ತಹಸೀಲ್ದಾರ್ ಕಚೇರಿ ಮುಂಭಾಗ ವೃದ್ಧೆ ಏಕಾಂಗಿ ಪ್ರತಿಭಟನೆ

ಎಚ್.ಡಿ.ಕೋಟೆ ಪಟ್ಟಣದ ತಹಸೀಲ್ದಾರ್ ಕಚೇರಿ ಮುಂಭಾಗ ಹೈರಿಗೆ ಗ್ರಾಮದ ದೇವಮ್ಮ ಜಮೀನಿಗೆ ತಿರುಗಾಡಲು ಬಿಡಿಸಿದ್ದ ರಸ್ತೆ ಒತ್ತುವರಿ ಮಾಡಿಕೊಂಡಿರುವ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಅನಿರ್ದಿಷ್ಟ ಅವಧಿ ಪ್ರತಿಭಟನೆ ಹಮ್ಮಿಕೊಂಡಿದ್ದ ಸ್ಥಳಕ್ಕೆ ತಹಸೀಲ್ದಾರ್ ಭೇಟಿ ನೀಡಿ ಸಮಸ್ಯೆ ಆಲಿಸಿದರು.
ಎಚ್.ಡಿ.ಕೋಟೆ ಪಟ್ಟಣದ ತಹಸೀಲ್ದಾರ್ ಕಚೇರಿ ಮುಂಭಾಗ ಹೈರಿಗೆ ಗ್ರಾಮದ ದೇವಮ್ಮ ಜಮೀನಿಗೆ ತಿರುಗಾಡಲು ಬಿಡಿಸಿದ್ದ ರಸ್ತೆ ಒತ್ತುವರಿ ಮಾಡಿಕೊಂಡಿರುವ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಅನಿರ್ದಿಷ್ಟ ಅವಧಿ ಪ್ರತಿಭಟನೆ ಹಮ್ಮಿಕೊಂಡಿದ್ದ ಸ್ಥಳಕ್ಕೆ ತಹಸೀಲ್ದಾರ್ ಭೇಟಿ ನೀಡಿ ಸಮಸ್ಯೆ ಆಲಿಸಿದರು.
Published on
ಎಚ್.ಡಿ.ಕೋಟೆ: ನನ್ನ ಜಮೀನಿಗೆ ತಿರುಗಾಡಲು ಈ ಹಿಂದೆ ತಹಸೀಲ್ದಾರ್ ಬಿಡಿಸಿದ್ದ ರಸ್ತೆ ಜಾಗವನ್ನು ಪಕ್ಕದ ಜಮೀನಿನ ವ್ಯಕ್ತಿ ಮತ್ತೆ ಒತ್ತುವರಿ ಮಾಡಿಕೊಂಡು ನನ್ನ ಜಮೀನಿಗೆ ತೆರಳಲು ತೊಂದರೆ ನೀಡುತ್ತಿರುವುದಲ್ಲದೇ, ಪ್ರಶ್ನಿಸಲು ಹೋದಾಗ ಹಲ್ಲೆ ಮಾಡಿದ್ದರೆ. ಆ ವ್ಯಕ್ತಿಯ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ವೃದ್ಧೆಯೊಬ್ಬರು ಪಟ್ಟಣದ ತಹಸೀಲ್ದಾರ್ ಕಚೇರಿ ಮುಂಭಾಗ ಸೋಮವಾರದಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ಕೈಗೊಂಡಿದ್ದಾರೆ.
ತಾಲೂಕಿನ ಹೈರಿಗೆ ಗ್ರಾಮದ ದೇವಮ್ಮ ಜಮೀನಿಗೆ ಹೋಗುವ ಸರ್ಕಾರಿ ರಸ್ತೆಯನ್ನು ಪಕ್ಕದ ಜಮೀನಿನ ವ್ಯಕ್ತಿ ಅಕ್ರಮವಾಗಿ ಅಕ್ರಮಿಸಿಕೊಂಡಿದ್ದು, ತನ್ನ ಜಮೀನಿಗೆ ಹೋಗಲು ರಸ್ತೆ ತೆರವು ಮಾಡಿಸಿಕೊಡುವಂತೆ ಅಂಬೇಡ್ಕರ್ ಭಾವಚಿತ್ರ ಇಟ್ಟುಕೊಂಡು ಏಕಾಂಗಿಯಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.
