ಪೊನ್ನಂಪೇಟೆಯಲ್ಲಿ ಈದ್ ಮಿಲಾದ್ ಮೆರವಣಿಗೆ

ಪೊನ್ನಂಪೇಟೆ ಶಾಫಿ ಜುಮಾ ಮಸೀದಿ ವತಿಯಿಂದ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಮಿಲಾದ್ ಜಾಥಾದಲ್ಲಿ ದಫ್ ಪ್ರದರ್ಶನ ಗಮನ ಸೆಳೆಯಿತು.
ಪೊನ್ನಂಪೇಟೆ ಶಾಫಿ ಜುಮಾ ಮಸೀದಿ ವತಿಯಿಂದ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಮಿಲಾದ್ ಜಾಥಾದಲ್ಲಿ ದಫ್ ಪ್ರದರ್ಶನ ಗಮನ ಸೆಳೆಯಿತು.
Published on

ಗೋಣಿಕೊಪ್ಪಲು:

ಪೊನ್ನಂಪೇಟೆಯಲ್ಲಿ ತ್ಯಾಗರಾಜ ರಸ್ತೆಯಲ್ಲಿರುವ ಶಾಫಿ ಜುಮಾ ಮಸೀದಿ ವತಿಯಿಂದ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಬುಧವಾರ ಮಿಲಾದ್ ಜಾಥಾ ನಡೆಸಲಾಯಿತು.


ಶಾಫಿ ಜುಮಾ ಮಸೀದಿಯಿಂದ ಪ್ರಾರಂಭವಾದ ಜಾಥಾ, ಮುಖ್ಯರಸ್ತೆಯ ಮೂಲಕ ಬಸ್ ನಿಲ್ದಾಣದವರೆಗೆ ಸಾಗಿತು. ಧರ್ಮಗುರು ಸೂಫಿ ದಾರಿಮಿ ಪ್ರಾರ್ಥನೆಯೊಂದಿಗೆ ಜಾಥಾಗೆ ಚಾಲನೆ ನೀಡಿದರು. ರಸ್ತೆಯುದ್ದಕ್ಕೂ ಮದರಸ ಮಕ್ಕಳು ದಫ್ ಹಾಡಿಗೆ ಹೆಜ್ಜೆ ಹಾಕುತ್ತಾ ಸಾಗಿದ್ದು ವಿಶೇಷವಾಗಿತ್ತು. ಬಸ್ ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಕ್ಕಳ ದಫ್ ಪ್ರದರ್ಶನ, ಫ್ಲವರ್ ಡಾನ್ಸ್, ಹಳೇ ವಿದ್ಯಾರ್ಥಿಗಳ ಸ್ಕೌಟ್ ಮತ್ತು ದಫ್ ಪ್ರದರ್ಶನ ಗಮನ ಸೆಳೆಯಿತು.


ಶಾಫಿ ಜುಮಾ ಮಸೀದಿ ಅಧ್ಯಕ್ಷ ಸಿ.ಎ. ಅಹಮದ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಪಿ.ಎ. ಅಜೀಜ್, ಉಪಾಧ್ಯಕ್ಷ ಸಿ.ಎಂ.ಅಶ್ರಫ್, ಖಜಾಂಚಿ ಕೆ.ಮಹಮ್ಮದ್ ಹಾಜಿ, ಆಡಳಿತ ಮಂಡಳಿ ಸದಸ್ಯರು, ಮಿಲಾದ್ ಕಮಿಟಿ ಅಧ್ಯಕ್ಷ ವಿ.ಎಚ್. ಮಹಮ್ಮದ್ ಅಲಿ, ಸಂಚಾಲಕ ಸಿ.ಎ.ಜುನೈದ್, ಖಜಾಂಚಿ ಸಿ.ಎ.ಸಾಜಿರ್, ಕಮಿಟಿ ಸದಸ್ಯರಾದ ಎಂ.ಎಸ್.ಅಶ್ರಫ್, ಮಹಮ್ಮದ್ ಅಲಿ, ಎಂ.ಎ. ಅಶ್ರಫ್, ಕೆ.ಎಂ. ಫೈಜಲ್, ಕೆ.ಎಂ.ರಾಫೀಕ್, ಪಿ.ಎಂ ಇರ್ಷಾದ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net