18 ಅನಧಿಕೃತ ಲೈಸೆನ್ಸ್ ನೀಡಲು ಮತ್ತು ವಿದೇಶದಲ್ಲಿ ಹಣ ಹೂಡಿಕೆಗೆ ಸಹಾಯ ಮಾಡಿದ ಆರೋಪಕ್ಕೆ ಸಂಬಂಧ ಸತೀಶ್ ಜಾರಕಿಹೊಳಿ ನಿವಾಸದ ಮೇಲೆ ದಾಳಿ ನಡೆದಿದೆ. ಎರಡೂ ಪ್ರತ್ಯೇಕ ಕಾರಿನಲ್ಲಿ ಆಗಮಿಸಿರುವ ಅಧಿಕಾರಿಗಳು ಡಾಲರ್ಸ್ ಕಾಲೋನಿ ನಿವಾಸ, ಸರ್ಕಾರಿ ನಿವಾಸ, ಕಚೇರಿ ಹಾಗೂ ಬೆಳಗಾವಿಯಲ್ಲಿರುವ ನಿವಾಸ, ಕಚೇರಿ ಮೇಲೂ ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸಿದ್ದಾರೆ.
ಅಷ್ಟೇ ಅಲ್ಲದೇ ಮಹಾರಾಷ್ಟ್ರ, ಗೋವಾದಲ್ಲೂ ದಾಳಿ ನಡೆದಿದೆ. ಪುತ್ರ ಮತ್ತು ಯೂತ್ ಕಾಂಗ್ರೆಸ್ ನಾಯಕ ರಾಹುಲ್ ಜಾರಕಿಹೊಳಿ, ಪುತ್ರಿ ಮತ್ತು ಸಂಸದೆ ಪ್ರಿಯಾಂಕಾ ಜಾರಕಿಹೊಳಿಗೆ ಸಂಬಂಧಿಸಿದ ಸ್ಥಳಗಳ ಮೇಲೂ ದಾಳಿ ನಡೆದಿದೆ ಎನ್ನಲಾಗಿದೆ.