ಗಣೇಶೋತ್ಸವಕ್ಕೆ ವಿದ್ಯುತ್ ಶಾಕ್

ಗಣೇಶೋತ್ಸವಕ್ಕೆ ವಿದ್ಯುತ್ ಕೊರತೆ
ಗಣೇಶೋತ್ಸವಕ್ಕೆ ವಿದ್ಯುತ್ ಕೊರತೆ
Published on

ಪ್ರಮುಖ ಮುಖ್ಯಾಂಶಗಳು

  • ಮಳೆ ಕೊರತೆಯಿಂದ ವಿದ್ಯುತ್ ಶಾಕ್
  • ಬೆಳಗಾವಿ ಗಣೇಶೋತ್ಸವಕ್ಕೆ ವಿದ್ಯುತ್ ಕೊರತೆ
  • ನಿತ್ಯ ಎರಡು ಗಂಟೆ ಲೋಡ್ ಶೆಡ್ಡಿಂಗ್
ಮಳೆ ಕೊರತೆಯಿಂದ ಕತ್ತಲು
| ನಿತ್ಯ ೨-೩ ಗಂಟೆ ಲೋಡ್ ಶೆಡ್ಡಿಂಗ್ | ಗಣೇಶೋತ್ಸವ ಹೊತ್ತಿನಲ್ಲಿ ವಿದ್ಯುತ್ ಶಾಕ್
ಆನಂದ ಭಮ್ಮನ್ನವರ ಚಿಕ್ಕೋಡಿ

