ಬುಕ್ಕಾಪಟ್ಟಣ ಸಹಕಾರ ಸಂಘಕ್ಕೆ ಆಯ್ಕೆ

Election to Bukkapattana Cooperative Society
Election to Bukkapattana Cooperative Society
Published on
ಬುಕ್ಕಾಪಟ್ಟಣ: ಬುಕ್ಕಾಪಟ್ಟಣ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಿಗದಿಯಾಗಿದ್ದ ನಿರ್ದೇಶಕರ ಚುನಾವಣೆಯಲ್ಲಿ ಸಾಲಗಾರರಲ್ಲದ ಕ್ಷೇತ್ರಕ್ಕೆ ಹುಣಸೆಕಟ್ಟೆ ಗುರುರಾಜ ಆಯ್ಕೆಯಾಗಿದ್ದಾರೆ.
ಸಾಲಗಾರರ ಕ್ಷೇತ್ರದ ಇಬ್ಬರು ಮಹಿಳಾ ಮೀಸಲು ಸ್ಥಾನಗಳಿಗೆ ನಾಲ್ಕು ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಅದರಲ್ಲಿ ಕಮಲಮ್ಮ ಮತ್ತು ಸುಜಾತಾ ನಿರ್ದೇಶಕಿ ಸ್ಥಾನಗಳನ್ನು ಭದ್ರಪಡಿಸಿಕೊಂಡರು. ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ನಂಜುಂಡಪ್ಪ, ಪ.ಜಾತಿ ಸ್ಥಾನಕ್ಕೆ ಗೋವಿಂದಪ್ಪ ಆಯ್ಕೆಯಾದರು. ಬಿಸಿಎಂಬಿ ಮೀಸಲು ಕ್ಷೇತ್ರಕ್ಕೆ ಹೊಸಪಾಳ್ಯ ಸತ್ಯನಾರಾಯಣ ಆಯ್ಕೆಯಾದರು. ಇನ್ನು ಸಾಮಾನ್ಯ ಕ್ಷೇತ್ರಗಳಿಗೆ ಶಾಂತಕುಮಾರ್​, ಪಿ.ರೇವಣ್ಣ, ಸಿ.ಚನ್ನಕೇಶವ, ಬಿಆರ್​ಎಂ ಸತ್ಯನಾರಾಯಣ, ಬಂಡೆ ರಾಮಣ್ಣ ಆಯ್ಕೆಯಾದರು. ಬಿಸಿಎಂಎ ಸ್ಥಾನಕ್ಕೆ ಮೇಣಿಗನ ಹಟ್ಟಿಯ ಜಯಣ್ಣ ಅವಿರೋಧ ಆಯ್ಕೆಯಾಗಿದ್ದರು.
ಚುನಾವಣಾಧಿಕಾರಿಯಾಗಿ ಶ್ರೀನಿವಾಸ್​ ಕಾರ್ಯನಿರ್ವಹಿಸಿದರು. ಬುಕ್ಕಾಪಟ್ಟಣ ವಿಎಸ್ಸೆಸ್ಸೆಎನ್​ ಕಾರ್ಯದರ್ಶಿ ಕೆ.ರಾಜಣ್ಣ, ರಾಮಲಿಂಗಾಪುರ ವಿಎಸ್ಸೆಸ್ಸೆಎನ್​ ಕಾರ್ಯದರ್ಶಿ ರಾಕೇಶ್​, ಬಸವರಾಜು, ಎಂ.ಜಿ.ಲಕ್ಷಿ$್ಮಕಾಂತ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net