ಚಿಕ್ಕೋಡಿಲಿ ಅದ್ಧೂರಿ ಈದ್-ಮಿಲಾದ್ ಆಚರಣೆ
ವಿಜಯವಾಣಿ ಸುದ್ದಿಜಾಲ ಚಿಕ್ಕೋಡಿ:
ಪ್ರವಾದಿ ಮಹಮ್ಮದ್ ಪೈಗಂಬರ್ ಜನ್ಮದ ದಿನದ ಪ್ರಯುಕ್ತ ಪಟ್ಟಣದಲ್ಲಿ ಮುಸ್ಲಿಂಮರು ಈದ್-ಮಿಲಾದ್ ಹಬ್ಬವನ್ನು ಸಡಗರದಿಂದ ಆಚರಣೆ ಮಾಡಿದರು.
ಈದ್-ಮಿಲಾದ್ ಅಂಗವಾಗಿ ಪಟ್ಟಣದ ಮಸೀದಿಗಳು ,ದರ್ಗಾಗಳನ್ನು ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು. ಸಾಯಂಕಾಲ ಪಟ್ಟಣದ ಗಾಂಧಿ ಮಾರ್ಕೆಟ್‌ದಿಂದ ಆರಂಭವಾದ ಮೆರವಣಿಗೆ (ಜುಲೂಸ್) ಅಂಕಲಿಕೂಟ,ಡAಬಳಕೂಟ,ಹಳೆ ಪುರಸಭೆ ಕಾರ್ಯಾಲಯ ಮಾರ್ಗವಾಗಿ ಸಾಗಿ ಹೋಸಪೇಟ ಗಲ್ಲಿಯಲ್ಲಿ ಸಮಾರೋಪಗೊಂಡಿತು. ಈ ವೇಳೆ ನೂರಾರು ಯುವಕರು ಡಿಜೆ ಹಾಡಿಗೆ ಕುಣಿದು ಕುಪ್ಪಳಿಸಿದರು.