ಗ್ರಾಮೀಣ ಭಾಗದ ರಸ್ತೆಗಳ ಸುಧಾರಣೆಗೆ ಒತ್ತು

ಮಲಾಮರಡಿ&ಸುಲಧಾಳ, ಗುಜನಾಳ ರಸ್ತೆಗೆ ಸಿಸಿ ಮತ್ತು ಡಾಂಬರೀಕರಣ ರಸ್ತೆ ನಿರ್ಮಾಣ ಕಾಮಗಾರಿಗೆ ಕಾರ್ಮಿಕ ಮುಖಂಡ ಅಂಬಿರಾವ್​ ಪಾಟೀಲ ಭೂಮಿಪೂಜೆ ನೆರವೇರಿಸಿಚದರು. ಭೀಮಗೌಡ ಪೊಲಿಸ್​ಗೌಡರ, ಅಡಿವಪ್ಪ ನಾವಲಗಟ್ಟಿ ಇತರಿದ್ದರು.
ಮಲಾಮರಡಿ&ಸುಲಧಾಳ, ಗುಜನಾಳ ರಸ್ತೆಗೆ ಸಿಸಿ ಮತ್ತು ಡಾಂಬರೀಕರಣ ರಸ್ತೆ ನಿರ್ಮಾಣ ಕಾಮಗಾರಿಗೆ ಕಾರ್ಮಿಕ ಮುಖಂಡ ಅಂಬಿರಾವ್​ ಪಾಟೀಲ ಭೂಮಿಪೂಜೆ ನೆರವೇರಿಸಿಚದರು. ಭೀಮಗೌಡ ಪೊಲಿಸ್​ಗೌಡರ, ಅಡಿವಪ್ಪ ನಾವಲಗಟ್ಟಿ ಇತರಿದ್ದರು.
Published on
ಅಂಕಲಗಿ: ಸಮೀಪದ ಮಲಾಮರಡಿ ಗ್ರಾಮದಲ್ಲಿ 1.75 ಕೋಟಿ ರೂ.ವೆಚ್ಚದಲ್ಲಿ ಮಲಾಮರಡಿ&ಸುಲಧಾಳ, ಗುಜನಾಳ ರಸ್ತೆ ಮತ್ತು ಡಾಂಬರೀಕರಣ ಕಾಮಗಾರಿಗೆ ಕಾರ್ಮಿಕ ಮುಖಂಡ ಅಂಬಿರಾವ್​ ಪಾಟೀಲ ಸೋಮವಾರ ಚಾಲನೆ ನೀಡಿದರು. ಬಳಿಕ ಮಾತನಾಡಿ, ಶಾಸಕ ರಮೇಶ ಜಾರಕಿಹೊಳಿ ಅವರ ವಿಶೇಷ ಮುತುವರ್ಜಿಯಿಂದ ರಸ್ತೆ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದ್ದು, ಗ್ರಾಮೀಣ ರಸ್ತೆಗಳ ಸುಧಾರಣೆಗೆ ಕ್ರಮವಹಿಸಲಾಗುವುದು ಎಂದರು. ಮುಖಂಡರಾದ ಭೀಮಗೌಡ ಪೊಲೀಸ್​ಗೌಡರ, ಅಡಿವಪ್ಪ ನಾವಲಗಟ್ಟಿ, ರಾಜೇಂದ್ರ ಗೌಡಪ್ಪಗೋಳ, ಅಡಿವೆಪ್ಪ ಮಳಗಲಿ, ಬಸನಗೌಡ ಗುತ್ತಿ, ಮಾರುತಿ ಗೋಡಲಕುಂದರಗಿ, ಬಸಲಿಂಗಪ್ಪ ತೇಲಿ, ವಿರೂಪಾಕ್ಷ ಅಂಗಡಿ, ಗಂಗಪ್ಪ ಅಂಗಡಿ, ಈರಪ್ಪ ಮಾಳಗಿ, ಅಶೋಕ ಮಾಳಗಿ, ರಾಮಣ್ಣ ಸುಂಬಳಿ, ಬಸವರಾಜ ಪಟ್ಟಣಶೆಟ್ಟಿ, ಮುನ್ನಾ ದೇಸಾಯಿ ಇತರರಿದ್ದರು. ಪಿಡಿಒ ಸುನೀಲ ನಾಯ್ಕ್​, ಇಂಜಿನಿಯರ್​ ಶಿವಲಿಂಗ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net