ಈಜಿಪ್ಟಿನಿಂದ ಬೆಂಗಳೂರಿಗೆ ಹಾರಿಬಂದ ರಣಹದ್ದು! ವಿದೇಶಿ ಹಕ್ಕಿಗೂ ಇಷ್ಟವಾಯ್ತು ಸಿಲಿಕಾನ್​ ಸಿಟಿಯ ಕೂಲ್​ ವೆದರ್..!

Egyptian vulture
Egyptian vulture
Published on

ಪ್ರಮುಖ ಮುಖ್ಯಾಂಶಗಳು

  • ಸಿಲಿಕಾನ್​ ಸಿಟಿಯಲ್ಲಿ ಕಾಣ ಸಿಕ್ಕ ಅಪರೂಪದ ಈಜಿಪ್ಶಿಯನ್ ವಲ್ಚರ್​​
  • ಅಳಿವಿನಂಚಿನಲ್ಲಿರುವ ಜೀವಿಗಳ ವಾಸಕ್ಕೂ ನಮ್ಮ ಬೆಂಗಳೂರು ಸೈ
ಬೆಂಗಳೂರು: ಅಪರೂಪದ ಈಜಿಪ್ಶಿಯನ್​​ ವಲ್ಚರ್​​ಗಳು ಸಿಲಿಕಾನ್​ ಸಿಟಿಯಲ್ಲಿ ಕಾಣ ಸಿಕ್ಕಿರುವುದು ನೋಡುಗರ ಹುಬ್ಬೇರಿಸಿದೆ. WASI (ವೈಲ್ಡ್​​ ಲೈಫ್​​ ಎಸೋಸಿಯೇಷನ್​​ ಆಫ್​ ಸೌತ್​​ ಇಂಡಿಯಾದ) ಸದಸ್ಯ ದೀಪಕ್ ಪಿಂಟೊ ಈ ವಿಡಿಯೋವನ್ನ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಬೆಂಗಳೂರಿನ ಹೃದಯಭಾಗವೆಂದೇ ಕರೆಯಲ್ಪಡುವ ಎಂ. ಜಿ. ರೋಡ್​​ನ ಹೆಸರಾಂತ ರೆಸ್ಟೋರೆಂಟ್​ವೊಂದರಲ್ಲಿ ಊಟ ಮಾಡುವಾಗ ಈ ಅದ್ಭುತ ದೃಶ್ಯವನ್ನು ಸೆರೆ ಹಿಡಿಯಲಾಗಿದೆ ಎಂದು ದೀಪಕ್ ಪಿಂಟೊ ಹೇಳಿದ್ದಾರೆ. ನಗರೀಕರಣದ ಹೊರತಾಗಿಯೂ ಬೆಂಗಳೂರು ಹಲವಾರು ವೈವಿಧ್ಯಮ ಜೀವಿಗಳ ತಾಣಕ್ಕೆ ಸುರಕ್ಷಿತ ಜಾಗವಾಗಿರುವುದೇ ಹೆಮ್ಮೆಯ ವಿಚಾರವೆಂದು ನೆಟ್ಟಿಗರು ಕಾಮೆಂಟ್​ ಮಾಡಿದ್ದಾರೆ. ಅಲ್ಲದೇ ನಮ್ಮ ಪರಿಸರದ ಒಳಿವಾಗಿ ದುಡಿಯುತ್ತಿರುವ ಪ್ರತಿಯೊಬ್ಬರಿಗೂ ಸೆಲ್ಯೂಟ್​​​​ ಎಂದು ಅನೇಕರು ಅಭಿಪ್ರಾಯ ಪಟ್ಟಿದ್ದಾರೆ.

ಭಾರತದಲ್ಲಿ ಹೆಚ್ಚಾಗಿ ಎಲ್ಲಿ ವಾಸಿಸುತ್ತದೆ?

