ದಾಸ್ಯದಿಂದ ಮುಕ್ತಗೊಂಡ ದಿನ / KUNDANA

ಆಲೂರು ದುದ್ದನಹಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ಪಿಡಿಒ ಪ್ರಕಾಶ್​ ಧ್ವಜಾರೋಹಣ ನೆರವೇರಿಸಿದರು. ಕಾಂಗ್ರೆಸ್​ ಮುಖಂಡರಾದ ರಮೇಶ್​, ಮನು, ಶ್ರೀನಿವಾಸ್​, ಪಂಚಾಯಿತಿ ಸಿಬ್ಬಂದಿ ಹಾಗೂ ಗ್ರಾಮಸ್ಥರು ಇದ್ದರು.
ಆಲೂರು ದುದ್ದನಹಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ಪಿಡಿಒ ಪ್ರಕಾಶ್​ ಧ್ವಜಾರೋಹಣ ನೆರವೇರಿಸಿದರು. ಕಾಂಗ್ರೆಸ್​ ಮುಖಂಡರಾದ ರಮೇಶ್​, ಮನು, ಶ್ರೀನಿವಾಸ್​, ಪಂಚಾಯಿತಿ ಸಿಬ್ಬಂದಿ ಹಾಗೂ ಗ್ರಾಮಸ್ಥರು ಇದ್ದರು.
Published on

ಕುಂದಾಣ :

ಸ್ವಾತಂತ್ರ$್ಯ ದಿನ ಕೇವಲ ಆಚರಣೆಯಲ್ಲ, ಬದಲಾಗಿ ನಮ್ಮ ದೇಶವನ್ನು ದಾಸ್ಯದ ಸಂಕೋಲೆಯಿಂದ ಮುಕ್ತಗೊಳಿಸಲು ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿದ ಮಹಾನ್​ ನಾಯಕರನ್ನು ಮತ್ತು ಭಾರತಕ್ಕೆ ಭದ್ರ ಬುನಾದಿ ಹಾಕಿದವರನ್ನು ಸ್ಮರಿಸುವ ಪವಿತ್ರ ದಿನ ಎಂದು ಪಿಡಿಒ ಪ್ರಕಾಶ್​ ಅಭಿಪ್ರಾಯಪಟ್ಟರು.

ಆಲೂರು ದುದ್ದನಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಗ್ಯಾರಂಟಿ ಯೋಜನಾ ಪ್ರಾಧಿಕಾರ ಸದಸ್ಯ ಮುನೇಗೌಡ ಮಾತನಾಡಿ, ಭಾರತದ ಸ್ವಾತಂತ್ರ$್ಯವು ಯಾವುದೇ ಒಬ್ಬ ವ್ಯಕ್ತಿ ಅಥವಾ ಒಂದು ಸಿದ್ಧಾಂತದಿಂದ ಬಂದಿದ್ದಲ್ಲ. ಇದು ವಿವಿಧ ಮಾರ್ಗಗಳಲ್ಲಿ ಹೋರಾಡಿದ ಲಾಂತರ ಜನರ ತ್ಯಾಗದ ಫಲ. ಸ್ವಾತಂತ್ರ$್ಯ ಹೋರಾಟಗಾರರ ತ್ಯಾಗ ಬಲಿದಾನ ಸ್ಮರಿಸಿ, ಯುವ ಜನತೆ ದೇಶದ ಸಂವಿಧಾನ ಮತ್ತು ಅಖಂಡತೆಯನ್ನು ಕಾಪಾಡುವಲ್ಲಿ ಮುಂದಾಗಬೇಕು ಎಂದು ಕರೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net