ಎಲ್ ನಿನೋ ಶುರು, ಬಿಸಿಲು ಹೆಚ್ಚಳ: ಕೆಲವಡೆ ವಾಡಿಕೆಗಿಂತ ಅಧಿಕ ಉಷ್ಣಾಂಶ- El Nino begins

‘ಎಲ್ ನಿನೋ’ ಶುರು
‘ಎಲ್ ನಿನೋ’ ಶುರು
Published on

ಬೆಂಗಳೂರು: ಪೆಸಿಫಿಕ್ ಸಾಗರದಲ್ಲಿ ‘ಲಾ ನಿನೋ’ ಮುಗಿದು ‘ಎಲ್ ನಿನೋ’ ಶುರುವಾಗಿದೆ.

ಈ ಬದಲಾವಣೆಯಿಂದ ಈಗಾಗಲೇ ಮುಂಗಾರು ದುರ್ಬಲವಾಗಿದ್ದು, ರಾಜ್ಯದ ಅರ್ಧ ಭಾಗದಲ್ಲಿ ತಾಪಮಾನ ಹೆಚ್ಚಳವಾಗಿದೆ. ಇದರಿಂದ ಮಳೆಗಾಲವು ಬೇಸಿಗೆಗಾಲವಾಗಿ ಬದಲಾಗಿದೆ. ಪ್ರಸ್ತುತ ಬಹುತೇಕ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಕಾಣಿಸಿಕೊಳ್ಳುತ್ತಿದ್ದು, ಹನಿಯೂ ಮಳೆ ಬೀಳುತ್ತಿಲ್ಲ.

ಬೀದರ್ 4.1, ಬಾಗಲಕೋಟೆ 3.9, ರಾಯಚೂರು 3.3, ಕೊಪ್ಪಳ 3.2, ಬೆಂಗಳೂರು 3.1, ಗದಗ 2.9, ಹಾಸನ 1.8, ಹೊನ್ನಾವರ 1.8 ಶಿವಮೊಗ್ಗ 1.7, ವಿಜಯಪುರ 1.7, ಮೈಸೂರು 1.6 ಮತ್ತು ಕಾರವಾರ 1.6, ಚಿತ್ರದುರ್ಗ 1.4 ಮತ್ತು ಗದಗ 1.3, ಉಷ್ಣಾಂಶವು ವಾಡಿಕೆಗಿಂತ ಅಧಿಕವಾಗಿ ದಾಖಲಾಗಿದೆ. ಇದರ ಪರಿಣಾಮ ಸೆಖೆ ವಾತಾವರಣ ಅನುಭವವಾಗುತ್ತಿದೆ. ಉಳಿದ ಜಿಲ್ಲೆಗಳಲ್ಲಿ ವಾಡಿಕೆಯಂತೆ ಉಷ್ಣಾಂಶ ದಾಖಲಾಗುತ್ತಿದ್ದರೂ ಮುಂದಿನ ದಿನಗಳಲ್ಲಿ ಇಲ್ಲಿಯೂ ತಾಪಮಾನ ಹೆಚ್ಚಳವಾಗಲಿದೆ. ಒಟ್ಟಿನಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನದಲ್ಲಿ ವಾಡಿಕೆಗಿಂತ ಹೆಚ್ಚಿನ ಉಷ್ಣಾಂಶ ಕಂಡುಬರಲಿದೆ.
56 ವರ್ಷದ ಬಳಿಕ 2026ರ ಜುಲೈನಲ್ಲಿ ದಕ್ಷಿಣ ಕರ್ನಾಟಕದಲ್ಲಿ ಶೇ.69 ಮಳೆ ಕೊರತೆ ಉಂಟಾಗಿದೆ. ಜುಲೈನಲ್ಲಿ ವಾಡಿಕೆಯಂತೆ 79.2 ಮಿಮೀ ಮಳೆಯಾಗಬೇಕಿತ್ತು. ಆದರೆ, 24.7 ಮಿಮೀ ಸುರಿದಿದ್ದು, ಶೇ.69 ಮಳೆ ಅಭಾವವಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ 108 ವರ್ಷದ ಬಳಿಕ 2026ರ ಜುಲೈನಲ್ಲಿ ಅತ್ಯಂತ ಕಡಿಮೆ ಮಳೆ ಸುರಿದಿದೆ. ಅಲ್ಲದೆ, 116 ವರ್ಷದ ಬಳಿಕ ರಾಜಧಾನಿಯಲ್ಲಿ ಗರಿಷ್ಠ ತಾಪಮಾನ ದಾಖಲಾಗಿದೆ. 1914ರ ಜುಲೈನಲ್ಲಿ 33.3 ಡಿ.ಸೆ. ಉಷ್ಣಾಂಶ ದಾಖಲಾಗಿತ್ತು. 116 ವರ್ಷದ ಬಳಿಕ ಅಂದರೆ 2026ರ ಜು.14ರಂದು 33.6 ಡಿ.ಸೆ.ದಾಖಲಾಗಿದ್ದು, ಹಿಂದಿನ ಎಲ್ಲ ದಾಖಲೆ ಅಳಿಸಿಹಾಕಿದೆ.
ರಾಜ್ಯದಲ್ಲಿ ಇವಾಗ ‘ಎಲ್‌ನಿನೋ’ ಪರಿಣಾಮ ಬೀರುತ್ತಿದ್ದು, ಬಿಸಿಲಿನ ಝಳ ಶುರುವಾಗಿದೆ. ಅಕ್ಟೋಬರ್, ಡಿಸೆಂಬರ್ ವೇಳೆಗೆ ಬಿಸಿಲಿನ ತೀವ್ರತೆ ಇನ್ನಷ್ಟು ಜಾಸ್ತಿಯಾಗಲಿದೆ. ಅಂತರ್ಜಲ ಮಟ್ಟ ಕುಸಿತವಾಗಲಿದ್ದು, ಅಣೆಕಟ್ಟೆಗಳಲ್ಲಿ ನೀರು ಖಾಲಿಯಾಗಲಿದೆ. ಕುಡಿಯುವ ನೀರು, ಜಾನುವಾರುಗಳು ಮೇವಿಗೆ ಪರದಾಟ ಶುರುವಾಗಲಿದೆ. ರಾಜ್ಯದಲ್ಲಿ ಬಿತ್ತನೆ ಕಾರ್ಯ ಕಡಿಮೆಯಾಗಿದೆ.ರಾಜ್ಯಾದ್ಯಂತ ಇದುವೆರೆಗೆ ಒಟ್ಟಾರೆ ಶೇ.31 ಮಳೆ ಕೊರತೆಯಾಗಿದೆ.
ಡಾ.ಶ್ರೀನಿವಾಸರೆಡ್ಡಿ, ಹಿರಿಯ ಹವಾಮಾನ ತಜ್ಞ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net