ಗೊಳಸಂಗಿ ಗ್ರಾಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತ್ಯುತ್ಸವ, ಡಿಎಸ್‌ಎಸ್ ಗ್ರಾಮ ಘಟಕಕ್ಕೆ ಕೂಡಗಿ ಎನ್‌ಟಿಪಿಸಿ ಪೊಲೀಸ್ ಠಾಣೆ ಪಿಎಸ್‌ಐ ಯತೀಶ ಕೆ.ಎನ್. ಚಾಲನೆ ನೀಡಿದರು. ಬಸಯ್ಯಸ್ವಾಮಿ ಪಾರ್ವತಿಮಠ, ಶೇಖರ ದಳವಾಯಿ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಪಿಎಸ್‌ಐ ಯತೀಶ ಕೆ.ಎನ್. ಹೇಳಿಕೆ
ಅಂಬೇಡ್ಕರ್ ಜಯಂತಿ
ಗ್ರಾಮ ಘಟಕ ಉದ್ಘಾಟನೆ
ಗೊಳಸಂಗಿ: ದಲಿತರು ಇಂದು ಎಲ್ಲ ಕ್ಷೇತ್ರದಲ್ಲೂ ಮೀಸಲಾತಿ ಪಡೆದು ಆರ್ಥಿಕವಾಗಿ ಸದೃಢರಾಗುತ್ತಿದ್ದಾರೆ. ಅದರೊಟ್ಟಿಗೆ ಸಂಘಟನೆಗೂ ಒತ್ತು ನೀಡುತ್ತಿರುವುದು ಸ್ವಾಗತಾರ್ಹ. ಸಮುದಾಯದ ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವಲ್ಲಿ ಎಲ್ಲರೂ ಮುಂದಾಗಬೇಕು ಎಂದು ಕೂಡಗಿ ಎನ್‌ಟಿಪಿಸಿ ಪೊಲೀಸ್ ಠಾಣೆಯ ಪಿಎಸ್‌ಐ ಯತೀಶ ಕೆ.ಎನ್. ಹೇಳಿದರು.
ಗ್ರಾಮದ ಗರಡಿಮನೆ ಹತ್ತಿರ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತ್ಯುತ್ಸವ, ರಾಜ್ಯ ದಲಿತ ಸಂಘರ್ಷ ಸಮಿತಿ ಗ್ರಾಮ ಘಟಕಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಡಿಎಸ್‌ಎಸ್ ಸಂಚಾಲಕ ಗುರುರಾಜ ಗುಡಿಮನಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಶೇಖರ ದಳವಾಯಿ, ಯುವ ಮುಖಂಡ ಅಮರೇಶಗೌಡ ಪಾಟೀಲ ಮಾತನಾಡಿದರು.
ಬಸಯ್ಯಸ್ವಾಮಿ ಪಾರ್ವತಿಮಠ, ಪುತಲಪ್ಪ ಚಲವಾದಿ ಸಾನ್ನಿಧ್ಯ ವಹಿಸಿದ್ದರು. ಸಹದೇವ ಪವಾರ, ದಯಾನಂದ ಹೆಬ್ಬಾಳ, ನಾರಾಯಣ ಕಿರಗತ, ಸುರೇಶ ಕಣಮುಚನಾಳ, ದೇವೇಂದ್ರ ಬಳಮಕರ, ಕಾಳಪ್ಪ ಮಸಬಿನಾಳ, ಅರ್ಜುನ ಕಾಂಬಳೆ, ಶಿವಪ್ಪ ಗೊಳಸಂಗಿ, ಕಮಲಾ ಗೊಳಸಂಗಿ, ರವಿ ಚಲವಾದಿ, ಮಹೇಶ ಗೊಳಸಂಗಿ ಮತ್ತಿತರರಿದ್ದರು.
ಡಿಎಸ್‌ಎಸ್ ಗ್ರಾಮ ಘಟಕದ ನೂತನ ಪದಾಧಿಕಾರಿಗಳು, ಸದಸ್ಯರನ್ನು ಗೌರವಿಸಲಾಯಿತು. ನಂತರ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರದ ಅದ್ದೂರಿ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿತು.