2017ನೇ ಸಾಲಿನಲ್ಲಿದ್ದ ಒಟ್ಟು 1,26,170 ಪಿಎಸ್‌ಟಿ ಶಿಕ್ಷಕರ ವೃಂದದಲ್ಲಿ 1,946 ಶಾಲಾ ಮಾತೆಯರ ಹುದ್ದೆಗಳು, 849 ಪದವೀಧರ ಶಿಕ್ಷಕರು ಹಾಗೂ 2 ಚಿತ್ರಕಲಾ ಶಿಕ್ಷಕರ ಹುದ್ದೆಗಳನ್ನು ಮರು ಹಂಚಿಕೆ ಮಾಡಿ ಪಿಎಸ್‌ಟಿ ಶಿಕ್ಷಕರ ವೃಂದಕ್ಕೆ ಸೇರಿಸಲಾಗಿದೆ. 2022ರಲ್ಲಿ ಪಿಎಸ್‌ಟಿ ಶಿಕ್ಷಕರ ಒಟ್ಟು ವೃಂದ ಬಲವು 1,28,959 ಆಗಿತ್ತು. 2024ರಲ್ಲಿ ಬಲವು 1,20,707 ಆಗಿತ್ತು. ಇವುಗಳಲ್ಲಿ 6,117 ಪಿಎಸ್‌ಟಿ ಶಿಕ್ಷಕರ ಮೀಸಲು ಹುದ್ದೆಗಳಾಗಿರುತ್ತವೆ. ಈ ಹುದ್ದೆಗಳ ಹೆಸರಿನಲ್ಲಿ ಹೊಸ ಶಿಕ್ಷಕ ವೃಂದ ಸೃಷ್ಟಿಸಲಾಗಿದೆ.