ಶಿಕ್ಷಣದಿಂದ ಭಾರತ ದೇಶದ ಪ್ರಗತಿ ಸಾಧ್ಯ

ಹೊರ್ತಿಯ ಝಳಕಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ, ಕ್ರೀಡೆ, ಯೋಜನೆ ರೆಡ್ ಕ್ರಾಸ್, ಸ್ಕೌಟ್ಸ್ ಹಾಗೂ ಗೈಡ್ಸ್ ಮತ್ತು ವಿವಿಧ ಚಟುವಟಿಕೆಗಳ ಉದ್ಘಾಟನೆ ಸಮಾರಂಭವನ್ನು ಶಾಸಕ ಯಶವಂತರಾಯಗೌಡ ಪಾಟೀಲ ಉದ್ಘಾಟಿಸಿ ಮಾತನಾಡಿದರು. ಸಣ್ಣಪ್ಪ ತಳವಾರ, ವೇಕಾನಂದ ಉಘಡೆ ಇತರರರಿದ್ದರು.
ಹೊರ್ತಿಯ ಝಳಕಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ, ಕ್ರೀಡೆ, ಯೋಜನೆ ರೆಡ್ ಕ್ರಾಸ್, ಸ್ಕೌಟ್ಸ್ ಹಾಗೂ ಗೈಡ್ಸ್ ಮತ್ತು ವಿವಿಧ ಚಟುವಟಿಕೆಗಳ ಉದ್ಘಾಟನೆ ಸಮಾರಂಭವನ್ನು ಶಾಸಕ ಯಶವಂತರಾಯಗೌಡ ಪಾಟೀಲ ಉದ್ಘಾಟಿಸಿ ಮಾತನಾಡಿದರು. ಸಣ್ಣಪ್ಪ ತಳವಾರ, ವೇಕಾನಂದ ಉಘಡೆ ಇತರರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಯಶವಂತ ರಾಯಗೌಡ ಪಾಟೀಲ ಅಭಿಮತ
  • ಸಾಂಸ್ಕೃತಿಕ, ಕ್ರೀಡೆ, ಯೋಜನೆ ರೆಡ್ ಕ್ರಾಸ್, ಸ್ಕೌಟ್ಸ್ ಹಾಗೂ ಗೈಡ್ಸ್ ಮತ್ತು ವಿವಿಧ ಚಟುವಟಿಕೆಗಳ ಉದ್ಘಾಟನೆ

ಹೊರ್ತಿ: ಭಾರತ ಶೈಕ್ಷಣಿಕ ಕ್ಷೇತ್ರದಲ್ಲಿ ಶಿಕ್ಷಣವು ಹೆಚ್ಚು ಪ್ರಗತಿ ಪಥದಲ್ಲಿ ಸಾಗುತ್ತಿದೆ, ಆದ್ದರಿಂದ ಜೀವನ ಆಧಾರ ಮೇಲೆ ಉನ್ನತ ಶಿಕ್ಷಣ ಪಡೆಯಲು ಸಾಧ್ಯ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಝಳಕಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾಲೇಜಿನ 2026-27ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ, ಯೋಜನೆ ರೆಡ್ ಕ್ರಾಸ್, ಸ್ಕೌಟ್ಸ್ ಹಾಗೂ ಗೈಡ್ಸ್ ಮತ್ತು ವಿವಿಧ ಚಟುವಟಿಕೆಗಳ ಉದ್ಘಾಟನೆ ಹಾಗೂ ಬಿ.ಎ, ಬಿ.ಕಾಂ ಮತ್ತು ಬಿ.ಎಸ್ಸಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣದ ಜತೆ ಒಳ್ಳೆಯ ಸಂಸ್ಕಾರವನ್ನು ಕಲಿಯಬೇಕು. ತಂದೆ -ತಾಯಿ ಕಷ್ಟ ಪಟ್ಟು ಜೀವನವನ್ನು ಮುಡಿಪಾಗಿಟ್ಟು ನಿಮಗೆ ಶಿಕ್ಷಣ ಕೊಡಿಸುವ ಅವರನ್ನು ಗೌರವಿಸಬೇಕು ಎಂದು ಹೇಳಿದರು.
