಮುಖ್ಯಶಿಕ್ಷಕಿ ಶ್ರೀದೇವಿ ಮಸಿಮಠ, ಮುಖ್ಯಗುರು ಅಯ್ಯಪ್ಪ, ಶರಣಪ್ಪ, ಮಲ್ಲಪ್ಪ, ಇತರರಿದ್ದರು.
ಮಕ್ಕಳಿಗೆ ಗುಣಮಟ್ಟದ ಬೋಧನೆ ಮಾಡುವ ಮೂಲಕ ಎಸ್ಸೆಸ್ಸೆಲ್ಸಿ -Àಲಿತಾಂಶ ಹೆಚ್ಚಳಕ್ಕೆ ಶಿಕ್ಷಕರು ಶ್ರಮಿಸಬೇಕು ಎಂದು ಕ್ಷೇತ್ರ ಶಿಕ್ಷಣಾಽಕಾರಿ ಶಿವಕುಮಾರ ಪಾರಶೆಟ್ಟಿ ಹೇಳಿದರು.
ತಾಲೂಕಿನ ಸರ್ಕಾರಿ ಪ್ರೌಢಶಾಲೆ ಹಾಗೂ ಕಸ್ತೂರಬಾ ಗಾಂಽ ವಸತಿ ಶಾಲೆಗೆ ಬುಧವಾರ ಭೇಟಿ ನೀಡಿ, ಮಕ್ಕಳ ಶೈಕ್ಷಣಿಕ ಮಟ್ಟ ಪರಿಶೀಲಿಸಿ ಅವರೊಂದಿಗೆ ಸಂವಾದ ನಡೆಸಿದರು.
ಈ ವೇಳೆ ಶಿಕ್ಷಕರೊಂದಿಗೆ ಸಭೆ ನಡೆಸಿದ ಅವರು, ಗುಣಮಟ್ಟದ ಬೋಧನೆಗೆ ಹೆಚ್ಚಿನ ಒತ್ತು ನೀಡಿ, ಎಸ್ಸೆಸ್ಸೆಲ್ಸಿ -Àಲಿತಾಂಶ ಹೆಚ್ಚಿಸಲು ಶಿಕ್ಷಕರು ಶ್ರಮಿಸಬೇಕು. ಅಲ್ಲದೆ ವಿದ್ಯಾರ್ಥಿಗಳಿಗೆ ಪೌಷ್ಟಿಕ ಆಹಾರ, ಸ್ವಚ್ಛತೆ ಹಾಗೂ ಶಿಸ್ತು ಕಾಪಾಡುವತ್ತ ವಿಶೇಷ ಗಮನ ಹರಿಸುವಂತೆ ಸಲಹೆ ನೀಡಿದರು.
ಬಳಿಕ ಕಲಿಕೆ ಟಾಟಾ ಟ್ರಸ್ಟ್ನ ಕನ್ಯಾ ಸಂಪೂರ್ಣ ೩.೦ ಯೋಜನೆಯಡಿ ವಿದ್ಯಾರ್ಥಿನಿಯರಿಗೆ ವಿತರಿಸಿರುವ ಟ್ಯಾಬ್‌ಗಳು ಹಾಗೂ ಡಿಜಿಟಲ್ ಕಲಿಕಾ ಚಟುವಟಿಕೆಗಳನ್ನು ವೀಕ್ಷಿಸಿದರು. ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು, ಶಿಕ್ಷಕರ ಮಾರ್ಗದರ್ಶನವನ್ನು ಸಮರ್ಪಕವಾಗಿ ಬಳಸಿಕೊಂಡು ಹೆಚ್ಚಿನ ಅಂಕಗಳೊAದಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಯಶಸ್ಸು ಸಾಽಸಬೇಕು ಎಂದು ಕಿವಿಮಾತು ಹೇಳಿದರು.
ಕಲಿಕೆ ಟಾಟಾ ಟ್ರಸ್ಟ್ನ ಸಂಯೋಜಕಿ ಬಸ್ಸಮ್ಮ ನಾಯ್ಕಲ್ ಹಾಗೂ ಪರಿಹಾರ ಬೋಧಕಿ ಅನ್ನಪೂರ್ಣ ಅವರು ವಿದ್ಯಾರ್ಥಿಗಳಲ್ಲಿ ವೈಜÁ್ಞನಿಕ ಮನೋಭಾವ, ಓದುವ ಹವ್ಯಾಸ, ತಾಂತ್ರಿಕ ಜÁ್ಞನ, ಡಿಜಿಟಲ್ ಕಲಿಕೆ, ಟ್ಯಾಬ್ ಬಳಕೆ, ವಾರ್ಷಿಕ ಪರೀಕ್ಷಾ ಸಿದ್ಧತೆ ಹಾಗೂ ವಿಜÁ್ಞನ-ತಂತ್ರಜÁ್ಞನ ಆಧಾರಿತ ಸಂವೇದಕ ಮಾದರಿ ಕುರಿತು ಮಾಹಿತಿ ನೀಡಿದರು.
ಈ ವೇಳೆ ಕಸ್ತೂರಬಾ ಗಾಂಽ ವಸತಿ ಶಾಲೆ ಮುಖ್ಯಶಿಕ್ಷಕಿ ಶ್ರೀದೇವಿ ಮಸಿಮಠ, ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಅಯ್ಯಪ್ಪ, ಶಿಕ್ಷಕರಾದ ಶರಣಪ್ಪ, ಮಲ್ಲಪ್ಪ, ಎ-ïಡಿಎ ಸಾಗರ, ಕಲಿಕೆ ಟಾಟಾ ಟ್ರಸ್ಟ್ನ ಸಂಯೋಜಕಿ ಬಸ್ಸಮ್ಮ ನಾಯ್ಕಲ್ ಹಾಗೂ ಪರಿಹಾರ ಬೋಧಕಿ ಅನ್ನಪೂರ್ಣ ಇತರರಿದ್ದರು.