ರಾಜ್ಯದಲ್ಲಿ ಉಂಟಾದ ಮುಂಗಾರು ಮಳೆ ಕೊರೆತೆಯಿಂದ ವಿದ್ಯುತ್ ಉತ್ಪಾದನೆಯಲ್ಲಿ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿರುವುದರಿಆದ ವಿದ್ಯುತ್ ಕಡಿತ (ಲೋಡ್ ಶೆಡ್ಡಿಂಗ್) ಮಾಡಲು ಇಂದನ ಇಲಾಖೆ ಮುಂದಾಗಿದ್ದು, ಗಣೇಶ ಚತುರ್ಥಿ ಹೊತ್ತಿನಲ್ಲಿ ಗಡಿನಾಡು ಬೆಳಗಾವಿಯಲ್ಲಿಯೂ ವಿದ್ಯುತ್ ಕಣ್ಣಾ ಮುಚ್ಚಾಲೆ ಆರಂಭವಾಗಿದೆ.
ಬೆಳಗಾವಿ ಸೇರಿ ರಾಜ್ಯಾದ್ಯಂತ ವಿದ್ಯುತ್ ಲೋಡ್ ಶೆಡ್ಡಿಂಗ್ ಮೂಲಕ ವಿದ್ಯುತ್ ಸರಬರಾಜು ಬೇಡಿಕೆ ಸರಿದೂಗಿಸಲು ಸರ್ಕಾರ ಮುಂದಾಗಿದೆ.ಬೆಳಗಾವಿ,ವಿಜಯಪುರ ಮತ್ತು ಬಾಗಲಕೋಟೆ ಸೇರಿ ಹೆಸ್ಕಾಂ ವ್ಯಾಪ್ತಿಯ ಎಲ್ಲ ಪ್ರದೇಶಗಳಲ್ಲಿ ಕಳೆದ ನಾಲ್ಕು ದಿನದಿಂದ ನಿತ್ಯ ೨-೩ ಗಂಟೆ ವಿದ್ಯುತ್ ಕಡಿತ ಮಾಡುತ್ತಿರುವುದರಿಂದ ಜನರು ಸಂಜೆ ಹೊತ್ತಿನಲ್ಲಿ ಕತ್ತಲೆಯಲ್ಲಿ ದಿನ ದೂಡುವಂತಾಗಿದೆ.
ಮಳೆ ಕೊರತೆ ಎಫೆಕ್ಟ್ :
ರಾಜ್ಯದಲ್ಲಿ ದುರ್ಬಲ ಮುಂಗಾರು ಮಳೆ ಪರಿಣಾಮವಾಗಿ ಜಲಾಶಯಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ ಪ್ರಮುಖ ಜಲ ವಿದ್ಯುತ್ ಘಟಕಗಳಾದ ಲಿಂಗನಮಕ್ಕಿ ಕಳೆದ ವರ್ಷ ಆಗಸ್ಟ್‌ನಲ್ಲಿ 2899 ಮಿಲಿಯನ್ ಯುನಿಟ್ ಉತ್ಪಾದನೆ ಮಾಡಲ್ಪಟ್ಟಿದೆ. ಆದರೆ ಈ ವರ್ಷ ಕೇವಲ 928 ಮಿಲಿಯನ ಯೂನಿಟ್ ಬಳಸಲಾಗುತ್ತಿದೆ. ಅದೇ ರೀತಿ ಸೂಪ ಕಳೆದ ಬಾರಿ ೧೬೨೨, ಈ ವರ್ಷ ೮೧೬, ಮತ್ತು ಮಾಣಿ ಆಣೆಕಟ್ಟು ಕಳೆದ ವರ್ಷ ೫೭೫, ಈ ವರ್ಷ ೨೪೬ ವಿದ್ಯುತ್ ಪರಿಣಾಮ ವಿದ್ಯುತ್ ಸರಬರಾಜು ಕಡಿತ ಮಾಡುವ ಮೂಲಕ ವಿದ್ಯುತ್ ಉಳಿಸಲು ಸರ್ಕಾರ ಮುಂದಾಗಿದೆ.
ಹೆಚ್ಚಿದ ವಿದ್ಯುತ್ ಬಳಕೆ:
ಕಳೆದೊಂದು ವಾರದಿಂದ ಮಳೆಗಾಲದಲ್ಲಿ ವಾತಾವರಣ ನಿರ್ಮಾಣವಾಗುತ್ತಿದೆ. ಬಿಸಿಲಿನ ತಾಪಮಾನ ಹೆಚ್ಚಾಗುತ್ತಿರುವುದರಿಂದ ಗೃಹಪಯೋಗಿ ಪ್ಯಾನ್,ಎಸಿ,ಬಳಕೆ. ಕೃಷಿ ಪಂಪ್‌ಸೇಟ್ ಬಳಕೆ ಹೆಚ್ಚಾಗಿದ್ದು, ವಿದ್ಯುತ್ ಬಳಕೆ ಹೆಚ್ಚಾಗುತ್ತಿರುವÀ ಪ್ರದೇಶದಲ್ಲಿ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ನಿತ್ಯ ೨-೩ ಗಂಟೆ ವಿದ್ಯುತ್ ಕಡಿತಗೊಳಿಸುವುದರಿಂದ ಜನರು ಹೈರಾಣಾಗುತ್ತಿದ್ದಾರೆ.
ನಿತ್ಯ 50 ಮಿಲಿಯನ್ ಯೂನಿಟ್ ಬಳಕೆ :
ಹೆಸ್ಕಾಂ ವ್ಯಾಪ್ತಿಯ ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಯ ಪ್ರತಿ ದಿನಕ್ಕೆ 50 ಮಿಲಿಯನ್ ಯೂನಿಟ್ ವಿದ್ಯುತ್ ಬಳಕೆಯಾಗಿದೆ. ಆದರೆ ಲೋಡ್ ಶೆಡ್ಡಿಂಗ್, ವಿಶೇಷವಾಗಿ ಗ್ರಾಮೀಣ ಭಾಗದ ಜನರು ಹೈರಾಗುತ್ತಿದ್ದಾರೆ. ನಿರಂತರ ಜ್ಯೋತಿ ಯೋಜನೆ ವಿದ್ಯುತ್ ಕಡಿತ ಮಾಡುತ್ತಿರುವುದು ವಿದ್ಯಾರ್ಥಿಗಳು, ವೃದ್ದರು ಸಂಜೆ ಹೊತ್ತಿನಲ್ಲಿ ವಿದ್ಯುತ್ ಬೆಳಕು ಇರುವುದಿಲ್ಲ ಕತ್ತಲಿನಲ್ಲಿ ಕಾಲ ಕಳೆಯುವಂತಾಗಿದೆ.
ಗಣೇಶೋತ್ಸವಕ್ಕೆ ಕರಿ ನೆರಳು:
ಉತ್ತರ ಕರ್ನಾಟಕದಲ್ಲಿ ಅತಿ ವಿಜೃಂಭಣೆಯಿಂದ ಗಣೇಶ ಚತುರ್ಥಿ ಆಚರಣೆ ನಡೆಯುತ್ತಿದೆ. ಆದರೆ ಈ ಬಾರಿ ವಿಘ್ನೇಶ್ವರನಿಗೆ ಬೆಳಕಿನ ಕೊರತೆ ಎದುರಾಗುವ ಆತಂಕ ಭಕ್ತರಲ್ಲಿ ಕಾಡುತ್ತಿದೆ. ದೀಪಾಲಂಕಾರಕ್ಕೆ ವಿದ್ಯುತ್ ಸಮಸ್ಯೆ ಸರಿದೂಗಿಸಲು ಸರ್ಕಾರ ಕೂಡಲೇ ಕ್ರಮವಹಿಸುವ ಮೂಲಕ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂಬ ಸಾರ್ವಜನಿಕರು ಆಗ್ರಹವಾಗಿದೆ.
ಕೋಟ್
ಮಳೆ ಕೊರತೆಯಿಂದ ವಿದ್ಯುತ್ ಉತ್ಪಾದನೆ ಕುಸಿತಗೊಂಡು ರಾಜ್ಯಾದ್ಯಂತ ಲೋಡ ಶೆಡ್ಡಿಂಗ್ ಅನಿವಾರ್ಯವಾಗಿದೆ. ಮುಂದಿನ 15 ಸಮಸ್ಯೆ ಮುಂದುವರಿಯುವ ಸಾಧ್ಯತೆಯಿದೆ.
ಎಸ್.ಸಿ ಖರೆ
ಹೆಸ್ಕಾಂ ಮುಖ್ಯ ಅಭಿಯಂತರ, ಚಿಕ್ಕೋಡಿ ವಿಭಾಗ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net