ನೇಪಾಳ ಪ್ರವಾಹದಿಂದ ಸಿಲುಕಿರುವ 24 ಕನ್ನಡಿಗರ ಪತ್ತೆಗೆ ಹರಸಾಹಸ: ಬೆಂಗಳೂರಿನವರೇ ಅಧಿಕ- Nepal floods

ಕರ್ನಾಟಕದ 28 ಪ್ರವಾಸಿಗರು ಇನ್ನೂ ನಾಪತ್ತೆ
ಕರ್ನಾಟಕದ 28 ಪ್ರವಾಸಿಗರು ಇನ್ನೂ ನಾಪತ್ತೆ
Published on

ಬೆಂಗಳೂರು: ನೇಪಾಳ-ಟಿಬೆಟ್ ಗಡಿ ಮತ್ತು ಚೀನಾದ ಟಿಬೆಟ್ ಸ್ವಾಯತ್ತ ಪ್ರದೇಶಗಳಲ್ಲಿ (ಟಿಎಆರ್) ಸಂಭವಿಸಿದ ಭೀಕರ ಪ್ರವಾಹದಿಂದ ಸಿಲುಕಿರುವ ಕರ್ನಾಟಕದ 28 ಪ್ರವಾಸಿಗರು ಪೈಕಿ 4 ಮಂದಿ ಸುರಕ್ಷಿತರಾಗಿದ್ದು, ಉಳಿದವರು ಇನ್ನೂ ಸಂಪರ್ಕಕ್ಕೆ ಸಿಕ್ಕಿಲ್ಲ.

ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದ (ಎಸ್‌ಇಒಸಿ) ಮಾಹಿತಿ ಪ್ರಕಾರ, ಸಂಕಷ್ಟದಲ್ಲಿದ್ದ 28 ಮಂದಿ ಪೈಕಿ 4 ಜನರು ಸುರಕ್ಷಿತವಾಗಿದ್ದು, ನೇಪಾಳಕ್ಕೆ ಪ್ರಯಾಣಿಸುತ್ತಿದ್ದಾರೆ. ಉಳಿದ 24 ಜನರನ್ನು ಪತ್ತೆಹಚ್ಚಲು ರಕ್ಷಣಾ ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ.
ಬೆಂಗಳೂರು 23, ಮೈಸೂರು 2, ಧಾರವಾಡ, ಉಡುಪಿ, ವಿಜಯನಗರದ ತಲಾ ಓರ್ವ ಪ್ರವಾಸಿಗರು ನೇಪಾಳದ ರಸುವಾ ಜಿಲ್ಲೆಯ ’ತಿಮುರೆ’ ಪ್ರದೇಶದಲ್ಲಿದ್ದರೆ, ಕೆಲವರು ಟಿಬೆಟ್‌ನ ’ದಾರ್ಚೆನ್’ ಪ್ರದೇಶದಲ್ಲಿದ್ದಾರೆ.
ಗೂಗಲ್ ಫಾರ್ಮ್, ಸಹಾಯವಾಣಿ ಮೂಲಕ ಸಿಲುಕಿಕೊಂಡಿರುವ ಕನ್ನಡಿಗರ ಸಂಪೂರ್ಣ ಪಟ್ಟಿ ತಯಾರಿಸಿ ಅವರ ರಕ್ಷಣಾ ಕಾರ್ಯಕ್ಕೆ ಕೇಂದ್ರದ ’ರ್ಯಾಪಿಡ್ ರೆಸ್ಪಾನ್ಸ್ ಸೆಲ್’ ಹಾಗೂ ಕಠ್ಮಂಡು/ ಬೀಜಿಂಗ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗಳಿಗೆ ರವಾನಿಸಲಾಗಿದೆ. ಪ್ರವಾಹದಲ್ಲಿ ಸಿಲುಕಿರುವ ಜನರನ್ನು ಸುರಕ್ಷಿತವಾಗಿ ಕರೆತರಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈಗಾಗಲೇ ತೀವ್ರ ರಕ್ಷಣಾ ಕಾರ್ಯಾಚರಣೆ ಕೈಗೊಂಡಿವೆ.
ನೇಪಾಳದಲ್ಲಿ ಸಿಲುಕಿರುವ ಕನ್ನಡಿಗರನ್ನು ಸುರಕ್ಷಿತವಾಗಿ ತವರಿಗೆ ಮರಳಲು ಅಗತ್ಯವಿರುವ ಎಲ್ಲ ನೆರವು ಒದಗಿಸಲಾಗುವುದು. ದೆಹಲಿಗೆ ತಲುಪುವ ಎಲ್ಲ ಕನ್ನಡಿಗರಿಗೆ ವಸತಿ ವ್ಯವಸ್ಥೆ ಹಾಗೂ ಅಲ್ಲಿಂದ ಬೆಂಗಳೂರಿಗೆ ಸುರಕ್ಷಿತವಾಗಿ ತೆರಳಲು ಅಗತ್ಯ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಿದ್ದೇನೆ.
ಡಿ.ಕೆ.ಶಿವಕುಮಾರ್, ಸಿಎಂ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net