ತಾಲೂಕಿನ ಕೊಡಸೀಗೆ ಗ್ರಾಮದ ಸರ್ವೇ ನಂ.4ರಲ್ಲಿ 5 ಎಕರೆ ಜಮೀನು ಸರ್ಕಾರದಿಂದ 1970ರಲ್ಲಿ ಮಂಜೂರಾಗಿದ್ದು, ಅಂದಿನಿಂದಲೂ ಜಮೀನಿಗೆ ತಿರುಗಾಡುವ ರಸ್ತೆಗೆ ಪಕ್ಕದ ಜಮೀನಿನ ವ್ಯಕ್ತಿ ಮಲಾರ ಕಾಲನಿ ಗ್ರಾಮದ ನರಸಿಂಹಯ್ಯ ಹಾಗೂ ಆತನ ಮಕ್ಕಳು ತೊಂದರೆ ನೀಡುತ್ತಿದ್ದಾರೆ. ರಸ್ತೆ ಬಿಡಿಸುವಂತೆ ಎಚ್.ಡಿ.ಕೋಟೆ ತಹಸೀಲ್ದಾರ್ ಅವರಿಗೆ ದೂರು ನೀಡಿದ ನಂತರ ಎರಡು ತಿಂಗಳ ಹಿಂದೆ ಪೊಲೀಸ್ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಸರ್ವೇ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ನನ್ನ ಜಮೀನಿಗೆ ತಿರುಗಾಡಲು ರಸ್ತೆ ಬಿಡಿಸಿ ಕೊಟ್ಟಿದ್ದರು. ಆದರೆ ಎರಡು ದಿನ ಸುಮ್ಮನಿದ್ದ ನರಸಿಂಹಯ್ಯ ಮತ್ತೆ ರಸ್ತೆಯನ್ನು ಒತ್ತುವರಿ ಮಾಡಿಕೊಂಡು ನನಗೆ ಜಮೀನಿಗೆ ಹೋಗಲು ರಸ್ತೆ ಬಿಡದೆ ತೊಂದರೆ ಕೊಡುತ್ತಿದ್ದು, ಜತೆಗೆ ಕೇಳಲು ಹೋದ ತನ್ನ ಮಾಲೆ ಹಲ್ಲೆ ಮಾಡಿದ್ದಾನೆ ಎಂದು ದೂರಿದರು. ಈ ವಿಚಾರವಾಗಿ ಪೊಲೀಸ್ ಠಾಣೆಗೆ ದೂರು ನೀಡಿದರೂ ನನಗೆ ನ್ಯಾಯ ಸಿಕ್ಕಿಲ್ಲ. ಹಾಗಾಗಿ ನನಗೆ ನ್ಯಾಯ ಸಿಗುವವರೆಗೆ ಇಲ್ಲಿಂದ ಹೋಗುವುದಿಲ್ಲ ಎಂದು ಪಟ್ಟುಹಿಡಿದು ಕುಳಿತ್ತಿದ್ದಾರೆ.
ಸ್ಥಳಕ್ಕೆ ತಹಸೀಲ್ದಾರ್ ಶ್ರೀನಿವಾಸ್ ಭೇಟಿ ನೀಡಿ ಇನ್ನೆರಡು ದಿನದಲ್ಲಿ ಪೊಲೀಸರ ಸಮ್ಮುಖದಲ್ಲಿ ಜಮೀನಿನ ರಸ್ತೆಗೆ ತೊಂದರೆ ನೀಡುತ್ತಿರುವ ವ್ಯಕ್ತಿಯನ್ನು ಕರೆಸಿ ವೃದ್ಧೆಯ ತಂಟೆಗೆ ಬರದಂತೆ ಎಚ್ಚರಿಕೆ ನೀಡುವುದಾಗಿ ಹಾಗೂ ಸರ್ಕಾರಿ ರಸ್ತೆ ತೆರವು ಮಾಡಲು ಕ್ರಮ ವಹಿಸುವುದಾಗಿ ತಿಳಿಸಿ, ಪ್ರತಿಭಟನೆ ಹಿಂತೆಗೆದುಕೊಳ್ಳುವಂತೆ ಮನವಿ ಮಾಡಿದರು. ಆದರೆ ಇದಕ್ಕೊಪ್ಪದ ವೃದ್ಧೆ ಈ ಹಿಂದೆಯೂ ಹೀಗೆ ತಾವು ಸಮಸ್ಯೆ ಬಗೆಹರಿಸುವುದಾಗಿ ನೀಡಿದ್ದ ಭರವಸೆ ಈಡೇರಿಲ್ಲ. ಶಾಶ್ವತವಾಗಿ ಸಮಸ್ಯೆ ಪರಿಹಾರವಾಗುವವುರೆಗೂ ಸ್ಥಳ ಬಿಟ್ಟು ಕದಲವುದಿಲ್ಲವೆಂದು ಹೇಳಿ ಪ್ರತಿಭಟನೆ ಮುಂದುವರಿಸಿದ್ದಾರೆ. ಹೀಗಾಗಿ ವೃದ್ಧೆಯ ಮನವೊಲಿಸಲು ಬಂದ ತಹಸೀಲ್ದಾರ್ ಬೇರೆ ದಾರಿ ಕಾಣದೆ ವಾಪಸಾಗಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net