ಭಾರತದಲ್ಲಿ ಈಜಿಪ್ಟಿನ ರಣಹದ್ದು ಮುಖ್ಯವಾಗಿ ಉತ್ತರ ಮತ್ತು ಪಶ್ಚಿಮ ಭಾರತದ ಕೆಲವು ಭಾಗಗಳಲ್ಲಿ ಕಂಡುಬರುತ್ತದೆ, ಅಲ್ಲಿ ವಾಸಿಸುವ ಉಪಜಾತಿಯಾದ ನಿಯೋಫ್ರಾನ್ ಪರ್ಕ್ನೋಪ್ಟೆರಸ್ ಜಿಂಜಿನಿಯಾನಸ್ ವರ್ಷಪೂರ್ತಿ ಕಾಣ ಸಿಗುತ್ತದೆ. ಸೌದಿ ಅರೇಬಿಯಾದ ನೆಫುಡ್ ಮರುಭೂಮಿಯಲ್ಲಿ ಕಂಡುಬಂದ ಈಜಿಪ್ಟಿನ ರಣಹದ್ದಿನ ಪಳೆಯುಳಿಕೆಗಳು (fossil remains) ಸುಮಾರು 500,000 ವರ್ಷಗಳ ಹಿಂದಿನ ಮಧ್ಯ ಪ್ಲೆಸ್ಟೊಸೀನ್ ಕಾಲದ್ದಾಗಿವೆ

ಈಜಿಪ್ಶಿಯನ್​​ ವಲ್ಚರ್​​ಗಳು ಹೆಚ್ಚಾಗಿ ಎಲ್ಲೆಲ್ಲಿ ಕಾಣ ಸಿಗುತ್ತೆ?!

ಸೌತ್​​ ಯೂರೋಪ್​, ನಾರ್ತ್​​ ಆಫ್ರಿಕಾ, ಸ್ಪೇನ್​ ಮೊರಾಕೊ ಇಥಿಯೋಪಿಯಾ ಮತ್ತು ಏಷ್ಯಾದ ಕೆಲವು ಭಾಗದಲ್ಲಿ ಈ ಪಕ್ಷಿಗಳು ಹೆಚ್ಚಾಗಿ ಕಾಣ ಸಿಗುತ್ತೆ. ಹುಲ್ಲುಗಾವಲುಗಳು, ಮರುಭೂಮಿ ತೆರೆದ ಪ್ರದೇಶಗಳಲ್ಲಿ ಆಹಾರ ಮತ್ತು ಗೂಡುಕಟ್ಟುವ ಸ್ಥಳಗಳನ್ನು ಕಂಡುಕೊಳ್ಳುತ್ತವೆ. ಈಜಿಪ್ಶಿಯನ್​ ಪಕ್ಷಿಗಳನ್ನ ಅತ್ಯಂತ ಬುದ್ಧಿವಂತ ಜೀವಿಗಳೆಂದೇ ಹೆಸರುವಾಸಿ. ಅವುಗಳು ತನ್ನ ಮೊಟ್ಟೆಯನ್ನ ಒಡೆಯಲು ಕಲ್ಲುಗಳನ್ನು ಬಳಸಿಕೊಳ್ಳುತ್ತವೆ.

ಅಳಿವಿನಂಚಿನಲ್ಲಿರುವ ಪಕ್ಷಿ ಈಜಿಪ್ಶಿಯನ್ ವಲ್ಚರ್​​..!

ಜಾಗತಿಕವಾಗಿ ಅಳಿವಿನಂಚಿನಲ್ಲಿರುವ ಯೂರೋಪಿಯನ್​ ರಣಹದ್ದು ಇದಾಗಿದೆ. ಅಲ್ಲದೇ ರಣಹದ್ದುಗಳ ಸಂಖ್ಯೆಯನ್ನು ಸಂರಕ್ಷಿಸಲು ಅನೇಕ ಪ್ರಾಣಿ ಮತ್ತು ಪಕ್ಷಿ ಸಂರಕ್ಷಣಾ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net