ಶಹಾಪುರ, ಹುಣಸಗಿ ಮತ್ತು ವಡಗೇರಾ ತಾಲೂಕುಗಳಲ್ಲಿ ಇದು ಹೆಚ್ಚಾಗಿದೆ. ಈ ಮೂರು ತಾಲೂಕುಗಳಲ್ಲಿಯೇ ೪೦ಕ್ಕೂ ಅಽಕ ಅನಽಕೃತ ವಸತಿ ನಿಲಯ ಮತ್ತು ಟ್ಯೂಟೋರಿಯಲ್‌ಗಳಿದ್ದು, ಇದನ್ನು ನಡೆಸುವ ಖಾಸಗಿ ಶಾಲೆಗಳ ಆಡಳಿತ ಮಂಡಳಿಯವರು ಇದೊಂದು ಹಣ ಮಾಡುವ ದಂಧೆ ಮಾಡಿಕೊಳ್ಳುವ ಮೂಲಕ ಹಗಲು ದರೋಡೆಗೆ ಮುಂದಾಗಿ ಪಾಲಕರನ್ನು ಆರ್ಥಿಕವಾಗಿ ಅವರನ್ನು ಕುಗ್ಗುವಂತೆ ಮಾಡುತ್ತಿರುವ ಆತಂಕಕಾರಿ ಬೆಳವಣಿಗೆ ಜಿಲ್ಲೆಯಲ್ಲಿ ವ್ಯವಸ್ಥಿತವಾಗಿ ಮುಂದುವರೆದಿದೆ ಎಂಬುವುದು ಕಣ್ಣಾರೆ ಕಾಣುತ್ತಿರುವ ಅನೇಕರ ಆರೋಪ ಕೂಡ ಕೇಳಿ ಬಂದಿವೆ. ಸರ್ಕಾರ ನಿಗದಿಪಡಿಸಿರುವುದಕ್ಕಿಂತ ಹೆಚ್ಚಿನ ಶುಲ್ಕ ಮಕ್ಕಳಿಂದ ವಸೂಲಿ ಮಾಡುತ್ತಿರುವ ಬಗ್ಗೆ ಅನೇಕ ದೂರುಗಳು ಕೂಡ ಬಂದಿವೆ.