ವೃದ್ಧಗೆ 20.88 ಲಕ್ಷ ರೂ. ವಂಚನೆ

CYBER CRIME
CYBER CRIME
Published on
ಬೆಳಗಾವಿ: ವೃದ್ಧನ ಮೊಬೈಲ್‌ಗೆ ಎಪಿಕೆ ಫೈಲ್ ಕಳುಹಿಸಿ 20,88,167 ರೂ. ವರ್ಗಾಯಿಸಿಕೊಂಡಿರುವ ಬಗ್ಗೆ ನಗರ ಸೈಬರ್ ಅಪರಾಧ ಠಾಣೆಯಲ್ಲಿ ದೂರು ದಾಖಲಾಗಿದೆ.
ಸದಾಶಿವ ನಗರದ ಈಶ್ವರಪ್ಪ(81) ಹಣ ಕಳೆದುಕೊಂಡವರು. ಜೂ.25ರಂದು ಮೊಬೈಲ್ ಸಿಮ್ ಬಂದ್ ಆಗಿತ್ತು. ಮಧ್ಯಾಹ್ನ ಅದೇ ನಂಬರಿನ ಹೊಸ ಸಿಮ್ ಪಡೆದುಕೊಂಡಿದ್ದೆ. ಮರುದಿನ ನನ್ನ ಮೂರು ಬ್ಯಾಂಕ್ ಖಾತೆಗಳಿಂದ ಹಣ ವರ್ಗಾವಣೆಗೊಂಡ ಮೆಸೇಜ್ ಬಂತು.
ಈ ಬಗ್ಗೆ ಪೊಲೀಸರ ಗಮನಕ್ಕೆ ತಂದಿದ್ದೆ. ಆಗ ಮೊಬೈಲ್ ಪರಿಶೀಲಿಸಿದಾಗ ಮೂರು ಎಪಿಕೆ ಫೈಲ್‌ಗಳು ಡೌನ್‌ಲೋಡ್ ಆಗಿರುವುದು ಕಂಡು ಬಂತು. ಇದರ ಮೂಲಕವೇ ಮೂಲಕವೇ ಹಣ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net