ಚಿಂಚೋಳಿ : ಕೋಡ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಂಠಾಣದ ಅಂಗನವಾಡಿ ಕೇಂದ್ರ ಕಟ್ಟಡದ ಮೇಲೆ ಅಪಾಯಕಾರಿ ವಿದ್ಯುತ್ ತಂತಿಗಳು ಹಾದು ಹೋಗಿದ್ದು, ಪುಟ್ಟ ಮಕ್ಕಳ ಜೀವಕ್ಕೆ ಕಂಟಕವಾಗಿ ಪರಿಣಮಿಸಿವೆ.
ಛತ್ರಪತಿ ಶಿವಾಜಿ ಬಡಾವಣೆಯಲ್ಲಿ ಅಂಗನವಾಡಿ ಕೇಂದ್ರ ಸಂಖ್ಯೆ 2 ಇದ್ದು, ಇಲ್ಲಿ ಸುಮಾರು 22 ಕಂದಮ್ಮಗಳು ಪೂರ್ವ ಪ್ರಾಥಮಿಕ ಶಿಕ್ಷಣ ಪಡೆಯುತ್ತಿದ್ದಾರೆ. ಕಟ್ಟಡದ ಮೇಲೆಯೇ ವಿದ್ಯುತ್ ತಂತಿ ಹಾದು ಹೋಗಿದ್ದು, ನಿತ್ಯ ಮಕ್ಕಳು ಭಯದಲ್ಲಿಯೇ ಶಿಕ್ಷಣ ಪಡೆಯುವ ಸ್ಥಿತಿ ನಿರ್ಮಾಣವಾಗಿದೆ. ಮಕ್ಕಳು ಆಟವಾಡುವಾಗ ಅಥವಾ ಮೇಲ್ಛಾವಣಿ ಹತ್ತಿದರೆ ದೊಡ್ಡ ಅನಾಹುತವೆ ಸಂಭವಿಸುವ ಸಾಧ್ಯತೆಯಿದೆ.
ಮಳೆಗಾಲದಲ್ಲಂತೂ ಗೋಡೆಗಳು ತೇವಾಂಶದಿಂದ ಕೂಡಿದ್ದು, ವಿದ್ಯುತ್ ಪ್ರವಹಿಸುವ ಆತಂಕ ನಿರಂತರವಾಗಿದೆ. ಅಪಾಯವನ್ನು ಅರಿತ ಗ್ರಾಮಸ್ಥರು ಮತ್ತು ಮುಖಂಡರು ಹಲವು ಬಾರಿ ಕಾಳಗಿ ಜೆಸ್ಕಾಂ ಕಚೇರಿಗೆ ವಿದ್ಯುತ್ ತಂತಿ ಸ್ಥಳಾಂತರಿಸುವಂತೆ ಹಲವು ಬಾರಿ ಲಿಖಿತ ಹಾಗೂ ಮೌಖಿಕ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.
ತಣ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ವಿದ್ಯುತ್ ತಂತಿ ಸ್ಥಳಾಂತರಿಸಲು ಮುಂದಾಗಬೇಕು ಎಂಬುದು ಪಾಲಕರು ಹಾಗೂ ಗ್ರಾಮಸ್ಥರ ಒತ್ತಾಯವಾಗಿದೆ.
"
ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಆಗಿಲ್ಲ. ಕೇವಲ ಸಾಂತ್ವನದ ಮಾತುಗಳನ್ನಾಡುತ್ತಾ ದಿನ ದೂಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ದೊಡ್ಡ ಅನಾಹುತ ಸಂಭವಿಸಿದರೆ ಯಾರು ಹೊಣೆ ?