ಕುರಿ, ಕೋಳಿ, ಮೇಕೆ ಸಾಕಣೆಯಿಂದ ಆರ್ಥಿಕ ಸದೃಢತೆ

ಹುಣಸೂರು ತಾಲೂಕು ಕಚುವಿನಹಳ್ಳಿಯಲ್ಲಿ ಆಯೋಜಿಸಿದ್ದ ತರಬೇತಿ ಕಾರ್ಯಾಗಾರವನ್ನು ಕೆ.ಗಣಪತಿ ಕರಣಕುಪ್ಪೆ ಉದ್ಘಾಟಿಸಿದರು. ಡಾ.ರುದ್ರಪ್ಪ, ಕೆ.ರಾಜ, ಚಂದ್ರೇಶ್, ಉಮಾಶಂಕರ್ ಇತರರಿದ್ದಾರೆ.
ಹುಣಸೂರು ತಾಲೂಕು ಕಚುವಿನಹಳ್ಳಿಯಲ್ಲಿ ಆಯೋಜಿಸಿದ್ದ ತರಬೇತಿ ಕಾರ್ಯಾಗಾರವನ್ನು ಕೆ.ಗಣಪತಿ ಕರಣಕುಪ್ಪೆ ಉದ್ಘಾಟಿಸಿದರು. ಡಾ.ರುದ್ರಪ್ಪ, ಕೆ.ರಾಜ, ಚಂದ್ರೇಶ್, ಉಮಾಶಂಕರ್ ಇತರರಿದ್ದಾರೆ.
Published on

ಹುಣಸೂರು:

ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನ(ಎಸ್.ವಿ.ವೈ.ಎಂ.)ವಿವೇಕ ಗ್ರಾಮೀಣ ಜೀವನಾಧಾರ ಕೇಂದ್ರ, ಪಶುಸಂಗೋಪನೆ ಇಲಾಖೆ, ಹುಣಸೂರು ಹಾಗೂ ಟೈಟಾನ್ ಕಂಪನಿ ಲಿಮಿಟೆಡ್ ಇವರ ಸಹಯೋಗದಲ್ಲಿ ಕುರಿ ಮತ್ತು ಮೇಕೆ ಸಾಕಣಿಕೆಯ ಮೂರು ದಿನಗಳ ತರಬೇತಿ ಕಾರ್ಯಾಗಾರ ಸೋಮವಾರ ತಾಲೂಕಿನ ಕಚುವಿನಹಳ್ಳಿ ಗ್ರಾಮದ ಸಮುದಾಯ ಭವನದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಕೆ.ಗಣಪತಿ ಕರಣಕುಪ್ಪೆ, ಕೃಷಿಯ ಉಪ ಕಸುಬುಗಳಾದ ಕುರಿ, ಕೋಳಿ, ಮೇಕೆ ಮತ್ತು ಜಾನುವಾರುಗಳ ಸಾಕಣೆ ಅತಿಮುಖ್ಯವಾದುದಾಗಿದೆ. ಕುಟುಂಬದ ಆರ್ಥಿಕ ಸದೃಢತೆಗೆ ಇವು ಬಲ ನೀಡುತ್ತವೆ. ರಾಜ್ಯದಲ್ಲಿ ಈಗಾಗಲೇ ಹೈನುಗಾರಿಕೆ ಗ್ರಾಮೀನ ಜನರ ಜೀವನಾಡಿಯಾಗಿದ್ದು, ಕುರಿ ಮತ್ತು ಮೇಕೆ ಸಾಕಣೆ ಕೂಡ ರೈತರಿಗೆ ಲಾಭ ತಂದುಕೊಡುವ ಉದ್ಯೋಗವಾಗಿದೆ. ಕುರಿ ಸಾಕಣೆ ವೇಳೆ ಕುರಿ ಮತ್ತು ಮೇಕೆಗಳಿಗೆ ತಗಲಬಹುದಾದ ಹಲವಾರು ರೋಗರುಜಿನಗಳಿಗೆ ಪರಿಹಾರ ಪಡೆಯುವುದು, ಆರೋಗ್ಯ ರಕ್ಷಣೆ, ಮೇವು ನೀಡುವ ವಿಧಾನ ಮುಂತಾದವುಗಳ ಕುರಿತು ರೈತರಿಗೆ ಮಾಹಿತಿಯ ಅಗತ್ಯವಿದ್ದು, ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಆಯೋಜಿಸಿರುವ ತರಬೇತಿ ಕಾರ್ಯಾಗಾರ ಸ್ವಾಗತಾರ್ಹ ಎಂದರು.
ಪಶು ವೈದ್ಯಾಧಿಕಾರಿ ಡಾ.ರುದ್ರಪ್ಪ ಅವರು ಕುರಿ ಮತ್ತು ಮೇಕೆಗಳ ತಳಿಗಳು, ಸಾಕಣಿಕೆಯ ನಿರ್ವಹಣೆ, ಆಯ್ಕೆಗಳ ಬಗ್ಗೆ ಮಾಹಿತಿ ನೀಡಿದರು. ವಿವೇಕ ಗ್ರಾಮೀಣ ಕೇಂದ್ರದ ಸಹಾಯಕ ವ್ಯವಸ್ಥಾಪಕ ಕೆ. ರಾಜ ಮಾತನಾಡಿ, ತರಬೇತಿ ಕಾರ್ಯಾಗಾರವು ಆ.5ರವರೆಗೆ ಆಯೋಜನೆಗೊಂಡಿದೆ ಎಂದರು. ಕಾರ್ಯಕ್ರಮದಲ್ಲಿ ವಿವೇಕ ಗ್ರಾಮೀಣ ಜೀವನಧಾರ ಕೇಂದ್ರದ ತರಬೇತಿ ಸಂಯೋಜಕ ಚಂದ್ರೇಶ್, ಸಿಬ್ಬಂದಿ ಮಾದನಾಯಕ ಹಾಗೂ ಉಮಾಶಂಕರ್ ಹಾಗೂ ರೈತರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net