ಇಂಡಿ ಪ್ರಥಮ ದರ್ಜೆ ಕಾಲೇಜು ಸಹ ಪ್ರಾಧ್ಯಾಪಕ ರಮೇಶ ಆರ್.ಎಚ್ ಮಾತನಾಡಿ, ಕಾಲೇಜು ಜೀವನವು ಕೇವಲ ಪಠ್ಯಪುಸ್ತಕಗಳನ್ನು ಓದಿ ಪರೀಕ್ಷೆ ಬರೆಯುವ ಅವಧಿಯಲ್ಲ. ಅದು ನಮ್ಮ ಜ್ಞಾನ, ವ್ಯಕ್ತಿತ್ವ ವಿಕಸನ ನಾಯಕತ್ವ ಹಾಗೂ ಸಂವಹನ ಕೌಶಲ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸಿಕೊಳ್ಳುವ ಅತ್ಯಂತ ಮಹತ್ವದ ಹಂತವಾಗಿದೆ.
ಅದನ್ನರಿತು ಕಾಲೇಜು ಜೀವನದಲ್ಲಿ ನಿಮ್ಮ ಭವಿಷ್ಯದ ರೂವಾರಿ ನೀವೇ ನಿಮ್ಮ ಭವಿಷ್ಯದ ದಿಕ್ಕನ್ನು ನೀವೇ ನಿರ್ಧರಿಸಿ ರೂಪಿಸಿಕೊಳ್ಳಬೇಕು. ಪದವಿ ಪಡೆದರೆ ಸಾಕಾಗುವುದಿಲ್ಲ ನಮ್ಮಲ್ಲಿ ಜ್ಞಾನ ಕೌಶಲ, ಸಂವಹನ ಸಾಮರ್ಥ್ಯ, ತಾಂತ್ರಿಕ ಜ್ಞಾನ, ನಾಯಕತ್ವ ಗುಣ ಮತ್ತು ನೈತಿಕ ಮೌಲ್ಯಗಳು ಇರಬೇಕು ಎಂದರು.
ವಿದ್ಯಾರ್ಥಿಗಳು ಪ್ರತಿ ದಿನ ಕನಿಷ್ಠ ಒಂದು ಹೊಸ ವಿಷಯವನ್ನು ಕಲಿಯುವ ಅಭ್ಯಾಸ ಬೆಳಸಿಕೊಳ್ಳಬೇಕು, ಪುಸ್ತಕ ಓದಿ ತಂತ್ರಜ್ಞಾ ನವನ್ನು ತಿಳಿದುಕೊಳ್ಳಿ ನಿಮ್ಮ ಪಠ್ಯ ವಿಷಯದ ಜತೆ ಸಾಮಾನ್ಯ ಜ್ಞಾನವನ್ನು ಬೆಳೆಸಿಕೊಳ್ಳಿರಿ ಎಂದು ಸಲಹೆ ನೀಡಿದರು.
ಕಾಂಗ್ರೆಸ್ ಪಕ್ಷದ ಎಸ್‌ಟಿ ಘಟಕದ ಉಪಾಧ್ಯಕ್ಷ ಸಣ್ಣಪ್ಪ ತಳವಾರ, ಕಾಲೇಜಿನ ಪ್ರಾಂಶುಪಾಲ ವಿವೇಕಾನಂದ ಉಘಡೆ, ಶ್ರೀಮಂತ ಕಾಪಸೆ, ನಾರಾಯಣ ಜಹಾಗೀರದಾರ, ಎಂ.ಆರ್. ಪಾಟೀಲ, ಅಣ್ಣಪ್ಪ ತಳವಾರ, ಸಣ್ಣಪ್ಪ ತಳವಾರ, ಸಂತೋಷ ದಂಡ್ಯಾಗೋಳ, ಅನೀಲ ಬಿರಾದಾರ, ಅವಿನಾಶ್ ಟಿ, ಹುಸೇನಿ ಭಾಷಾ, ಬಸವರಾಜ, ಸಚಿನ ಮಂಚಲಕರ, ಗುರಣಗೌಡ ಪಾಟೀಲ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net